ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ನಿನ್ನೆ ಗುಂಡಿನ ದಾಳಿ ನಡೆದಿದೆ. ಈ ಘಟನೆಯ ನಂತರ ಮತ್ತೊಮ್ಮೆ ಕ್ರಿಕೆಟ್ ವಲಯ ಪಾಕಿಸ್ತಾನಕ್ಕೆ ಹೋಗಲು ಹಿಂದೇಟು ಹಾಕುತ್ತಿದೆ. 2023ರ ಏಷ್ಯಾ ಕಪ್ ಅನ್ನು ಬಹಿಷ್ಕರಿಸುವಂತೆ ಭಾರತದಲ್ಲಿ ಟ್ವಿಟರ್ ಆಂದೋಲನವೂ ಆರಂಭವಾಗಿದೆ.
ಇದೇ ವೇಳೆ, ಇಮ್ರಾನ್ ಖಾನ್ ಮೇಲಿನ ದಾಳಿಯಿಂದ ಉಂಟಾದ ಪರಿಣಾಮವನ್ನು ಪರಿಶೀಲಿಸಿದ ನಂತರ ಐರ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಟಿ20 ಪಂದ್ಯಗಳಿಗೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ.