ಕರ್ನಾಟಕ

karnataka

ETV Bharat / sports

'ವ್ಯಕ್ತಿತ್ವ ಬದಲಾಯಿಸಲಾಗದಿದ್ರೇ, ವ್ಯಕ್ತಿಯನ್ನೇ ಬದಲಿಸು..' ತಂಡಕ್ಕೆ ಮೆಕಲಮ್​ ಎಚ್ಚರಿಕೆ

ನೀವು ಪ್ರತಿ ಎಸೆತವನ್ನೂ ಬೌಂಡರಿಗೆ ಅಟ್ಟುವುದು ಸುಲಭವಿಲ್ಲ. ಆದರೆ, ಅಂತಾ ಪ್ರಯತ್ನ ಹಾಗೂ ತುಡಿತ ನಿಮ್ಮಲ್ಲಿರಬೇಕು. ದುರದೃಷ್ಟವಶಾತ್ ನಮ್ಮಿಂದ ಉತ್ತಮ ಹೊಡೆತಗಳು ಬರಲಿಲ್ಲ..

By

Published : Apr 30, 2021, 2:12 PM IST

ಮೆಕಲಮ್
ಮೆಕಲಮ್

ಅಹಮದಾಬಾದ್ : ಈ ಬಾರಿಯ ಐಪಿಎಲ್​​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಕಳಪೆ ಪ್ರದರ್ಶನ ಮುಂದುವರಿದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಕೆಕೆಆರ್ ಹೀನಾಯ ಸೋಲು ಕಂಡಿದೆ. ಈ ಸೋಲಿನ ಬಳಿಕ ಕೆಕೆಆರ್ ತಂಡದ ಕೋಚ್ ಬ್ರೆಂಡನ್ ಮೆಕಲಮ್ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಕೆಕೆಆರ್ ಪ್ರಸ್ತುತ 7 ಪಂದ್ಯಗಳಿಂದ 4 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಇದರಿಂದ ಅತೃಪ್ತರಾಗಿರುವ ಮೆಕಲಮ್​, ಮುಂದಿನ ಪಂದ್ಯಗಳಲ್ಲಿ ಹಲವು ಬದಲಾವಣೆ ತರುವ ಬಗ್ಗೆ ಮಾತನಾಡಿದರು.

"ಈ ಸೋಲು ಬಹಳ ನಿರಾಶೆ ಮೂಡಿಸುತ್ತದೆ. ಆಟಗಾರರಾಗಿ ಆಡಲು ಆಯ್ಕೆಯಾಗಲು ನೀವು ಸ್ವಾತಂತ್ರ್ಯ, ವಿಶ್ವಾಸ ಮತ್ತು ನಿಷ್ಠೆಯನ್ನು ಬಯಸುತ್ತೀರಿ. ಮೈದಾನಕ್ಕೆ ಇಳಿದ ಬಳಿಕ ಆಕ್ರಮಣಕಾರಿಯಾಗಿ ಆಡುವ ಮೂಲಕ ಪಂದ್ಯವನ್ನು ಮುಂದಕ್ಕೆ ಒಯ್ಯಬೇಕು.

ಆ ಮೂಲಕ ನಿಮ್ಮ ತಂಡದ ಪರವಾಗಿ ಸಂಗತಿಗಳು ನಡೆಯುವಂತೆ ಮಾಡಬೇಕು. ಇದನ್ನು ನಾನು ಮತ್ತು ತಂಡದ ನಾಯಕ ಇಯಾನ್ ಮಾರ್ಗನ್ ಆಟಗಾರರಿಂದ ಆ ತರಹದ ಪ್ರದರ್ಶನವನ್ನು ನಿರೀಕ್ಷಿಸುತ್ತೇವೆ.

"ಆದರೆ, ದುರದೃಷ್ಟವಶಾತ್ ನಾವು ಬಯಸುವುದು ನಮ್ಮ ತಂಡದಿಂದ ದೊರೆಯುತ್ತಿಲ್ಲ. ಇಂದು ಪೃಥ್ವಿ ಶಾ ಆಡಿದ್ದು ನಾವು ನಮ್ಮ ತಂಡದ ಆಟಗಾರರಿಂದ ನಿರೀಕ್ಷಿಸಿದಂತ ಆಟ. ನಮ್ಮ ಆಟಗಾರರಿಗೆ ಆತ ಯಾವ ರೀತಿಯ ಪ್ರದರ್ಶನ ನೀಡಬೇಕು ಎಂದು ಅದ್ಭುತವಾಗಿ ಹೇಳಿಕೊಟ್ಟಿದ್ದಾನೆ" ಎಂದು ಮೆಕಲಮ್ ಪ್ರತಿಕ್ರಿಯಿಸಿದ್ದಾರೆ.

"ನೀವು ಪ್ರತಿ ಎಸೆತವನ್ನೂ ಬೌಂಡರಿಗೆ ಅಟ್ಟುವುದು ಸುಲಭವಿಲ್ಲ. ಆದರೆ, ಅಂತಾ ಪ್ರಯತ್ನ ಹಾಗೂ ತುಡಿತ ನಿಮ್ಮಲ್ಲಿರಬೇಕು. ದುರದೃಷ್ಟವಶಾತ್ ನಮ್ಮಿಂದ ಉತ್ತಮ ಹೊಡೆತಗಳು ಬರಲಿಲ್ಲ. ನಾನು ವೃತ್ತಿಯಲ್ಲಿ ಒಂದು ನಾಣ್ಣುಡಿಯನ್ನು ಪಾಲಿಸುತ್ತಾ ಬಂದಿದ್ದೇನೆ.

'ನೀನು ವ್ಯಕ್ತಿತ್ವವನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ ವ್ಯಕ್ತಿಯನ್ನೇ ಬದಲಾಯಿಸು'. ಹಾಗಾಗಿ, ನಾನು ತಂಡದಲ್ಲಿ ಕೆಲ ಬದಲಾವಣೆಗಳನ್ನ ಮಾಡಿ ಹೊಸತನವನ್ನು ತರಬೇಕಾಗಿದೆ" ಎಂದು ಮೆಕಲಮ್ ಹೇಳಿದ್ದಾರೆ.

ಇದನ್ನೂ ಓದಿ : ಐಪಿಎಲ್​ 2021: ಕೆಕೆಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲುವು

ABOUT THE AUTHOR

...view details