ಕರ್ನಾಟಕ

karnataka

ETV Bharat / sports

ಕಿಂಗ್​ ಕೊಹ್ಲಿ ಶತಕ ವ್ಯರ್ಥ... ಗಿಲ್​ ಸೆಂಚುರಿಗೆ ಒಲಿದ ಗೆಲುವು... ಐಪಿಎಲ್​ನಿಂದ ಹೊರ ಬಿದ್ದ ಆರ್​ಸಿಬಿ

ಹಾಲಿ ಚಾಂಪಿಯನ್​ ಗುಜರಾತ್​ ವಿರುದ್ಧ ಸೋತು ಪ್ರಸಕ್ತ ಐಪಿಎಲ್​ ಟೂರ್ನಿಯಿಂದ ಆರ್​ಸಿಬಿ ಹೊರ ಬಿದ್ದಿದೆ. ಈ ಮೂಲಕ ಕಪ್​ ಗೆಲ್ಲಬೇಕೆಂಬ ಬೆಂಗಳೂರು ತಂಡದ ಕನಸು ಈ ಭಾರಿ ಕೂಡ ಭಗ್ನಗೊಂಡಿದೆ.

http://10.10.50.85:6060/reg-lowres/22-May-2023/rcb-ipl_2205newsroom_1684694524_226.jpg
http://10.10.50.85:6060/reg-lowres/22-May-2023/rcb-ipl_2205newsroom_1684694524_226.jpg

By

Published : May 22, 2023, 12:44 AM IST

Updated : May 22, 2023, 1:29 AM IST

ಬೆಂಗಳೂರು:ಪ್ರಸಕ್ತ ಐಪಿಎಲ್​ ಟೂರ್ನಿಯಿಂದ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಹೊರ ಬಿದ್ದಿದೆ. ಕೊನೆಯ ಲೀಗ್​ ಪಂದ್ಯದಲ್ಲಿ ಗುಜರಾತ್​ ವಿರುದ್ಧ ಡು ಪ್ಲೆಸಿಸ್ ಪಡೆ ಸೋಲು ಕಂಡಿದೆ. ಶುಭಮನ್​ ಗಿಲ್​ ಸಿಡಿಸಿದ ಭರ್ಜರಿ ಸೆಂಚುರಿಯಿಂದ ಗುಜರಾತ್​ ತಂಡ ಗೆದ್ದು ಬೀಗಿದೆ. ಫ್ಲೇ ಆಫ್​ಗೆ ತಂಡವನ್ನು ಕೊಂಡೊಯ್ಯಬೇಕೆಂಬ ಛಲದಿಂದ ಕಿಂಗ್​ ವಿರಾಟ್ ಕೊಹ್ಲಿ ಸಿಡಿಸಿದ ಶತಕ ವ್ಯರ್ಥವಾಗಿದೆ.

ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಕೊಹ್ಲಿ ಶತಕದ ನೆರವಿನೊಂದಿಗೆ ಐದು ವಿಕೆಟ್​ ನಷ್ಟಕ್ಕೆ 197 ರನ್​ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಗುಜರಾತ್​ ಪರ ಶುಭಮನ್​ ಗಿಲ್​ ಅದ್ಬುತ ಶತಕ ಬಾರಿಸುವ ಮೂಲಕ ತಂಡವನ್ನು ಗೆಲ್ಲಿಸಿದರು. ಇನ್ನೂ ಐದು ಎಸತೆಗಳು ಬಾಕಿ ಇರುವಾಗಲೇ ಗುಜರಾತ್​ ತಂಡ ಆರು ವಿಕೆಟ್​ಗಳಿಂದ ಗೆಲುವಿನ ನಗೆ ಬೀರಿತು.

ಬೆಂಗಳೂರಲ್ಲಿ ಸುರಿದ ಭಾರಿ ಮಳೆಯಿಂದ ಪಂದ್ಯ ತಡವಾಗಿ ಆರಂಭವಾಯಿತು. ಇತ್ತ, ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್​ಸಿಬಿ ತಂಡ ಇತ್ತು. ಇದರ ನಡುವೆ ಭರ್ಜರಿ ಫಾರ್ಮ್​ನಲ್ಲಿದ್ದ ಕಿಂಗ್​​ ಕೊಹ್ಲಿ ದಾಖಲೆಯ ಶತಕ ಸಿಡಿಸಿದರು. 61 ಎಸೆತದಲ್ಲಿ 13 ಬೌಂಡರಿ, ಒಂದು ಸಿಕ್ಸರ್​ ಸಮೇತ​ 101 ರನ್​ ಬಾರಿಸಿ ಈ ಆವೃತ್ತಿಯಲ್ಲಿ ಸತತ 2ನೇ ಶತಕ ದಾಖಲಿಸಿದರು.

ಕೊಹ್ಲಿ ಜೊತೆ ಇನ್ಸಿಂಗ್​ ಆರಂಭಿಸಿದ ನಾಯಕ ಫಾಫ್​​ ಡು ಪ್ಲೆಸಿಸ್​​​​ 28 ರನ್​ ಗಳಿಸಿ ನಿರ್ಗಮಿಸಿದರು. ನಂತರ ಬಂದ ಮಾಕ್ಸ್​​ವೆಲ್ 11 ರನ್​ಗೆ ಪೆವಿಲಿಯನ್ ಸೇರಿಸಿದರು.​ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಮಹಿಪಾಲ್​​ ಲೊಮ್ರೋರ್​​​​ ಕೇವಲ ಒಂದು ರನ್​​ ಗಳಿಸಿ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ಆಲ್​ ​ರೌಂಡರ್​​ ಬ್ರೇಸ್​​ವೆಲ್​​ 26 ರನ್​​ಗಳ ಕಾಣಿಕೆ ನೀಡಿದರು. ದಿನೇಶ್​​ ಕಾರ್ತಿಕ್​​ ಈ ಆವೃತ್ತಿಯಲ್ಲಿ 4ನೇ ಬಾರಿಗೆ ಶೂನ್ಯಕ್ಕೆ ಔಟಾಗುವ ಮೂಲಕ ತಮ್ಮ ಕಳಪೆ ಆಟವನ್ನು ಮುಂದುವರೆಸಿದರು. ಕೊನೆಯಲ್ಲಿ ಯುವ ಆಟಗಾರ ಅನುಜ್​ ರಾವತ್​​ ಅವರು ವಿರಾಟ್​​ ಜೊತೆ ಸೇರಿ ಉತ್ತಮವಾದ ಜೊತೆಯಾಟ ನೀಡಿದರು. ಕೊಹ್ಲಿ ಅಜೇಯ 101 ರನ್​ ಬಾರಿಸಿದರೆ, ಅನುಜ್​ ಅಜೇಯ 23 ರನ್ ​ಗಳಿಸಿದರು. ಇದರಿಂದ ಆರ್​ಸಿಬಿ 197 ರನ್​ ಪೇರಿಸಿತ್ತು.

198 ರನ್ ಟಾರ್ಗೆಟ್ ಗುರಿ ಬೆನ್ನಟ್ಟಿದ್ದ ಗುಜರಾತ್ ಪರ ಶುಭಮನ್​ ಗಿಲ್​ ಭರ್ಜರಿ ಬ್ಯಾಟಿಂಗ್​ ಪ್ರರ್ದಶಿಸಿದರು. ವೃದ್ಧಿಮಾನ್ ಸಾಹ 12 ರನ್ ಸಿಡಿಸಿ ಔಟಾದರು, ಎರಡನೇ ವಿಕೆಟ್​ ಶುಭಮನ್ ಗಿಲ್ ಹಾಗೂ ವಿಜಯ ಶಂಕರ್ ಉತ್ತಮ ಜೊತೆಯಾಟ ನೀಡಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ವಿಜಯ್ ಶಂಕರ್ 35 ಎಸೆತದಲ್ಲಿ 53 ರನ್​ ಬಾರಿಸಿ ನಿರ್ಗಮಿಸಿದರು. ಈ ಜೋಡಿ 123 ರನ್​ಗಳ ಜೊತೆಯಾಟ ನೀಡಿತು.

ಇದರ ನಂತರ ಬಂದ ದಸೂನ ಶನಕ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ, ಗಿಲ್ ಆರ್ಭಟ ಮುಂದುವರಿಯಿತು. ಇತ್ತ ಡೇವಿಡ್ ಮಿಲ್ಲರ್ ಕೇವಲ 6 ರನ್ ಸಿಡಿಸಿ ಔಟಾದರು. ಅಂತಿಮ ಆರು ಎಸೆತದಲ್ಲಿ ಗುಜರಾತ್​ ಗೆಲುವಿಗೆ ಎಂಟು ರನ್ ಬೇಕಾಗಿತ್ತು. ಆದರೆ, ವೇಯ್ನೆ ಪಾರ್ನೆಲ್ ಎಸೆತದ ಮೊದಲ ಎಸೆತ ನೋಬಾಲ್ ಆಗಿ ದುಬಾರಿಯಾಯಿತು. ಮರು ಎಸೆತ ವೈಡ್ ಆಯಿತು. ಫ್ರೀ ಹಿಟ್ ಅವಕಾಶದಲ್ಲಿ ಗಿಲ್ ಸಿಕ್ಸರ್ ಸಿಡಿಸಿ ತಂಡಕ್ಕೆ ಆರು ವಿಕೆಟ್​ಗಳ ಗೆಲುವು ತಂದುಕೊಟ್ಟರು. ಅಲ್ಲದೇ, ಈ ಸಿಕ್ಸರ್ ಮೂಲಕ ಗಿಲ್ ಶತಕ ಪೂರೈಸಿದರು. 52 ಎಸೆತಗಳಲ್ಲಿ 14 ಬೌಂಡರಿ, ಎರಡು ಸಿಕ್ಸರ್​ನೊಂದಿಗೆ 104 ರನ್​ ಬಾರಿಸಿದರು. ಈ ಸೋಲಿನಿಂದ ಆರ್‌ಸಿಬಿ ಟೂರ್ನಿಯಿಂದ ಹೊರ ಬಿತ್ತು.

ಇದನ್ನೂ ಓದಿ:IPL 2023: ಕ್ಯಾಮರೂನ್ ಗ್ರೀನ್ ಶತಕ, ರೋಹಿತ್ ಅರ್ಧಶತಕ.. ಮುಂಬೈಗೆ ಪ್ಲೇ ಆಫ್​ ಆಸೆ ಜೀವಂತ

Last Updated : May 22, 2023, 1:29 AM IST

ABOUT THE AUTHOR

...view details