ಕರ್ನಾಟಕ

karnataka

ETV Bharat / sports

'ಡಿವಿಲಿಯರ್ಸ್​ ಒಬ್ಬನೇ RCBಯ ಚಾಣಾಕ್ಷ ಆಟಗಾರ'... ಗೆಳೆಯನ ಗುಣಗಾನ ಮಾಡಿದ ಕೊಹ್ಲಿ - ಹರ್ಷಲ್ ಪಟೇಲ್

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಗೆಳೆಯ ಎಬಿ ಡಿವಿಲಿಯರ್ಸ್ ಆಟವನ್ನು ಗುಣಗಾನ ಮಾಡಿದ್ದು, ಎಬಿ ಬಹುಶಃ ತಂಡದಲ್ಲಿನ ಒಬ್ಬನೇ ಒಬ್ಬ ಬಹುಮುಖ ಪ್ರತಿಭೆಯ ಆಟಗಾರ. ನಿಧಾನಗತಿಯ ವಿಕೆಟ್‌ಗಳಲ್ಲಿ ಆತ ಏನು ಮಾಡುತ್ತಾನೋ ಬಹುತೇಕರಿಗೆ ಅದನ್ನು ಮಾಡಲು ಸಾಧ್ಯವಿಲ್ಲ. ಒಂದು ಕಠಿಣವಾದ ಸವಾಲನ್ನು ಬೆನ್ನಟ್ಟುವಾಗ ನಿಮ್ಮ ಹಿಂದೆ ಸಾಕಷ್ಟು ಅನುಭವ ಇರಬೇಕು. ಎದುರಾಳಿಗೆ ಆತನಲ್ಲಿನ ಅನುಭವದ ಬಗ್ಗೆ ಅರಿವಿದೆ ಎಂದರು.

Virat Kohli
Virat Kohli

By

Published : Apr 10, 2021, 4:49 AM IST

Updated : Apr 10, 2021, 9:09 AM IST

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (ಆರ್‌ಸಿಬಿ) ರೋಚಕ 2 ವಿಕೆಟ್​ಗಳಿಂದ ಗೆಲವು ಸಾಧಿಸಿದೆ.

ಮುಂಬೈ ನೀಡಿದ್ದ 160 ರನ್​ಗಳ ಮೊತ್ತದ ಬೆನ್ನು ಹತ್ತಿದ ಆರ್​ಸಿಬಿ, ತಂಡದ ಮೊತ್ತ 98/3 ​ಆದಾಗ ನಾಯಕ ವಿರಾಟ್​ ಕೊಹ್ಲಿ (33) ತಮ್ಮ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಕ್ರೀಸಿನಲ್ಲಿ ನೆಲೆಯೂರಿದ ಗ್ಲೆನ್ ಮ್ಯಾಕ್ಸ್‌ವೆಲ್ (39) ಕೂಡ ಔಟಾದರು. ಶಹಬಾಜ್ ಅಹ್ಮದ್ ಕೂಡ ಒಂದು ರನ್​ಗೆ ಮಾರ್ಕೊ ಜಾನ್ಸೆನ್​ಗೆ ವಿಕೆಟ್ ಒಪ್ಪಿಸಿದರು. ಅಂತಿಮ ಐದು ಓವರ್‌ಗಳಲ್ಲಿ ಆರ್‌ಸಿಬಿ ಗೆಲುವಿಗೆ 54 ರನ್‌ಗಳ ಅವಶ್ಯಕತೆಯಿತ್ತು. ಗೆಲುವಿನ ನಿರೀಕ್ಷೆಗಳನ್ನು ಹೊತ್ತ ಕಣದಲ್ಲಿ ನಿಂತಿದ್ದ ಎಬಿ ಡಿ ವಿಲಿಯರ್ಸ್​, 27 ಎಸೆತಗಳನ್ನು ಎದುರಿಸಿದ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 48 ರನ್ ಗಳಿಸಿದರು. ಆದರೆ ಗೆಲುವಿಗೆ 2 ರನ್ ಮಾತ್ರ ಬಾಕಿ ಉಳಿದಿರುವಾಗ ರನೌಟ್ ಆಗಿ ನಿರಾಸೆ ಮೂಡಿಸಿದರು. ಬಳಿಕ ಬಂದ ಹರ್ಷಲ್ ಪಟೇಲ್​ ಗೆಲುವಿನ ರನ್ ಬಾರಿಸಿದರು.

ಈ ಗೆಲುವಿನ ನಂತರ, ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಗೆಳೆಯ ಎಬಿ ಡಿವಿಲಿಯರ್ಸ್ ಆಟವನ್ನು ಗುಣಗಾನ ಮಾಡಿದ್ದು, ಎಬಿ ಬಹುಶಃ ತಂಡದಲ್ಲಿನ ಒಬ್ಬನೇ ಒಬ್ಬ ಬಹುಮುಖ ಪ್ರತಿಭೆಯ (ಚಾಣಾಕ್ಷ) ಆಟಗಾರ. ನಿಧಾನಗತಿಯ ವಿಕೆಟ್‌ಗಳಲ್ಲಿ ಆತ ಏನು ಮಾಡುತ್ತಾನೋ ಬಹುತೇಕರಿಗೂ ಅದನ್ನು ಮಾಡಲು ಸಾಧ್ಯವಿಲ್ಲ. ಒಂದು ಕಠಿಣವಾದ ಸವಾಲನ್ನು ಬೆನ್ನಟ್ಟುವಾಗ ನಿಮ್ಮಲ್ಲಿ ಸಾಕಷ್ಟು ಅನುಭವ ಇರಬೇಕು. ಎದುರಾಳಿಗೆ ಆತನಲ್ಲಿನ ಅನುಭವದ ಬಗ್ಗೆ ಅರಿವಿದೆ. ಅಷ್ಟು ಸುಲಭಕ್ಕೆ ಅವನನ್ನು ಹೊರ ಹಾಕಲು ಆಗುವುದಿಲ್ಲ ಎಂಬುದೂ ಅವರಿಗೆ ತಿಳಿದಿದೆ. ಆತನ ಕುರಿತು ಬೌಲರ್‌ಗಳು ಬೇರೆ-ಬೇರೆ ತರಹ ಯೋಚನೆ ಮಾಡುತ್ತಲ್ಲೇ ಇರುತ್ತಾರೆ ಎಂದರು.

ಹರ್ಷಲ್ ಆರ್​ಸಿಬಿಯ ಡೆತ್ ಓವರ್ ಬೌಲರ್​:

ಹರ್ಷಲ್ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರು ನಮ್ಮ ತಂಡ ಗೊತ್ತುಪಡಿಸಿದ ಡೆತ್ ಓವರ್​ ಬೌಲರ್ ಆಗಲಿದ್ದಾರೆ. ಓರ್ವ ನಾಯಕ ಏನನ್ನು ಬಯಸುತ್ತಾನೋ ಅದನ್ನು ತಮ್ಮ ಆಟದಲ್ಲಿ ಬಹಳ ವಿಶ್ವಾಸದಿಂದ ಪ್ರದರ್ಶನ ನೀಡುತ್ತಾರೆ. ಟಿ 20 ಕ್ರಿಕೆಟ್‌ನಲ್ಲಿ ಬೌಲರ್‌ನಿಂದ ನೀವು ಕೇಳುವುದು ಇದನ್ನೇ. ಅವರು ಪಡೆದ ವಿಕೆಟ್‌ಗಳು ಸಾಧಾರಣ ವಿಕೆಟ್‌ಗಳಲ್ಲ ಎಂದು ಕೊಹ್ಲಿ ಹೇಳಿದರು.

ಆರ್​ಸಿಬಿಯ ಹರ್ಷಲ್ ಪಟೇಲ್ ಐದು ವಿಕೆಟ್ ಪಡೆದಿದ್ದು, ನಾಲ್ಕು ಓವರ್‌ಗಳ ಕೋಟಾದಿಂದ ಕೇವಲ 27 ರನ್ ನೀಡಿದರು. ಇದರಿಂದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 159/9ಕ್ಕೆ ಕಟ್ಟಿಹಾಕಲು ಸಾಧ್ಯವಾಯಿತು. ಗೆಲುವಿಗೆ ಬೇಕಿದ್ದ 160 ಬೆನ್ನಟ್ಟಿದ ಆರ್‌ಸಿಬಿ ಎಬಿ ಡಿವಿಲಿಯರ್ಸ್‌ ಅವರ 48 ರನ್‌ಗಳ ಕ್ವಿಕ್-ಫೈರ್ ನೆರವಿನಿಂದ ಪಂದ್ಯದ ಅಂತಿಮ ಎಸೆತದಲ್ಲಿ ಗೆಲುವು ದಾಖಲಿಸಿತು.

Last Updated : Apr 10, 2021, 9:09 AM IST

ABOUT THE AUTHOR

...view details