ಮುಂಬೈ: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಭುಜದ ಗಾಯಕ್ಕೆ ತುತ್ತಾಗಿದ್ದರು. ನಂತರ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದ ಅವರಿಗೆ ಸುಮಾರು 5 ರಿಂದ 6 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ಶ್ರೇಯಸ್ ಅಯ್ಯರ್ ಅವರ ಬಗ್ಗೆ ಭಾವನಾತ್ಮಕ ಬರಹವೊಂದನ್ನ ಪೋಸ್ಟ್ ಮಾಡಿದೆ.
ಶ್ರೇಯಸ್ ಅಯ್ಯರ್ ಅವರ ಯಾವುದೇ ಸಹಾಯಕ್ಕಾಗಿ ಫ್ರ್ಯಾಂಚೈಸಿ ಯಾವಾಗಲೂ ಅವರ ಜೊತೆ ಇರುತ್ತದೆ. ಮತ್ತು ಯಾವುದೇ ಹಂತದಲ್ಲೂ ದೆಹಲಿ ಕ್ಯಾಪಿಟಲ್ಸ್ ಶ್ರೇಯಸ್ಗೆ ಬೇಕಾಗಬಹುದಾದ ಸಹಾಯ ಮಾಡಲು ಸದಾ ಸಿದ್ಧ ಎಂದು ಟ್ವೀಟ್ ಮಾಡಿದೆ.
"ಶ್ರೇಯಸ್ ನಮ್ಮ ತಂಡದ ನಾಯಕನ ಜವಾಬ್ದಾರಿ ವಹಿಸಿಕೊಂಡಾಗಿನಿಂದ ತಂಡವನ್ನ ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಕಳೆದ ವರ್ಷ ಕ್ಯಾಪಿಟಲ್ಸ್ ಅವರು ಮೊದಲ ಬಾರಿಗೆ ಫೈನಲ್‌ಗೆ ಕರೆದೊಯ್ದಿದ್ದರು. ಯಾವುದೇ ಹಂತದಲ್ಲಿ ಅವರಿಗೆ ಅಗತ್ಯವಿರುವ ಯಾವುದೇ ಸಹಾಯ ಮತ್ತು ಬೆಂಬಲಕ್ಕಾಗಿ ಫ್ರ್ಯಾಂಚೈಸಿ ಯಾವಾಗಲೂ ಸದಾ ಜೊತೆ ಇರುತ್ತದೆ" ಎಂದು ದೆಹಲಿ ಕ್ಯಾಪಿಟಲ್ಸ್ ಟ್ವೀಟ್ ಮಾಡಿದೆ.