ಅಹಮದಾಬಾದ್:ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಪಂಜಾಬ್ ತಂಡ 34 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿಗೆ ಮುಖ್ಯ ಕಾರಣ ನಾಯಕ ಕೆ.ಎಲ್.ರಾಹುಲ್, ಕ್ರಿಸ್ ಗೇಲ್ ಹಾಗೂ ಹರ್ಪ್ರೀತ್ ಬ್ರಾರ್ ಅದ್ಭುತ ಪ್ರದರ್ಶನ.
"ಗೇಲ್ ಅವರ ವಯುಸ್ಸು ಹೆಚ್ಚಾದಂತೆ ಅದ್ಭುತವಾಗಿ ಆಡುತ್ತಿದ್ದಾರೆ. ಈ ವಯಸ್ಸಿನಲ್ಲೂ ಅವರ ಆಟ ನೋಡಿದರೆ ಖುಷಿ ಆಗುತ್ತೆ. ಈ ಪಂದ್ಯದ ಗೆಲುವಿನಲ್ಲಿ ಅವರ ಪ್ರಭಾವವೂ ದೊಡ್ಡದಾಗಿದೆ" ಎಂದು ರಾಹುಲ್ ಹೇಳಿದರು.
"ನಾನು ಅವರೊಂದಿಗೆ 7-8 ವರ್ಷಗಳ ಕಾಲ ಆಡಿದ್ದೇನೆ. ಅವರ ವಯಸ್ಸು ಹೆಚ್ಚಾದಂತೆ ಅವರ ಆಟ ಉತ್ತಮಗೊಳ್ಳುತ್ತಲೇ ಇದೆ. ಅವರು ಸಾಮಾನ್ಯವಾಗಿ ಓಪನಿಂಗ್ ಮಾಡೋದು. ಆದರೆ ತಂಡಕ್ಕಾಗಿ ಗೇಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆ ಮನುಷ್ಯ ಒಮ್ಮೆ ಕ್ರೀಸ್ ಕಚ್ಚಿದರೆ ಅವರನ್ನು ತಡೆಯಲು ಸಾಧ್ಯವಿಲ್ಲ" ಎಂದರು.
"ನಾವು ಇಂತಹ ಪಿಚ್ಗಾಗಿಯೇ ಬ್ರಾರ್ ಅವರನ್ನ ಸಿದ್ಧಪಡಿಸಿದ್ದೇವೆ. ಅವರ ಸ್ಪಿನ್ ಸ್ಪೆಲ್ ಚೆನ್ನಾಗಿದೆ. ನಾವು ಅಂದುಕೊಂಡಂತೆ ಇಂದಿನ ಪಂದ್ಯದಲ್ಲಿ ಪ್ರದರ್ಶನ ನೀಡಿದ್ದಾರೆ. ಹಾಗೇಯೆ ಬ್ಯಾಟಿಂಗ್ನಲ್ಲೂ ಕೊನೆಯಲ್ಲಿ ಚೆನ್ನಾಗಿ ಆಡಿದರು" ಎಂದರು.
"ಆರ್‌ಸಿಬಿ ವಿರುದ್ಧದ ಪಂದ್ಯವನ್ನ ಅನಿವಾರ್ಯವಾಗಿ ನಾವು ಗೆಲ್ಲಲೇಬೇಕಾಗಿತ್ತು. ಈ ಪಂದ್ಯದಲ್ಲಿ ಗೆದ್ದರೆ ಈ ಟೂರ್ನಮೆಂಟ್‌ನ ಮುಂದಿನ ಪಂದ್ಯದಲ್ಲಿ ಫೈಟ್ ಕೊಡಬಹುದು ಎಂದುಕೊಂಡಿದ್ದವು, ಅದು ಸಾಧ್ಯವಾಯಿತು" ಎಂದು ರಾಹುಲ್ ಹೇಳಿದರು.
"ತಂಡವನ್ನ ಉತ್ತಮ ಹಂತಕ್ಕೆ ತೆಗೆದುಕೊಂಡು ಹೋಗುವುದು ಮುಖ್ಯವಾಗಿತ್ತು. ಅದನ್ನೇ ಈ ಪಂದ್ಯದಲ್ಲಿ ನಾನು ಮಾಡಿದೆ. ಪ್ರತಿ ಪಂದ್ಯದಲ್ಲೂ ಇದನ್ನೇ ಮಾಡಲು ಪ್ರಯತ್ನಿಸುತ್ತೇನೆ. ಅವಕಾಶ ಸಿಕ್ಕಾಗ ನನ್ನ ಸಾಮರ್ಥ್ಯ ಮೀರಿ ತಂಡಕ್ಕೆ ಆಡಲು ಪ್ರಯತ್ನಿಸುತ್ತೇನೆ" ಎಂದರು.
ಓದಿ : ಐಪಿಎಲ್ : ಆರ್‌ಸಿಬಿ ಮಣಿಸಿದ ಪಂಜಾಬ್ ಕಿಂಗ್ಸ್