ಕರ್ನಾಟಕ

karnataka

ETV Bharat / sports

CSK vs KKR ಐಪಿಎಲ್​​ ಫೈನಲ್​​​: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಕೋಲ್ಕತ್ತಾ ನೈಟ್​ ರೈಡರ್ಸ್​​

ಇಂಡಿಯನ್​ ಪ್ರೀಮಿಯರ್ ಲೀಗ್​ನ ಫೈನಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸವಾಲು ಎದುರಿಸುತ್ತಿದೆ.

IPL 2021 Final
IPL 2021 Final

By

Published : Oct 15, 2021, 7:04 PM IST

Updated : Oct 15, 2021, 7:10 PM IST

ದುಬೈ: 14ನೇ ಆವೃತ್ತಿ ಇಂಡಿಯನ್​​​ ಪ್ರೀಮಿಯರ್​ ಲೀಗ್​ನ ಫೈನಲ್​​ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್​ ಕಿಂಗ್ಸ್​​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ಮುಖಾಮುಖಿಯಾಗಿವೆ. ಟಾಸ್​​ ಗೆದ್ದಿರುವ ಇಯಾನ್​ ಮಾರ್ಗನ್ ನೇತೃತ್ವದ ಕೆಕೆಆರ್​ ತಂಡ ಬೌಲಿಂಗ್​​​ ಆಯ್ದುಕೊಂಡಿದೆ.

ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದ್ದು, ಬಲಿಷ್ಠ ಆರ್​​ಸಿಬಿ ಹಾಗೂ ಡೆಲ್ಲಿ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಮಾರ್ಗನ್​ ಪಡೆ 2014ರ ನಂತರ ಫೈನಲ್​ಗೆ ಲಗ್ಗೆ ಹಾಕಿದೆ. ಇನ್ನು ದಾಖಲೆಯ 9ನೇ ಸಲ ಐಪಿಎಲ್​ ಫೈನಲ್​​ಗೆ ಲಗ್ಗೆ ಹಾಕಿರುವ ಧೋನಿ ಬಳಗ, ನಾಲ್ಕನೇ ಬಾರಿ ಚಾಂಪಿಯನ್​ ಆಗಿ ಹೊರಹೊಮ್ಮುವ ಇರಾದೆ ಇಟ್ಟುಕೊಂಡಿದೆ.

ಇಂಡಿಯನ್​​ ಪ್ರೀಮಿಯರ್​ ಲೀಗ್​ನಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 27 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಚೆನ್ನೈ 17 ಹಾಗೂ ಕೆಕೆಆರ್​​​​ 9 ಪಂದ್ಯಗಳಲ್ಲಿ ಜಯ ಸಾಧಿಸಿದೆ. ವಿಶೇಷವೆಂದರೆ ಈ ಹಿಂದೆ ಎರಡು ಸಲ ಫೈನಲ್​ಗೆ ಲಗ್ಗೆ ಹಾಕಿದ್ದ ಕೋಲ್ಕತ್ತಾ ಚಾಂಪಿಯನ್​ ಆಗಿ ಹೊರಹೊಮ್ಮಿದೆ. 2012ರಲ್ಲಿ ಗಂಭೀರ್​ ನಾಯಕತ್ವದ ಕೋಲ್ಕತ್ತಾ ಪಡೆ ಸಿಎಸ್​​​ಕೆಗೆ ಸೋಲುಣಿಸಿ ಚಾಂಪಿಯನ್​ ಆಗಿತ್ತು. ಇದೀಗ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಇರಾದೆಯಲ್ಲಿದೆ.

ಆಡುವ 11ರ ಬಳಗ ಇಂತಿದೆ

ಕೋಲ್ಕತ್ತಾ ನೈಟ್​ ರೈಡರ್ಸ್​:ಶುಬ್ಮನ್ ಗಿಲ್​​, ವೆಂಕಟೇಶ್​ ಅಯ್ಯರ್​,ರಾಹುಲ್ ತ್ರಿಪಾಠಿ,ನಿತೀಶ್ ರಾಣಾ,ಇಯಾನ್ ಮಾರ್ಗನ್​(ಕ್ಯಾಪ್ಟನ್​), ದಿನೇಶ್ ಕಾರ್ತಿಕ್​(ವಿ.ಕೀ), ಹಸನ್​, ಸುನಿಲ್ ನರೈನ್​, ಫಾರ್ಗೂಸನ್​, ವರುಣ್​​​ ಚಕ್ರವರ್ತಿ,ಮಾವಿ

ಚೆನ್ನೈ ಸೂಪರ್ ಕಿಂಗ್ಸ್​:ಡು ಪ್ಲೆಸಿಸ್​, ಋತುರಾಜ್ ಗಾಯಕ್ವಾಡ್, ಮೊಯಿನ್​​ ಅಲಿ, ರಾಯುಡು, ರಾಬಿನ್​ ಉತ್ತಪ್ಪ, ಎಂಎಸ್​ ಧೋನಿ(ವಿ,ಕೀ, ಕ್ಯಾಪ್ಟನ್​), ರವೀಂದ್ರ ಜಡೇಜಾ, ಬ್ರಾವೋ, ಶಾರ್ದೂಲ್​ ಠಾಕೂರ್​, ದೀಪಕ್​ ಚಹರ್​, ಹ್ಯಾಜಲ್​ವುಡ್​​​​

ಫೈನಲ್​ ಪಂದ್ಯಕ್ಕಾಗಿ ಉಭಯ ತಂಡಗಳು ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳದೇ ಕಣಕ್ಕಿಳಿದಿದ್ದು, ಪ್ರಶಸ್ತಿ ಗೆಲುವಿಗಾಗಿ ಮಹತ್ವದ ಯೋಜನೆ ರೂಪಿಸಿಕೊಂಡಿವೆ.

Last Updated : Oct 15, 2021, 7:10 PM IST

ABOUT THE AUTHOR

...view details