ಮುಂಬೈ: ಶಿಮ್ರಾನ್ ಹೆಟ್ಮಾಯರ್ ಅವರ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತನ್ನ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ಗಳಿಸಿತ್ತು. ಕೆ.ಎಲ್ ರಾಹುಲ್ ಪಡೆ ಆರಂಭದಿಂದಲೂ ಕುಸಿತ ಕಂಡಿದ್ರೂ ಸಹ ಜಯ ಕನಸು ಕಂಡಿತ್ತು. ಆದ್ರೆ ಕೊನೆಯ ಓವರ್ನಲ್ಲಿ ಲಖನೌ ತಂಡಕ್ಕೆ ವಿಜಯಲಕ್ಷ್ಮಿ ಒಲಿಯಲಿಲ್ಲ.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ಟಾಸ್ ಸೋತ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಇಳಿದು ನಿರೀಕ್ಷಿತ ಆರಂಭ ಕಾಣಲಿಲ್ಲ. 10 ಓವರ್ಗಳ ಒಳಗೆ ಇನ್ಫಾರ್ಮ್ ಬ್ಯಾಟರ್ ಜಾಸ್ ಬಟ್ಲರ್ 13 ರನ್, ಆರಂಭಿಕನಾಗಿ ಬಡ್ತಿ ಪಡೆದಿದ್ದ ದೇವದತ್ ಪಡಿಕ್ಕಲ್ 29 ರನ್, ನಾಯಕ ಸಂಜು ಸಾಮ್ಸನ್ 13 ರನ್, ವ್ಯಾನ್ ಡರ್ ಡಸೆನ್ 4 ರನ್ ಗಳಿಸಿ ಪೆವಿಲಿಯನ್ ಹಾದಿ ತುಳಿಯುವ ಮೂಲಕ ತಂಡ ಆಘಾತಕ್ಕೆ ಸಿಲುಕಿತ್ತು.
67ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಹೆಟ್ಮಾಯರ್ ಮತ್ತು ಅಶ್ವಿನ್( 23 ಎಸೆತಗಳಲ್ಲಿ28) 65 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ಹೆಟ್ಮಾಯರ್ 36 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 1 ಬೌಂಡರಿ ಸಹಿತ ಅಜೇಯ 59 ರನ್ಗಳಿಸಿದರು.
ಓದಿ:ಐಪಿಎಲ್ ಇತಿಹಾಸದಲ್ಲಿ 'ರಿಟೈರ್ಡ್ ಔಟ್' ಆದ ಮೊದಲಿಗ ಅಶ್ವಿನ್!
ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ಗಳಿಸಿತ್ತು. ಲಖನೌ ಸೂಪರ್ ಜೈಂಟ್ಸ್ ಪರ ಕೆ ಗೌತಮ್ 30ಕ್ಕೆ2, ಜೇಸನ್ ಹೋಲ್ಡರ್ 50ಕ್ಕೆ2 ಮತ್ತು ಆವೇಶ್ ಖಾನ್ 31ಕ್ಕೆ1 ವಿಕೆಟ್ ಪಡೆದುಕೊಂಡರು.
ಲಖನೌ ಸೂಪರ್ ಜೈಂಟ್ಸ್ ಇನ್ನಿಂಗ್ಸ್: ಆರ್ಆರ್ ನೀಡಿದ ಗುರಿಯನ್ನು ಬೆನ್ನತ್ತಿದ್ದ ಲಖನೌ ತಂಡಕ್ಕೆ ಆರಂಭದಿಂದಲೇ ಆಘಾತ ಎದುರಿಸಿತು. ಕೇವಲ 10 ಓವರ್ಗಳಲ್ಲಿ ತನ್ನ ನಾಲ್ಕು ವಿಕೆಟ್ ಕಳೆದುಕೊಂಡು 52 ರನ್ಗಳನ್ನು ಕಲೆ ಹಾಕುವ ಮೂಲಕ ತೀವ್ರ ಸಂಕಟಕ್ಕೆ ಸಿಲುಕಿತು.
ಗೆಲುವಿನ ಕನಸು ಮೂಡಿಸಿದ್ದ ಸ್ಟೋನಿಸ್:ನಿನ್ನೆ ನಡೆದ ಪಂದ್ಯದಲ್ಲಿ ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮಾರ್ಕಸ್ ಸ್ಟೋನಿಸ್ ಮಾತ್ರ ಭರ್ಜರಿ ಆಟ ಪ್ರದರ್ಶಿಸಿದರು. ಅವರ ಆಟದಿಂದಾಗಿ ತಂಡ ಗೆಲುವಿನ ಕನಸು ಕಂಡಿತ್ತು. ಆದ್ರೆ ಕೊನೆಯಲ್ಲಿ ಎಡವಿದ ಸ್ಟೋನಿಸ್ ತಮ್ಮ ತಂಡಕ್ಕೆ ನಿರಾಶೆ ಮೂಡಿಸಿದರು. ಮಾರ್ಕಸ್ ಸ್ಟೋನಿಸ್ ಕೇವಲ 17 ಎಸೆತದಲ್ಲಿ 4 ಸಿಕ್ಸ್, 2 ಬೌಂಡರಿ ನೆರವಿನಿಂದ 38 ರನ್ ಕಲೆಹಾಕಿ ಮಿಂಚಿದ್ದರು.
ಆರ್ಆರ್ಗೆ ರೋಚಕ ಗೆಲುವು:ಸ್ಟೋನಿಸ್ ಆಟದಿಂದ ಆರ್ಆರ್ ತಂಡಕ್ಕೆ ಸೋಲಿನ ಭಯ ಕಾಡುತ್ತಿತ್ತು. ಕೊನೆ ಓವರ್ನಲ್ಲಿ ಲಖನೌ ತಂಡಕ್ಕೆ ಗೆಲ್ಲಲು 14 ರನ್ಗಳು ಬೇಕಾಗಿದ್ದವು. ಮೊದಲನೇ ಎಸೆತದಲ್ಲಿ ಅವೇಶ್ ಖಾನ್ ಒಂದು ರನ್ ತೆಗೆದು ಸ್ಟೋನಿಸ್ಗೆ ಬ್ಯಾಟ್ ಮಾಡಲು ಅವಕಾಶ ನೀಡಿದರು. ಆದ್ರೆ ಸ್ಟೋನಿಸ್ ಸತತ ಮೂರು ಎಸೆತಗಳನ್ನು ಡಾಟ್ ಮಾಡಿದರು. ಕೊನೆಯ ಎರಡು ಎಸೆತದಲ್ಲಿ ಬೌಂಡರಿ ಮತ್ತು ಸಿಕ್ಸ್ ಬಾರಿಸುವ ಮೂಲಕ ಮೂರು ರನ್‌ಗಳ ಅಂತರಿಂದ ಸೋಲು ಕಂಡರು. ಕೊನೆಯ ಓವರ್ನಲ್ಲಿ ಲಖನೌ ವಿರುದ್ಧ ಆರ್ಆರ್ಗೆ ಮೂರು ರನ್‌ಗಳ ರೋಚಕ ಜಯ ಸಾಧಿಸಿತು. ಲಖನೌ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡು 162 ರನ್ಗಳನ್ನು ಕಲೆ ಹಾಕುವ ಮೂಲಕ ಸೋಲನುಭವಿಸಿತು.
ಓದಿ:ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ 44 ರನ್‌ಗಳ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್
ಲಖನೌ ಸೂಪರ್ ಜೈಂಟ್ಸ್ ಪರ ನಾಯಕ ಕೆ.ಎಲ್.ರಾಹುಲ್ ಗೋಲ್ಡನ್ ಡೆಕ್ಔಟ್, ಕ್ವಿಂಟನ್ ಡಿ ಕಾಕ್ 39 ರನ್, ಮಾರ್ಕಸ್ ಸ್ಟೋನಿಸ್ 38 ರನ್, ದೀಪಕ್ ಹೂಡಾ 25 ರನ್, ಆಯುಷ್ ಬಡೋನಿ 5 ರನ್, ಕೃನಾಲ್ ಪಾಂಡ್ಯ 22 ರನ್, ಜೇಸನ್ ಹೋಲ್ಡರ್ 8 ರನ್, ಕೃಷ್ಣಪ್ಪ ಗೌತಮ್ ಗೋಲ್ಡನ್ ಡೆಕ್ಔಟ್, ದುಷ್ಮಂತ ಚಮೀರಾ 13, ಅವೇಶ್ ಖಾನ್ 7 ಗಳಿಸಿ ಅಜೇರಾಗಿ ಉಳಿದರು. ಆರ್ಆರ್ ಪರ ಯುಜ್ವೇಂದ್ರ ಚಾಹಲ್ 4 ವಿಕೆಟ್ ಪಡೆದು ಮಿಂಚಿದ್ರೆ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರು. ಪ್ರಸಿದ್ಧ್ ಕೃಷ್ಣ ಮತ್ತು ಕುಲದೀಪ್ ಸೇನ್ ತಲಾ ಒಂದೊಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಆಸರೆಯಾದರು.
ಇಂದು ಸಂಜೆ 7.30ಕ್ಕೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ ಸೆಣಸಾಟ ನಡೆಸಲಿದೆ.