ಅಹಮದಾಬಾದ್ (ಗುಜರಾತ್):ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತನ್ನ ಸತತ ಮೂರನೇ ಗೆಲುವಿನ ಹುಡುಕಾಟದಲ್ಲಿದೆ. ನಿತೀಶ್ ರಾಣಾ ಅವರ ತಂಡವು ಈ ವರ್ಷದ ಸ್ಪರ್ಧೆಯ ಮೊದಲ ಗೆಲುವು ರಾಯಲ್ ಚಾಲೆಂಜರ್ಸ್ ಬೆಂಗಳೂರಿ ಮೇಲೆ ಸಾಧಿಸಿದ್ದು, ಅದನ್ನು ಮುಂದುವರೆಸುವ ಚಿಂತನೆಯಲ್ಲಿದೆ.
ಹಾರ್ದಿಕ್ ವೈಫಲ್ಯ ಕಂಡರೂ ತಂಡಕ್ಕೆ ಗೆಲುವು:ಗುಜರಾತ್ ನಾಯಕ ಎರಡು ಪಂದ್ಯದಲ್ಲಿ ವಿಫತೆ ಕಂಡರೂ ಸಹ ತಂಡದ ಒಬ್ಬಲ್ಲಾ ಒಬ್ಬ ಆಟಗಾರ ಆಸರೆಯಾಗಿ ಪಂದ್ಯ ಗೆಲ್ಲಿಸಿದ್ದಾರೆ. ತಂಡದ ಬಹುತೇಕ ಆಟಗಾರರು ಫಾರ್ಮ್ನಲ್ಲಿದ್ದು ನಾಯಕ ಹಾರ್ದಿಕ್ ಲಯ ಕಂಡುಕೊಳ್ಳಬೇಕಿದೆ. ಆರಂಭಿಕ ಶೂಭಮನ್ ಗಿಲ್ ಪರಿಣಾಮಕಾರಿಯಾಗಿ ಕಂಡುಬರುತ್ತಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಉತ್ತಮ ಲಯದಲ್ಲಿ ಕಂಡು ಬಂದರೆ, ಡೇವಿಡ್ ಮಿಲ್ಲರ್ ಫಿನಿಶರ್ ಸ್ಥಾನವನ್ನು ತುಂಬುತ್ತಿದ್ದಾರೆ. ಗುಜರಾತ್ ತಂಡ ಸಮತೋಲನವಾಗಿ ಕಂಡು ಬರುತ್ತಿದೆ. ಬೌಲಿಂಗ್ನಲ್ಲಿ ವೇಗದ ಪಾಳಯದಲ್ಲಿ ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್ ಭರ್ಜರಿ ಪ್ರದರ್ಶನ ನೀಡಿದರೆ, ರಶೀದ್ ಖಾನ್ ಸ್ಪಿನ್ನಲ್ಲಿ ತಮ್ಮ ಫಾರ್ಮ್ ಮುಂದುವರೆಸಿದ್ದಾರೆ.
ಕೆಕೆಆರ್ ಶಾರ್ದೂಲ್ ಹೊಸ ಭರವಸೆ:ಶಾರ್ದೂಲ್ ಠಾಕೂರ್ ಐಪಿಎಲ್ನಲ್ಲಿ ಕೆಕೆಆರ್ ಪರ ಕೆಲ ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಆರ್ಸಿಬಿ ಎದುರಿನ ಪಂದ್ಯದ ನಂತರ ಅವರ ಪ್ರದರ್ಶನ ಇನ್ನೊಂದು ಹಂತಕ್ಕೆ ಹೋಗಿದೆ. ಅರ್ಧಶತಕದ ಆಟದ ಜೊತೆಗೆ ಬೌಲಿಂಗ್ನಲ್ಲೂ ಮಿಂಚು ಹರಿಸಿ ಆರ್ಸಿಬಿ ಸೋಲಿಗೆ ಪ್ರಮುಖ ಕಾರಣರಾದರು. ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಅವರ ಜೊತೆ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಕಮಾಲ್ ಮಾಡುತ್ತಿದ್ದಾರೆ.