ಅಹಮದಾಬಾದ್ (ಗುಜರಾತ್): ಇಂಡಿಯನ್ ಪ್ರೀಮಿಯರ್ ಲೀಗ್ನ 44ನೇ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಮತ್ತು ಕೊನೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿವೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ಈ ಪಂದ್ಯಕ್ಕೆ ಸಜ್ಜಾಗಿದೆ. 8 ಪಂದ್ಯದಲ್ಲಿ ಕೇವಲ ಎರಡರಲ್ಲಿ ಗೆಲುವು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ 4 ಅಂಕಗಳಿಸಿದೆ. 8 ಪಂದ್ಯದಲ್ಲಿ 6 ಗೆದ್ದು 12 ಅಂಕದಿಂದ ಮೊದಲ ಸ್ಥಾನದಲ್ಲಿ ಗುಜರಾತ್ ಇದೆ. ಇಂದಿನ ಪಂದ್ಯ ಗೆದ್ದಲ್ಲಿ ಜಿಟಿ ಅಗ್ರಸ್ಥಾನದಲ್ಲೇ ಮುಂದುವರೆಯಲಿದೆ.
ಲೀಗ್ನ ಆರಂಭದಿಂದ ಐದು ಪಂದ್ಯಗಳಲ್ಲಿ ಸೋಲು ಕಂಡಿದ್ದ ಡೇವಿಡ್ ವಾರ್ನರ್ ಪಡೆ ಆರು ಮತ್ತು ಏಳನೇ ಪಂದ್ಯದಲ್ಲಿ ಗೆಲುವು ಪಡೆದುಕೊಂಡಿತ್ತು. ಆದರೆ, 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿತು. ಇದರಿಂದ ಅಂಕಪಟ್ಟಿಯಲ್ಲಿ ಡೆಲ್ಲಿ ಕೊನೆ ಸ್ಥಾನದಲ್ಲೇ ಇದೆ. ಇನ್ನೂ ಆರು ಪಂದ್ಯಗಳನ್ನು ಡೆಲ್ಲಿ ಆಡಬೇಕಿದ್ದು, ಎಲ್ಲವನ್ನೂ ಗೆದ್ದಲ್ಲಿ ಪ್ಲೇ ಆಫ್ ಪ್ರವೇಶ ಸಾಧ್ಯತೆ ಇದೆ. ಆದರೆ, ಬಾಕಿ ತಂಡಗಳ ಗೆಲುವೂ ಸಹ ಇವರ ಕ್ವಾಲಿಪೈಯರ್ಗೆ ಸಮಸ್ಯೆಯಾಗಲಿದೆ.
ಡೆಲ್ಲಿಗೆ ವಿದೇಶಿ ಬ್ಯಾಟರ್ಗಳ ಬಲ: ಡೇವಿಡ್ ವಾರ್ನರ್, ಫಿಲ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಫಾರ್ಮ್ನಲ್ಲಿರುವ ಬ್ಯಾಟರ್ಗಳಾಗಿದ್ದು, ಆರಂಭಿಕ ಮೂವರು ಘರ್ಜಿಸಿದರೂ ತಂಡ ಬೃಹತ್ ಮೊತ್ತವನ್ನು ಕಲೆಹಾಕಲು ಸಾಧ್ಯವಿದೆ. ಸನ್ ರೈಸರ್ಸ್ ವಿರುದ್ಧ ಫಿಲ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ ಅರ್ಧಶತಕದ ಆಟ ಪ್ರದರ್ಶಿಸಿದರು, ಟೂರ್ನಿ ಉದ್ದಕ್ಕೂ ಸಿಕ್ಸ್ ಗಳಿಸದೇ ಹಾಫ್ ಸೆಂಚುರಿಗಳನ್ನು ದಾಖಲಿಸುತ್ತಾ ಬಂದಿದ್ದಾರೆ. ಕೊನೆಯ ವಿಕೆಟ್ಗೆ ಬರುವ ಅಕ್ಷರ್ ಡೆಲ್ಲಿಗೆ ಫಿನಿಶರ್ ರೀತಿ ಕಾರ್ಯ ನಿರ್ವಹಿಸಬೇಕಿದೆ.