ಬೆಂಗಳೂರು:ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಹೆಸರಿನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಕ್ಯಾಚ್ ನಂತರ ಕಾರ್ತಿಕ್ ಟಿ20 ಕ್ರಿಕೆಟ್ನಲ್ಲಿ 200 ಕ್ಯಾಚ್ಗಳನ್ನು ಪಡೆದ ಮೂರನೇ ವಿಕೆಟ್ ಕೀಪರ್ ಆಗಿ ಅವರು ಹೊರಹೊಮ್ಮಿದ್ದಾರೆ. ಕ್ವಿಂಟನ್ ಡಿ ಕಾಕ್ ಮತ್ತು ಎಂ.ಎಸ್.ಧೋನಿ ನಂತರ ಈ ಸಾಧನೆ ಮಾಡಿದ ಮೂರನೇ ವಿಕೆಟ್ ಕೀಪರ್ ಇದೀಗ ದಿನೇಶ್ ಕಾರ್ತಿಕ್.
ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಮತ್ತು ಬೆಂಗಳೂರು ನಡುವಿನ ಪಂದ್ಯ ರೋಚಕತೆ ಉಂಟು ಮಾಡಿತ್ತು. ಟಾಸ್ ಗೆದ್ದ ಬೆಂಗಳೂರು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ಆರಂಭಿಕ ಆಘಾತ ಎದುರಿಸಿತು. ಬಳಿಕ ತಿಲಕ್ ವರ್ಮಾ ಅಜೇಯ 84 ರನ್ ಗಳಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತಂಡ ಸ್ಕೋರ್ ಬೋರ್ಡ್ನಲ್ಲಿ ಏರಿಕೆ ಕಂಡಿತು. ನಿಗದಿತ 20 ಓವರ್ಗಳಲ್ಲಿ ರೋಹಿತ್ ಶರ್ಮಾ ಟೀಂ 7 ವಿಕೆಟ್ಗಳ ಕಳೆದುಕೊಂಡು 171 ರನ್ ಗಳಿಸಿತು.
ಮುಂಬೈ ನೀಡಿದ ಮೊತ್ತವನ್ನು ಬೆನ್ನತ್ತಿದ್ದ ಆರ್ಸಿಬಿ ಆರಂಭಿಕರು ಭರ್ಜರಿ ಹೊಡೆತಗಳಿಗೆ ಮುಂದಾದರು. ನಾಯಕ ಡುಪ್ಲೆಸಿಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಜೋಡಿ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಂಬೈ ನೀಡಿದ 171 ರನ್ಗಳ ಗುರಿಯನ್ನು ಆರ್ಸಿಬಿ ತಂಡ 16.2 ಓವರ್ನಲ್ಲೇ ತಲುಪಿ ಮೂಲಕ ಭರ್ಜರಿ ವಿಜಯ ಸಾಧಿಸಿತು.
ಟಿ20ಯಲ್ಲಿ 200 ಕ್ಯಾಚ್ ಸಾಧಕ ವಿಕೆಟ್ಕೀಪರ್ಗಳು:
* ಕ್ವಿಂಟನ್ ಡಿ ಕಾಕ್ (207*)