ಕರ್ನಾಟಕ

karnataka

ETV Bharat / sports

6, 6, 6, 6, 6: ಕೆಕೆಆರ್‌ಗೆ ಅಚ್ಚರಿಯ ಗೆಲುವು ತಂದಿಟ್ಟ ರಿಂಕು ಸಿಂಗ್ ಬಾಹುಬಲ! - ಹಾರ್ದಿಕ್​ ಪಾಂಡ್ಯ

ಕೊನೆಯ ಓವರ್​ನಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ 31 ರನ್​ ಗಳಿಸಿದ ರಿಂಕು ಸಿಂಗ್‌ ಕೆಕೆಆರ್ ತಂಡಕ್ಕೆ ಅಚ್ಚರಿಯ​ ಗೆಲುವಿನ ಕಾಣಿಕೆ ನೀಡಿದರು.

Gujarat Titans vs Kolkata Knight Riders match Score
Gujarat Titans vs Kolkata Knight Riders match Score

By

Published : Apr 9, 2023, 3:18 PM IST

Updated : Apr 9, 2023, 8:25 PM IST

ಅಹಮದಾಬಾದ್ ​(ಗುಜರಾತ್​):ಕೆಕೆಆರ್‌ ಮತ್ತು ಗುಜರಾತ್‌ ನಡುವಿನ ಐಪಿಎಲ್ ಪಂದ್ಯ ರೋಮಾಂಚಕ ಅನುಭವ ನೀಡಿತು. ಪಂದ್ಯದ ಕೊನೆಯ ಓವರ್​ನಲ್ಲಿ ಕೆಕೆಆರ್‌ನ ರಿಂಕು ಸಿಂಗ್​ 30 ರನ್​ ಬಾರಿಸಿ ಸೋಲುವ ಪಂದ್ಯ ಗೆಲ್ಲಿಸಿ ಕೊಟ್ಟರು. ಗುಜರಾತ್‌ ತಂಡದ ಯಶ್ ದಯಾಳ್ ಅವರ 20ನೇ ಓವರ್​ನಲ್ಲಿ 5 ಸಿಕ್ಸರ್​​ ಬಾರಿಸಿದ ಸಿಂಗ್​ ವಿಜಯೋತ್ಸವ ಆಚರಿಸಿದರು. ಗುಜರಾತ್​ ನೀಡಿದ್ದ 205 ರನ್​ ಗುರಿಯನ್ನು 3 ವಿಕೆಟ್​ಗಳಿಂದ ಕೋಲ್ಕತ್ತಾ ಗೆದ್ದು ಬೀಗಿತು.

ಬೃಹತ್​ ಗುರಿ ಬೆನ್ನತ್ತಿದ ಕೆಕೆಆರ್​ಗೆ ಗುಜರಾತ್​ ಟೈಟಾನ್ಸ್​ ತಂಡದ ಬೌಲರ್​ಗಳು ಕಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಎನ್.ಜಗದೀಶನ್ 6 ರನ್​ಗೆ ವಿಕೆಟ್​ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಉತ್ತಮ ಆರಂಭ ನೀಡಿದ್ದ ಮತ್ತೋರ್ವ ಆರಂಭಿಕ ರಹಮಾನುಲ್ಲಾ ಗುರ್ಬಾಜ್ 15 ರನ್​ಗೆ ಔಟಾದರು.

ಮೊದಲ ವಿಕೆಟ್​ ಬೀಳುತ್ತಿದ್ದಂತೆ ವೆಂಕಟೇಶ್​ ಅಯ್ಯರ್​ ಅವರನ್ನು ಇಂಪ್ಯಾಕ್ಟ್​ ಪ್ಲೇಯರ್​ ಆಗಿ ತಂಡಕ್ಕೆ ತೆಗೆದುಕೊಳ್ಳಲಾಯಿತು. ಅಯ್ಯರ್​ ಮತ್ತು ನಾಲ್ಕನೇ ವಿಕೆಟ್​ ಆಗಿ ಬಂದ ನಾಯಕ ನಿತೀಶ್​ ರಾಣಾ ಉತ್ತಮ 50 ಪ್ಲಸ್​ ರನ್​ ಜೊತೆಯಾಟ ನೀಡಿದರು. ಅಯ್ಯರ್​ 40 ಬಾಲ್​ನಲ್ಲಿ 5 ಸಿಕ್ಸರ್​ ಮತ್ತು 8 ಬೌಂಡರಿಯಿಂದ 83 ರನ್​ ಗಳಿಸಿ 17 ರನ್​ಗಳಿಂದ ಶತಕ ವಂಚಿತರಾದರು. ನಿತೀಶ್​ ರಾಣ ಜವಾಬ್ದಾರಿಯುತ ಆಟದ ಮೊರೆ ಹೋಗಿ, 29 ಬಾಲ್​ ಎದುರಿಸಿ 45 ರನ್ ಪೇರಿಸಿದರು.

ರಶೀದ್​ ಖಾನ್‌ಗೆ ಹ್ಯಾಟ್ರಿಕ್‌ ವಿಕೆಟ್​:ವೆಂಕಟೇಶ್​ ಅಯ್ಯರ್ ವಿಕೆಟ್​ ಬೆನ್ನಲ್ಲೇ ಕ್ರೀಸಿಗೆ ಬಂದ ಆಂಡ್ರೆ ರಸೆಲ್(1), ಸುನಿಲ್ ನರೈನ್ (0), ಶಾರ್ದೂಲ್ ಠಾಕೂರ್ (0) ರಶೀದ್ ಖಾನ್​ಗೆ ಬಲಿಯಾದರು. ರಶೀದ್ ಖಾನ್​ 17ನೇ ಓವರ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡಿದರು. ಈ ಮೂವರ ವಿಕೆಟ್​ ಕಳೆದುಕೊಂಡ ಕೆಕೆಆರ್​ಗೆ ಗೆಲುವಿನ ಭರವಸೆಯೇ ಬತ್ತಿಹೋಗಿತ್ತು.

3 ಓವರ್​ಗೆ 52 ರನ್​:ಆದರೆ ಕೊನೆಯ 3.2 ಓವರ್​ನಲ್ಲಿ ಉಮೇಶ್​ ಯಾದವ್​ ಜೊತೆಗೆ ರಿಂಕು ಸಿಂಗ್​​ 52 ರನ್ ಜೊತೆಯಾಟ ಒದಗಿಸಿದರು. 17 ಓವರ್​ನ ಕೊನೆಯ 3 ಎಸೆತಗಳಲ್ಲಿ ಸಿಕ್ಕಿದ್ದು ಕೇವಲ 2 ರನ್​. ಶಮಿ ಎಸೆದ 18ನೇ ಓವರ್​ನಲ್ಲಿ 5 ಹಾಗೂ 19ನೇ ಓವರ್​ನಲ್ಲಿ 14 ರನ್​ ಗಳಿಸಿದರು. 20ನೇ ಯಶ್ ದಯಾಳ್ ಓವರ್​ನ ಮೊದಲ ಬಾಲ್​ಗೆ ಉಮೇಶ್​ ಯಾದವ್​ ಒಂದು ರನ್​ ತೆಗೆದು ರಿಂಕುಗೆ ಕ್ರೀಸ್ ಬಿಟ್ಟು​ ಕೊಟ್ಟರು. 5 ಬಾಲ್​ನಲ್ಲಿ ಗೆಲುವಿಗೆ 28 ರನ್​ ಅವಶ್ಯಕತೆ ಇತ್ತು. ಆದರೆ ಮಿಕ್ಕ ಐದೂ ಎಸೆತವನ್ನೂ ರಿಂಕು ಸಿಕ್ಸರ್​ಗೆಟ್ಟಿದರು. ಕೆಕೆಆರ್​ 3 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

ಐಪಿಎಲ್‌ನಲ್ಲಿ ರಿಂಕು ಸಿಂಗ್​​ ಗೇಲ್​, ತೆವಾಟಿಯಾ, ಜಡೇಜ ಮತ್ತು ಮಾರ್ಕಸ್ ಸ್ಟೊಯಿನಿಸ್‌ರಂತೆ ಓವರೊಂದರಲ್ಲಿ ಐದು ಸಿಕ್ಸ್​ ಬಾರಿಸಿದ ದಾಖಲೆ ಬರೆದರು. ಯಶ್ ದಯಾಳ್ 4 ಓವರ್​ ಮಾಡಿ 69 ರನ್​ ಬಿಟ್ಟು ಕೊಟ್ಟು ಐಪಿಎಲ್​ನ ಎರಡನೇ ಅತಿ ದುಬಾರಿ ಬೌಲರ್​ ಆದರು. ಕೊನೆಯ ಓವರ್​ನಲ್ಲಿ ಅತಿ ಹೆಚ್ಚು ರನ್​ (29) ಚೇಸ್​ ಮಾಡಿದ ತಂಡ ಎಂಬ ಖ್ಯಾತಿಗೆ ಕೆಕೆಆರ್​ ಪಾತ್ರವಾಯಿತು.

ಇದಕ್ಕೂ ಮೊದಲು ಸಾಯಿ ಸುದರ್ಶನ್​ (53) ಮತ್ತು ವಿಜಯ್​ ಶಂಕರ್ (63) ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಗುಜರಾತ್​ ಟೈಟಾನ್ಸ್​ ತಂಡವು ಕೆಕೆಆರ್‌ಗೆ 205 ರನ್​​ಗಳ ಬೃಹತ್​ ಗುರಿ ನೀಡಿತ್ತು. ಜಿಟಿ ಪರ ವೃದ್ಧಿಮಾನ್​ ಸಹ (17), ಶುಭಮನ್​ ಗಿಲ್​ (39) ಮತ್ತು ಅಭಿನವ್​ (14) ರನ್​ ಗಳಿಸಿದರು. ಇದರಿಂದಾಗಿ ತಂಡ 4 ವಿಕೆಟ್​ ನಷ್ಟದಲ್ಲಿ 204 ರನ್‌ಗಳ ಬೃಹತ್ ಗುರಿ ನೀಡಿತ್ತು.

ಇದನ್ನೂ ಓದಿ:ಧೋನಿ ರಿವೀವ್​ ಸಿಸ್ಟಮ್​​: ಎಂಎಸ್​ಡಿ ಕರಾರುವಾಕ್ ನಿರ್ಧಾರ ಮತ್ತೆ ಸಾಬೀತು

Last Updated : Apr 9, 2023, 8:25 PM IST

ABOUT THE AUTHOR

...view details