ನವದೆಹಲಿ: ಗುಜರಾತ್ ಮತ್ತು ದೆಹಲಿ ನಡುವಿನ ಪಂದ್ಯವನ್ನು ನೋಡಿದವರು ಸಾಯಿ ಸುದರ್ಶನ್ ಅವರ ಪ್ರದರ್ಶನಕ್ಕೆ ಬೆರಗಾಗಿರುತ್ತಾರೆ. ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್ 15 ರನ್ ಗಳಿಸಿ ಔಟಾದರು.. ಮತ್ತೊಬ್ಬ ಓಪನರ್ ಸಹಾ ಕೂಡಾ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.. ನಾಯಕ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ವೈಫಲ್ಯ ಕಂಡರು.. ಆದರೆ ಮೈದಾನದಲ್ಲಿ ಮಿಂಚಿದ್ದ ಮಾತ್ರ ತಮಿಳುನಾಡಿನ ಹುಡುಗ ಸಾಯಿ ಸುದರ್ಶನ್..
ಹೌದು, ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ 162 ರನ್ಗಳನ್ನು ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡದ ಆರಂಭವು ಅಷ್ಟೇನು ಉತ್ತಮವಾಗಿರಲಿಲ್ಲ. ಆರಂಭಿಕರಾದ ವೃದ್ಧಿಮಾನ್ ಸಹಾ (14) ಮತ್ತು ಶುಭಮನ್ ಗಿಲ್ (14) ಅವರನ್ನು ಅನ್ರಿಚ್ ನಾರ್ಟ್ಜ್ ಬೋಲ್ಡ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು.
ನಾಯಕ ಹಾರ್ದಿಕ್ ಪ್ಯಾಂಡ್ (5) ಕೂಡ ಖಲೀಲ್ ಅಹ್ಮದ್ ಬೌಲಿಂಗ್ನಲ್ಲಿ ಬೇಗನೇ ವಿಕೆಟ್ ಒಪ್ಪಿಸಿದರು. ಇದರ ನಡುವೆ ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಸಾಯಿ ಸುದರ್ಶನ್ ಜವಾಬ್ದಾರಿಯುತ ಮತ್ತು ತಾಳ್ಮೆಯ ಆಟ ಪ್ರದರ್ಶಿಸಿದರು. ಈ ತಮಿಳುನಾಡಿನ ಹುಡುಗನಿಂದಾಗಿ ಗುಜರಾತ್ ಗೆಲುವಿನ ನಗೆ ಬೀರಿತು. ಕಳೆದ ಪಂದ್ಯದಲ್ಲಿ ಸುದರ್ಶನ್ ಇಂಪ್ಯಾಕ್ಟ್ ಆಟಗಾರರಾಗಿ ಬ್ಯಾಟಿಂಗ್ಗೆ ಬಂದರು. ಚೆನ್ನೈ ವಿರುದ್ಧ 179 ರನ್‌ಗಳ ಬೆನ್ನತ್ತಿದ್ದ ಅವರು 22 ರನ್ ಗಳಿಸಿದ್ದರು. ಅಂತಿಮವಾಗಿ ತಂಡದಲ್ಲಿರುವವರೆಗೂ ಆತ್ಮವಿಶ್ವಾಸದಿಂದ ಆಡಿದ ಈ ಹುಡುಗನನ್ನು ಈ ಬಾರಿ ಗುಜರಾತ್ ಹನ್ನೊಂದರ ಬಳಗದಲ್ಲಿ ಆಯ್ಕೆ ಮಾಡಿಕೊಂಡಿತ್ತು.
ಈ ಪಂದ್ಯದಲ್ಲಿ ಸಾಯಿ ಸುದರ್ಶನ್ ಉತ್ತಮವಾಗಿಯೇ ಬ್ಯಾಟ್ ಬೀಸಿದರು. ಅವರು ಎನ್ರಿಚ್ ನಾರ್ಟ್ಜ್ ಮತ್ತು ಕುಲದೀಪ್ ಅವರಂತಹ ವಿಶ್ವ ದರ್ಜೆಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಯಾವುದೇ ಹಂತದಲ್ಲೂ ಹಿಂಜರಿಕೆಯಿಲ್ಲದೇ ಜವಾಬ್ದಾರಿಯುತವಾಗಿ ಆಟವಾಡಿದರು. ತಮಿಳುನಾಡಿನ ಪರವಾಗಿ ಸುದರ್ಶನ್ ದೇಶವಾಸಿಗಳ ಮನ ಗೆದ್ದರು. ಕೇವಲ 48 ಎಸೆತಗಳಲ್ಲಿ 62 ರನ್ಗಳನ್ನು ಕಲೆ ಹಾಕಿದರು. ಇವರಿಗೆ ವಿಜಯ್ ಶಂಕರ್ ಉತ್ತಮ ಸಾಥ್ ನೀಡಿದರು.
ಸಾಯಿ ಸುದರ್ಶನ್ ಮತ್ತು ವಿಜಯ್ ಶಂಕರ್ ಜೋಡಿ ನಾಲ್ಕನೇ ವಿಕೆಟ್ಗೆ 50 ರನ್‌ಗಳ ಜೊತೆಯಾಟ ನೀಡಿತು. ಆದರೆ, 29 ರನ್ ಗಳಿಸಿ ಆಡುತ್ತಿದ್ದ ಶಂಕರ್ ಅವರನ್ನು ಮಿಚೆಲ್ ಮಾರ್ಷ್ ಎಲ್ಬಿ ಬಲೆಗೆ ಕಡೆವಿದರು. ನಂತರ ಬಂದ ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೇವಲ 16 ಬಾಲ್ಗಳಲ್ಲಿ ತಲಾ ಎರಡು ಬೌಂಡರಿ ಮತ್ತು ಸಿಕ್ಸರ್ಗಳ ಸಮೇತ ಅಜೇಯ 31 ಬಾರಿಸಿದರು. ಸಾಯಿ 48 ಎಸತೆಗಳಲ್ಲಿ ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳೊಂದಿಗೆ 62* ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಿಲ್ಲರ್ ಮತ್ತು ಸಾಯಿ ಸುದರ್ಶನ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಕಳೆದ ಸೀಸನ್ನಲ್ಲಿ ರಣಜಿಗೆ ಪದಾರ್ಪಣೆ ಮಾಡಿದ ಅವರು 7 ಪಂದ್ಯಗಳಲ್ಲಿ 572 ರನ್ ಗಳಿಸಿದ್ದರು. ದೇಶೀಯ ಏಕದಿನ ಹಾಗೂ ಟಿ20 ಪಂದ್ಯಗಳಲ್ಲೂ ಉತ್ತಮ ದಾಖಲೆ ಹೊಂದಿದ್ದಾರೆ. ಹರಾಜಿನಲ್ಲಿ ಗುಜರಾತ್ ಕನಿಷ್ಠ 20 ಲಕ್ಷ ರೂಪಾಯಿಗೆ ಸುದರ್ಶನ್ ಅವರನ್ನು ಖರೀದಿಸಿದ್ದು ಗಮನಾರ್ಹ..
ಓದಿ:IPL 2023 DC vs GT: ಬೌಲಿಂಗ್, ಬ್ಯಾಟಿಂಗ್ನಲ್ಲಿ ಗುಜರಾತ್ ಮಿಂಚು: ಪ್ಯಾಂಡ ಪಡೆಗೆ ಸತತ 2ನೇ ಗೆಲುವು