ದುಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 27 ರನ್ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಧೋನಿ ಬಳಗ ನಿಗದಿತ 20 ಓವರ್ಗಳಲ್ಲಿ 3ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಚೆನ್ನೈ ಪರ ಆರಂಭಿಕ ಆಟಗಾರರಾದ ಡು ಪ್ಲೆಸಿಸ್ 59 ಎಸೆತಗಳಲ್ಲಿ 86, ರುತುರಾಜ್ ಗಾಯಕ್ವಾಡ್ 32 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಈ ಜೋಡಿ 61 ರನ್ ಸೇರಿಸಿತು. ಬಳಿಕ ರಾಬಿನ್ ಉತ್ತಪ್ಪ ಸ್ಫೋಟಕ 31 ಹಾಗೂ ಮೋಯಿನ್ ಅಲಿ 37 ರನ್ ಬಾರಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಕೋಲ್ಕತ್ತಾ ಪರ ನರೈನ್ 26 ರನ್ಗೆ 2 ವಿಕೆಟ್ ಪಡೆದರೆ, ಅಯ್ಯರ್ ಹೊರತುಪಡಿಸಿ ಉಳಿದೆಲ್ಲ ಬೌಲರ್ಗಳು ದುಬಾರಿ ಎನಿಸಿದರು.
ಬಳಿಕ 193 ರನ್ಗಳ ಗುರಿ ಬೆನ್ನಟ್ಟಿದ ಕೆಕೆಆರ್ಗೆ ಆರಂಭಿಕರಾದ ವೆಂಕಟೇಶ್ ಅಯ್ಯರ್ (50) ಹಾಗೂ ಶುಬ್ಮನ್ ಗಿಲ್ (51) ತಲಾ ಅರ್ಧಶತಕ ಗಳಿಸಿ ಉತ್ತಮ ಭರವಸೆಯ ಆರಂಭ ನೀಡಿದರು. ಈ ಇಬ್ಬರು ಯುವ ಆಟಗಾರರು ಮೊದಲ ವಿಕೆಟ್ಗೆ 91 ರನ್ ಜೊತೆಯಾಟವಾಡಿದರು. ಆದರೆ ಇವರಿಬ್ಬರ ವಿಕೆಟ್ ಪತನದ ಬಳಿಕ ಕೋಲ್ಕತ್ತಾ ಕುಸಿತದ ಹಾದಿ ಹಿಡಿಯಿತು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ನಿತೀಶ್ ರಾಣಾ ಶೂನ್ಯಕ್ಕೆ ಔಟ್ ಆದರು. ಬಳಿಕ ಸುನೀಲ್ ನರೈನ್ ಕೂಡ 2 ರನ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಮೈದಾಕ್ಕಿಳಿದ ದಿನೇಶ್ ಕಾರ್ತಿಕ್ ಸಿಕ್ಸರ್ ಮೂಲಕ ಖಾತೆ ತೆರೆದರೂ ಕೂಡ 9 ರನ್ಗೆ ಅವರ ಆಟ ಅಂತ್ಯವಾಯಿತು.