ಕರ್ನಾಟಕ

karnataka

ETV Bharat / sports

ಐಪಿಎಲ್​​-2021ರಲ್ಲಿ ಆಡಲು ಇಂಗ್ಲೆಂಡ್​ ಆಟಗಾರರು ಲಭ್ಯ: ಬಿಸಿಸಿಐ - ಐಪಿಎಲ್​​-2021

ಐಪಿಎಲ್‌ನ ಎರಡನೇ ಭಾಗಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿಂದೆ ವಿದೇಶಿ ಆಟಗಾರರು ಅದರಲ್ಲೂ ಇಂಗ್ಲೆಂಡ್ ಆಟಗಾರರು ಆಡುವುದು ಅನುಮಾನ ಎನ್ನಲಾಗಿತ್ತು. ಆದರೆ ಈಗ ಬಿಸಿಸಿಐ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದೆ.

ಬಿಸಿಸಿಐನಿಂದ ಅಧಿಕೃತ ಮಾಹಿತಿ
ಬಿಸಿಸಿಐನಿಂದ ಅಧಿಕೃತ ಮಾಹಿತಿ

By

Published : Aug 3, 2021, 12:11 PM IST

ಹೈದರಾಬಾದ್​:ಕೋವಿಡ್​ ಕಾರಣದಿಂದ 2021ರ ಇಂಡಿಯನ್ ಪ್ರೀಮಿಯರ್ ಲೀಗ್(IPL) ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿತ್ತು. ಈಗ ಮುಂದಿನ ಪಂದ್ಯಗಳಿಗೆ ದಿನಾಂಕ ಪ್ರಕಟವಾಗಿದ್ದು, ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಪಂದ್ಯಗಳ ಪುನರಾರಂಭಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

ಈ ನಡುವೆ 14ನೇ ಆವೃತ್ತಿಯ ಐಪಿಎಲ್‌ನ ಎರಡನೇ ಭಾಗಕ್ಕೆ ದಿನಗಣನೆ ಆರಂಭವಾಗಿದ್ದು, ವಿದೇಶಿ ಆಟಗಾರರು ಅದರಲ್ಲೂ ಇಂಗ್ಲೆಂಡ್ ಆಟಗಾರರು ಆಡುವುದು ಅನುಮಾನ ಎನ್ನಲಾಗಿತ್ತು. ಆದರೆ ಈಗ ಬಿಸಿಸಿಐ ಸ್ಪಷ್ಟನೆ ನೀಡಿದ್ದು ಇಂಗ್ಲೆಂಡ್ ಆಟಗಾರರು ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ದೃಢಪಡಿಸಿದೆ.

ಲೀಗ್‌ನ ಉಳಿದ 31 ಪಂದ್ಯಗಳಲ್ಲಿ ನಮ್ಮ ಆಟಗಾರರು ಆಡುವುದಿಲ್ಲ ಎಂದು ಸ್ವತಃ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೇ ಸ್ಪಷ್ಟಪಡಿಸಿತ್ತು. ಈ ವೇಳೆ ದ್ವಿಪಕ್ಷೀಯ ಸರಣಿಗಳಿದ್ದ ಕಾರಣ ಐಪಿಎಲ್‌ನಿಂದ ಹೊರಗುಳಿಯಲು ತೀರ್ಮಾನಿಸಲಾಗಿತ್ತು. ಇದೀಗ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದ ಬಾಂಗ್ಲಾದೇಶ ವಿರುದ್ಧದ ಸರಣಿ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಕಾರಣ ಇಂಗ್ಲೆಂಡ್ ಆಟಗಾರರು ಯುಎಇಯತ್ತ ಪ್ರಯಾಣ ಬೆಳೆಸಲಿದ್ದಾರೆ.

ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ನಡುವಿನ ಸರಣಿ ಸೆಪ್ಟೆಂಬರ್ ಬದಲಿಗೆ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಇದರಿಂದಾಗಿ ಇಂಗ್ಲೆಂಡ್ ಆಟಗಾರರಾದ ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಲಿಯಾಮ್ ಲಿವಿಂಗ್‌ಸ್ಟೋನ್, ಇಯಾನ್ ಮಾರ್ಗನ್, ಸ್ಯಾಮ್ ಕರ‌ನ್, ಮೊಯಿನ್ ಅಲಿ, ಬ್ಯಾರಿಸ್ಟೋ ಹಾಗು ಟಾಮ್ ಕರ‌ನ್​​ ಲೀಗ್‌ನಲ್ಲಿ ಆಡುತ್ತಿದ್ದಾರೆ. ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಲೀಗ್ ಪುನರಾರಂಭಗೊಳ್ಳಲಿದೆ. ಬಾಂಗ್ಲಾದೇಶ ವಿರುದ್ಧದ ಸರಣಿ ಮುಂದೂಡಿಕೆಯಾಗಿದ್ದು, ಇಂಗ್ಲೆಂಡ್ ಆಟಗಾರರು ಐಪಿಎಲ್‌ಗೆ ಲಭ್ಯರಿದ್ದಾರೆ. ಈ ಕುರಿತು ಇಸಿಬಿ ಜತೆ ಮಾತನಾಡುತ್ತಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಭಾರತ ವಿರುದ್ಧದ ಟೆಸ್ಟ್ ಸರಣಿ ಸೆ.14ರಂದು ಮುಕ್ತಾಯಗೊಂಡ ಬೆನ್ನಲ್ಲೇ ಇಂಗ್ಲೆಂಡ್ ತಂಡ ಪ್ರವಾಸಿ ಬಾಂಗ್ಲಾದೇಶ ಎದುರು ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿ ಆಡಲಿದೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಮುಕ್ತಾಯಗೊಂಡ ಬೆನ್ನಲ್ಲೇ ಭಾರತದ ಐಪಿಎಲ್ ಆಟಗಾರರು ಯುಇಎಯತ್ತ ಪ್ರಯಾಣ ಬೆಳೆಸಲಿದ್ದಾರೆ. ಒಟ್ಟಾರೆಯಾಗಿ 31 ಪಂದ್ಯಗಳ ಪೈಕಿ, 13 ಪಂದ್ಯಗಳು ದುಬೈನಲ್ಲಿ, 10 ಪಂದ್ಯಗಳು ಶಾರ್ಜಾದಲ್ಲಿ ಮತ್ತು 8 ಅಬುಧಾಬಿಯಲ್ಲಿ ನಡೆಯಲಿವೆ.

ಇದನ್ನೂ ಓದಿ: ಶುರುವಾಯ್ತು IPL ಹವಾ.. ಮುಂದಿನ ವಾರಾಂತ್ಯಕ್ಕೆ ಸಿಎಸ್​ಕೆ ಯುಎಇಗೆ ಪ್ರಯಾಣ

ABOUT THE AUTHOR

...view details