ಕರ್ನಾಟಕ

karnataka

ETV Bharat / sports

ಲಂಕಾ ಸ್ಪಿನ್ನರ್​ ದಾಳಿಗೆ ಭಾರತ ತತ್ತರ... ಫೈನಲ್​ ಪಂದ್ಯ ಗೆಲುವಿಗೆ 82ರನ್​​ ಟಾರ್ಗೆಟ್​ - ಟೀಂ ಇಂಡಿಯಾ

ಫೈನಲ್​ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿರುವ ಟೀಂ ಇಂಡಿಯಾ ಎದುರಾಳಿ ತಂಡಕ್ಕೆ ಕೇವಲ 82ರನ್​ಗಳ ಗೆಲುವಿನ ಗುರಿ ನೀಡಿದೆ.

IND vs SL 3rd T20
IND vs SL 3rd T20

By

Published : Jul 29, 2021, 9:47 PM IST

Updated : Jul 29, 2021, 10:07 PM IST

ಕೊಲಂಬೊ:ಭಾರತ-ಶ್ರೀಲಂಕಾ ನಡುವಿನ ಅಂತಿಮ ಟಿ-20 ಪಂದ್ಯದಲ್ಲಿ ಸಿಂಹಳೀಯರ ಬೌಲಿಂಗ್​ ದಾಳಿಗೆ ಸಂಪೂರ್ಣವಾಗಿ ತತ್ತರಿಸಿ ಹೋಗಿರುವ ಟೀಂ ಇಂಡಿಯಾ 20 ಓವರ್​ಗಳಲ್ಲಿ 8ವಿಕೆಟ್​ನಷ್ಟಕ್ಕೆ ಕೇವಲ 81 ರನ್​ಗಳಿಕೆ ಮಾಡಿದೆ. ಈ ಮೂಲಕ ಲಂಕಾ ಗೆಲುವಿಗೆ 82ರನ್​ಗಳ ಸಾಧಾರಣ ಟಾರ್ಗೆಟ್​ ನೀಡಿದೆ.

ಲಂಕಾ ಪರ 4 ಓವರ್​ ಎಸೆದ ಹಸರಂಗ 9ರನ್​ ನೀಡಿ ಪ್ರಮುಖ 4 ವಿಕೆಟ್​ ಪಡೆದುಕೊಂಡು ಟೀಂ ಇಂಡಿಯಾಗೆ ಮಾರಕವಾದರು.

ಲಂಕಾ ಆಟಗಾರರ ಸಂಭ್ರಮ

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​​ ಆಯ್ದುಕೊಂಡ ಟೀಂ ಇಂಡಿಯಾ ಆರಂಭದ 4 ಓವರ್​ಗಳಲ್ಲೇ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡಿತು. ಆರಂಭಿಕ ಓವರ್​ನಲ್ಲಿ ಶಿಖರ್ ಧವನ್ ​(0) ವಿಕೆಟ್ ಒಪ್ಪಿಸಿದರೆ, ಇವರ ಬೆನ್ನಲ್ಲೇ ಗಾಯ್ಕವಾಡ(14), ಪಡಿಕ್ಕಲ್​(9) ಹಾಗೂ ಸಂಜು ಸ್ಯಾಮನ್ಸ್​​​(0) ವಿಕೆಟ್​ ಒಪ್ಪಿಸಿದರು.ಒಂದೇ ಓವರ್​ನಲ್ಲಿ ಎರಡು ವಿಕೆಟ್​ ಪಡೆದುಕೊಳ್ಳುವ ಮೂಲಕ ಹಸರಂಗ ತಂಡಕ್ಕೆ ಮೆಲುಗೈ ತಂದುಕೊಟ್ಟರು. ಹಸರಂಗ ಎಸೆದ 4ನೇ ಓವರ್​ನಲ್ಲಿ ಗಾಯ್ಕವಾಡ ಹಾಗೂ ಸಂಜು ಸ್ಯಾಮನ್ಸ್​ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಿತೀಶ್ ರಾಣಾ ಕೂಡ 6ರನ್​ಗಳಿಕೆ ಮಾಡಿ ಔಟ್​ ಆದರು.

4 ವಿಕೆಟ್​ ಪಡೆದು ಮಿಂಚಿದ ಹಸರಂಗ

ಇದಾದ ಬಳಿಕ ಒಂದಾದ ಭುವನೇಶ್ವರ್ ಕುಮಾರ್(16)​​ ಹಾಗೂ ಕುಲ್ದೀಪ್​ ಯಾದವ್​​(23)ರನ್​​ಗಳಿಕೆ ಮಾಡಿ ತಂಡ 50ರನ್​ ಗಡಿದಾಟುವಂತೆ ಮಾಡಿತು. ಇವರ ವಿಕೆಟ್​ ಬಿಳುತ್ತಿದ್ದಂತೆ ಚಹರ್​​(5) ಹಾಗೂ ಸಕಾರಿಯಾ(5)ರನ್​ಗಳಿಕೆ ಮಾಡಿದರು. ತಂಡ ಕೊನೆಯದಾಗಿ 20 ಓವರ್​ಗಳಲ್ಲಿ 8ವಿಕೆಟ್ ಕಳೆದುಕೊಂಡು 81ರನ್​ಗಳಿಕೆ ಮಾಡಿದ್ದು, ಲಂಕಾ ಗೆಲುವಿಗೆ 82ರನ್​ ಟಾರ್ಗೆಟ್​ ನೀಡಿದೆ. ಟೀಂ ಇಂಡಿಯಾ ಪರ ಕುಲ್ದೀಪ್​ ಯಾದವ್​ 23 ವೈಯಕ್ತಿಕ ಗರಿಷ್ಠ ಸ್ಕೋರ್​ರ ಆಗಿ ಹೊರಹೊಮ್ಮಿದರು. ಲಂಕಾ ಪರ ಹಸರಂಗ 4ವಿಕೆಟ್ ಪಡೆದು ಮಿಂಚಿದರೆ, ಶನಕ್​ 2ವಿಕೆಟ್​, ಚಮೀರಾ, ಮೆಂಡಿಸ್​​ ತಲಾ 1ವಿಕೆಟ್​ ಕಬಳಿಸಿದರು.

Last Updated : Jul 29, 2021, 10:07 PM IST

ABOUT THE AUTHOR

...view details