ಅಹಮದಾಬಾದ್ (ಗುಜರಾತ್): ಶುಭಮನ್ ಗಿಲ್ ಭರ್ಜರಿ ಶತಕದ ನೆರವಿನಿಂದ ಫೈನಲ್ ಪ್ರವೇಶದ ಪ್ರಮುಖ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಿಗದಿತ ಓವರ್ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದೆ. ಮಳೆ ಬಂದು ತಡವಾಗಿ ಪಂದ್ಯ ಆರಂಭವಾಯಿತು. ಮೈದಾನದ ಮೇಲ್ಮೈ ತೇವಾಂಶ ಇದ್ದಿದ್ದರಿಂದ ಬೌಲರ್ಗಳಿಗೆ ಬಾಲ್ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಯಿತು. ಇದನ್ನೇ ಲಾಭ ಮಾಡಿಕೊಂಡ ಜಿಟಿ ಬ್ಯಾಟರ್ಗಳು ಮುಂಬೈ ಬೌಲರ್ಗಳನ್ನು ದಂಡಿಸಿದರು. ಇರದರ ಪರಿಣಾಮ ಮುಂಬೈ ಗೆಲುವಿಗೆ 234 ರನ್ ಅಗತ್ಯವಿದೆ.
ಪವರ್ ಪ್ಲೇ ಸಮಯದಲ್ಲಿ ಫೀಲ್ಡರ್ಗಳು ಹೆಚ್ಚು 30 ಯಾರ್ಡ್ ಒಳಗೆ ಇರುವುದನ್ನು ಚೆನ್ನಾಗಿ ಬಳಸಿಕೊಳ್ಳುವ ಶುಭಮನ್ ಗಿಲ್ ಇಂದು ಅದೇ ಲಾಭವನ್ನು ಪಡೆದರು. ಆರಂಭಿಕ ಸಹಾ ಜೊತೆಯಲ್ಲಿದ್ದಾಗ ಹೆಚ್ಚು ಕ್ರೀಸ್ ಪಡೆದು ವೇಗವಾಗಿ ರನ್ ಗಳಿಸಿದರು. ಸಹಾ ಕೇವಲ 18 ರನ್ಗಳಿಸಿ ಔಟ್ ಆದರೂ ಗಿಲ್ ಮೊದಲ ವಿಕೆಟ್ಗೆ 54ರನ್ಗಳ ಜೊತೆಯಾಟ ನೀಡಿದರು.
ಒಂದೇ ಆವೃತ್ತಿಯಲ್ಲಿ ಮೂರನೇ ಶತಕ ದಾಖಲಿಸಿದ ಗಿಲ್:ಸಹಾ ನಂತರ ಬಂದ ಸುದರ್ಶನ್ ಕೂಡಾ ಕ್ರೀಸ್ನ್ನು ಗಿಲ್ಗೆ ಬಿಟ್ಟುಕೊಟ್ಟರು. ಇದರಿಂದ ತಮ್ಮ ಅಬ್ಬರದ ಇನ್ನಿಂಗ್ಸ್ನ್ನು ಶುಬ್ಮನ್ ಮುಂದುವರೆಸುತ್ತಾ ಸಾಗಿದರು. 49 ಬಾಲ್ ಎದುರಿಸಿದ ಗಿಲ್ ಶತಕ ಗಳಿಸಿದರು. ನಂತರವೂ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಗಿಲ್ 60 ಬಾಲ್ನಲ್ಲಿ 129 ರನ್ ಗಳಿಸಿ ಔಟ್ ಆದರು. ಅವರ ಇಂದಿನ ಇನ್ನಿಂಗ್ಸ್ನಲ್ಲಿ 10 ಸಿಕ್ಸ್ ಮತ್ತು 7 ಬೌಂಡರಿ ಬಾರಿಸಿದರು. ಶುಬ್ಮನ್ ಈ ಆವೃತ್ತಿಯ ಮೂರನೇ ಶತಕವಾಗಿದೆ. ಈ ಆವೃತ್ತಿಯಲ್ಲಿ 16 ಪಂದ್ಯಗಳಿಂದ 821 ರನ್ಗಳಿಸಿದ ಗಿಲ್ ಆರೆಂಜ್ ಕ್ಯಾಪ್ ಪಡೆದುಕೊಂಡರು.