ಕರ್ನಾಟಕ

karnataka

ETV Bharat / sports

ರಾಯುಡುಗೆ ಗೆಲುವಿನ ವಿದಾಯ ಕೊಟ್ಟ ಚೆನ್ನೈ: ಕಣ್ಣೀರು ಹಾಕಿದ ಅಂಬಾಟಿ ರಾಯುಡು - ರಾಯುಡುಗೆ ಕಪ್​ ಒಪ್ಪಿಸಿದ ಧೋನಿ

ಫೈನಲ್​ ಪಂದ್ಯಕ್ಕೂ ಮುನ್ನವೇ ವಿದಾಯ ಘೋಷಿಸಿದ್ದ ಅಂಬಾಟಿ ರಾಯುಡುವಿಗೆ ಚೆನ್ನೈ ಗೆಲುವಿನ ಬೀಳ್ಕೊಡುಗೆ ಕೊಟ್ಟಿದೆ.

Etv Bharatರಾಯುಡುಗೆ ಗೆಲುವಿನ ವಿದಾಯ ಕೊಟ್ಟ ಚೆನ್ನೈ: ಕಣ್ಣಿರು ಹಾಕಿದ ಅಂಬಾಟಿ ರಾಯುಡು
ರಾಯುಡುಗೆ ಗೆಲುವಿನ ವಿದಾಯ ಕೊಟ್ಟ ಚೆನ್ನೈ: ಕಣ್ಣಿರು ಹಾಕಿದ ಅಂಬಾಟಿ ರಾಯುಡು

By

Published : May 31, 2023, 10:36 PM IST

ಅಹಮದಾಬಾದ್​(ಗುಜರಾತ್​): 16ನೇ ಆವೃತ್ತಿಯ ಐಪಿಎಲ್​ ಫೈನಲ್​ ಪಂದ್ಯ ಮಳೆಯಿಂದ ಅಡೆತಡೆ ಅನುಭವಿಸಿದರೂ ಕೊನೆಗೆ ಚೆನ್ನೈ ಸೂಪರ್​ ಕಿಂಗ್ಸ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ರವೀಂದ್ರ ಜಡೇಜಾ ಅವರು ಕೊನೆಯ ಎರಡು ಬಾಲ್​ನಲ್ಲಿ ಗಳಿಸಿದ ಸಿಕ್ಸ್​ ಮತ್ತು ಬೌಂಡರಿ ಚೆನ್ನೈ ಸೂಪರ್​ ಕಿಂಗ್ಸ್​ ಅಭಿಮಾನಿಗಳಿಗೆ ಎಂದು ಮರೆಯಲು ಸಾಧ್ಯವಿಲ್ಲ. 5ನೇ ಬಾರಿಗೆ ಧೋನಿಯ ನಾಯಕತ್ವದಲ್ಲಿ ಚೆನ್ನೈ ಚಾಂಪಿಯನ್​ ಆಗಿದ್ದು, ಮುಂಬೈ ಮತ್ತು ಚೆನ್ನೈ ಜಂಟಿಯಾಗಿ ಅತಿ ಹೆಚ್ಚು ಬಾರಿ ಕಪ್​ ಗೆದ್ದ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ಮಧ್ಯಮ ಕ್ರಮಾಂಕದ ಬ್ಯಾಟರ್​ ಅಂಬಾಟಿ ರಾಯುಡು ಕಪ್​ ಗೆದ್ದ ಸಂತಸದಲ್ಲಿ ಕಣ್ಣೀರು ಹಾಕಿದ್ದಾರೆ. ರಾಯುಡು ಫೈನಲ್​ ಪಂದ್ಯಕ್ಕೂ ಮುನ್ನ ಟ್ವಿಟರ್​ನಲ್ಲಿ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದರು. ಆದರೆ, 28 ರಂದು ಮಳೆ ಬಂದ ಕಾರಣ ಪಂದ್ಯವನ್ನು ಸೋಮವಾರದ ಮೀಸಲು ದಿನಕ್ಕೆ ಮುಂದೂಡಲಾಗಿತ್ತು. ಸೋಮವಾರವೂ ಒಂದು ಇನ್ನಿಂಗ್ಸ್​ ಆಡಿದ ಬೆನ್ನಲ್ಲೇ ಮಳೆ ಬಂದಿದ್ದು, ಪಂದ್ಯ ನಡೆಯುವುದು ಅನುಮಾನ ಎಂಬಂತಾಗಿತ್ತು. ಆದರೆ ರಾತ್ರಿ 12 ಕ್ಕೆ ಮಳೆ ಬಿಡುವು ಕೊಟ್ಟ ಕಾರಣ ಡಿಎಲ್​ಎಸ್​ ನಿಯಮದಂತೆ ಪಂದ್ಯವನ್ನು ನಡೆಸಲಾಯಿತು.

ಅಂಬಟಿ ರಾಯುಡು ಅವರಿಗೆ ಚೆನ್ನೈ ತಂಡ ಉತ್ತಮವಾದ ವಿದಾಯವನ್ನು ಹೇಳಿದೆ. "ಇದು ಒಂದು ಸಂತೋಷದಾಯಕ ಮುಕ್ತಾಯವಾಗಿದೆ. ನಾನು ಹೆಚ್ಚಿನದನ್ನು ಕೇಳಲು ಸಾಧ್ಯವಾಗುತ್ತಿಲ್ಲ. ನಾನು ನಿಜವಾಗಿಯೂ ಉತ್ತಮ ತಂಡಗಳಲ್ಲಿ ಆಡಿದ್ದೇನೆ, ನಾನು ಅದೃಷ್ಟಶಾಲಿಯಾಗಿದ್ದೇನೆ. ನಿವೃತ್ತಿ ಜೀವನವನ್ನು ಸಂತೋಷದಿಂದ ಕಳೆಯುತ್ತೇನೆ" ಎಂದಿದ್ದಾರೆ.

ಪಂದ್ಯವನ್ನು ಕೊನೆಯ ಎರಡು ಬಾಲ್​ನಲ್ಲಿ ಗೆಲ್ಲಿಸಿಕೊಟ್ಟ ರವಿಂದ್ರ ಜಡೇಜಾ ಎಲ್ಲವೋ ಧೋನಿಗಾಗಿ ಮಾಡಿದ್ದೇನೆ. ಧೋನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದಿದ್ದರು. ಇದನ್ನೂ ಧೋನಿಯ ನಿವೃತ್ತಿಯ ಆವೃತ್ತಿ ಎಂದೇ ಪರಿಗಣಿಸಲಾಗಿತ್ತು. ಆದರೆ ಧೋನಿ ಪಂದ್ಯ ಮುಗಿದ ನಂತರ ಮಾತನಾಡುವಾಗ ಧೋನಿ ಇನ್ನೂ ಒಂದು ವರ್ಷ ಆಡಬೇಕೆಂದಿದ್ದೇನೆ ಎಂದಿದ್ದಾರೆ. ಆದರೆ ಮುಂದಿನ ವರ್ಷದ ಐಪಿಎಲ್​ಗೆ ಹರಾಜು ನಡೆಯುವ ಮುನ್ನ ಧೋನಿ ನಿವೃತ್ತಿ ಹೇಳು ಸಾಧ್ಯತೆಯೂ ಇದೆ.

ರಾಯುಡುಗೆ ಕಪ್​ ಒಪ್ಪಿಸಿದ ಧೋನಿ:ಕಪ್​ನ್ನು ತಂಡದ ನಾಯಕನಾಗಿ ಹೋಗಿ ಸ್ವೀಕರಿಸುವುದು ವಾಡಿಕೆ. ಆದರೆ, ಧೋನಿ ಕಪ್​ ಸ್ವೀಕರಿಸಲು ಒಬ್ಬರೇ ಹೋಗಲಿಲ್ಲ. ತನ್ನ ಜೊತೆ ರಾಯುಡು ಹಾಗೂ ಜಡೇಜ ಅವರನ್ನು ಕರೆದುಕೊಂಡು ಹೋಗಿದ್ದರು. ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರಿಂದ ನಡುವಿನಲ್ಲಿ ನಿಂತು ರಾಯುಡು ಕಪ್​ ಸ್ವೀಕರಿಸಿದರೆ ಧೋನಿ ಮತ್ತು ಜಡೇಜಾ ಎಡ ಬಲದಲ್ಲಿ ನಿಂತಿದ್ದರು.

ಸಂಭ್ರಮದಲ್ಲೂ ಧೋನಿ ದೂರ:ಕಪ್​ ಗೆದ್ದ ಸಂಭ್ರಮದಲ್ಲಿ ಇಡೀ ತಂಡ ವೇದಿಕೆಯ ಮೇಲೆ ಸಂಭ್ರಮಿಸುತ್ತಿದ್ದರೆ. ಧೋನಿ ಕಪ್ ಅ​ನ್ನು ಯುವ ಆಟಗಾರರ ಕೈಗೆ ಕೊಟ್ಟು ವೇದಿಕೆ ಒಂದು ಬದಿಯಲ್ಲಿ ನಿಂತಿದ್ದರು. ಧೋನಿಯ ಈ ನಡೆ ಹೊಸತೇನಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿಶ್ವ ಕಪ್​ಗಳನ್ನು ಜಯಿಸಿದಾಗಲೂ ಇದೇ ರೀತಿ ನಡೆದುಕೊಂಡಿದ್ದರು.

ಆರನೇ ಐಪಿಎಲ್​ ಕಪ್​ ಎತ್ತಿದ ರಾಯುಡು: ಮುಂಬೈ ಇಂಡಿಯನ್ಸ್​ನಲ್ಲಿ 2013, 2015 ಮತ್ತು 2017 ಮತ್ತು ಚೆನ್ನೈನಲ್ಲಿ 2018, 2021 ಮತ್ತು 2023ರಲ್ಲಿ ಒಟ್ಟು ಆರು ಬಾರಿ ಟ್ರೋಫಿ ವಿಜಯದ ಸಮಯದಲ್ಲಿದ್ದರು.

ಇದನ್ನೂ ಓದಿ:ಐಪಿಎಲ್​ ಟ್ರೋಫಿಗೆ ವಿಶೇಷ ಪೂಜೆ ಮಾಡಿಸಿದ ಸಿಎಸ್​ಕೆ ಮಾಲೀಕ ಎನ್​ ಶ್ರೀನಿವಾಸ್​

ABOUT THE AUTHOR

...view details