ಕೋಲ್ಕತ್ತಾ: ಸೌರವ್ ಗಂಗೂಲಿ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡೆಲ್ಲಿ ಪ್ರಸ್ತುತ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿದ್ದು, ಲೀಗ್ನಿಂದ ಹೊರಬಿದ್ದಿದೆ. ಗಂಗೂಲಿ ನಿರ್ದೇಶನದ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.
ಇನ್ನೂ ಒಂದು ಪಂದ್ಯ ಬಾಕಿ ಇದ್ದು ಅದು ಔಪಚಾರಿಕವಷ್ಟೇ. ಈ ಪಂದ್ಯದ ನಂತರ ಮಾಜಿ ಬಿಸಿಸಿಐ ಅಧ್ಯಕ್ಷ ದೈನಂದಿನ ಜೀವನಕ್ಕೆ ಮರಳುವ ನಿರೀಕ್ಷೆ ಇದೆ. ಅದಕ್ಕೂ ಮುನ್ನ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಇದಕ್ಕೇನು ಕಾರಣ ಎಂದು ತಿಳಿದಿಲ್ಲ.
ಈ ಹಿಂದೆ ವೈ ಕೆಟಗರಿ ಭದ್ರತೆ ಸಿಕ್ಕಿತ್ತು. ಇದೀಗ ಪಶ್ಚಿಮ ಬಂಗಾಳ ಸರ್ಕಾರ ಝೆಡ್ ಪ್ಲಸ್ ಕೆಟಗರಿ ಭದ್ರತೆ ಒದಗಿಸಲು ಮಂದಾಗಿದೆ. ಭದ್ರತಾ ನಿರ್ದೇಶಕರು ಆದೇಶ ಹೊರಡಿಸಿ ಝಡ್ ಕೆಟಗರಿ ಭದ್ರತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸೌರವ್ ಗಂಗೂಲಿ ಜೊತೆಗೆ 2 ವಿಶೇಷ ಭದ್ರತಾ ಅಧಿಕಾರಿಗಳು ಅವರ ನಿವಾಸ ಮತ್ತು ಅವರು ಹೋದಲ್ಲೆಲ್ಲ ಇರಲಿದ್ದಾರೆ. ಬೆಂಗಾವಲು ಕಾರು ಇರುತ್ತದೆ. ಮನೆಯ ಭದ್ರತೆಯನ್ನು 24 ಗಂಟೆಗಳ ಕಾಲ ಹೆಚ್ಚಿಸಲಾಗಿದೆ. ಮನೆಯಲ್ಲಿ ಈಗಾಗಲೇ ಭದ್ರತಾ ಸಿಬ್ಬಂದಿಗಳಿದ್ದು, ಸಂಖ್ಯೆ ಹೆಚ್ಚಿಸಲಾಗಿದೆ. ಮೂಲಗಳ ಪ್ರಕಾರ, ಗಂಗೂಲಿ ಅವರೇ ವೈಯಕ್ತಿಕ ಕಾರಣಗಳಿಗಾಗಿ ಭದ್ರತೆ ಹೆಚ್ಚಿಸಲು ಬಯಸಿದ್ದರಂತೆ. ಹಾಗಾಗಿ ವೈ ಯಿಂದ ಝೆಡ್ ಕೆಟಗರಿ ಭದ್ರತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ರವೀಂದ್ರ ಜಡೇಜಾ ದಂಪತಿ