ಲಂಡನ್: ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಸ್ಟಾರ್ ಡೇನಿಯೆಲ್ಲೆ ವ್ಯಾಟ್ ಅವರೊಂದಿಗೆ ಲಂಡನ್ನ ರೆಸ್ಟೊರೆಂಟ್ ಒಂದರಲ್ಲಿ ಊಟ ಮಾಡುತ್ತ ತೆಗೆದುಕೊಂಡ ಸೆಲ್ಫಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಡೇನಿಯೆಲ್ಲೆ ವ್ಯಾಟ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅರ್ಜುನ್ರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
"ನಿನ್ನೆಯ ದಿನ ನನ್ನ ಪುಟ್ಟ ಜೊತೆಗಾರನೊಂದಿಗೆ (little mate) ಇರುವುದು ಖುಷಿಯ ವಿಚಾರ" ಎಂದು ಡೇನಿಯೆಲ್ಲೆ ವ್ಯಾಟ್ ಬರೆದುಕೊಂಡಿದ್ದಾರೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯಾದ ಡೇನಿಯೆಲ್ಲೆ ವ್ಯಾಟ್ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದು, ಸದ್ಯ ಇಂಗ್ಲೆಂಡ್ ಪರವಾಗಿ ಕೇವಲ ವೈಟ್ ಬಾಲ್ ಕ್ರಿಕೆಟ್ ಆಡುತ್ತಿದ್ದಾರೆ. ಕಳೆದ ಏಪ್ರಿಲ್ನಲ್ಲಿ ಅವರು ಇಂಗ್ಲೆಂಡ್ ಪರವಾಗಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದರು.