ನವದೆಹಲಿ:2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೊದಲ ಪಂದ್ಯಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಭಾರಿ ಹಿನ್ನಡೆ ಅನುಭವಿಸಿದೆ. ಹೌದು, ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್ ಟೂರ್ನಿಯ ಆರಂಭಿಕ ಹಂತದಲ್ಲಿ ಆಡುವುದು ಅನುಮಾನವಾಗಿದೆ. ಜನವರಿಯಲ್ಲಿ ನಡೆದ ಎಸ್ಸಿಜಿ ಟೆಸ್ಟ್ನಲ್ಲಿ ಬೌಲಿಂಗ್ ಮಾಡಿದ ನಂತರ ಹ್ಯಾಜಲ್ವುಡ್ ಗಾಯದ ಸಮಸ್ಯೆಗಳನ್ನು ಎದುರಿಸಿದರು. ಅದು ಅವರನ್ನು ಭಾರತದಲ್ಲಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದ ಹೊರಗುಳಿಯುವಂತೆ ಮಾಡಿತು.
ಗಾಯ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಹ್ಯಾಜಲ್ವುಡ್:ಮಾಹಿತಿಯ ಪ್ರಕಾರ, ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್ ಭಾರತದಲ್ಲಿನ ಮೊದಲ ಎರಡು ಟೆಸ್ಟ್ಗಳಲ್ಲಿ ಅಲಭ್ಯವಾದ ನಂತರ ಸಿಡ್ನಿಗೆ ಮರಳಿದರು. ಐಪಿಎಲ್ಗೆ ಪ್ರಯಾಣ ಆರಂಭಿಸುವ ಮೊದಲು, ಆಸ್ಟ್ರೇಲಿಯಾ ಕ್ರಿಕೆಟ್ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಮಾಲೋಚಿಸಲಿದ್ದಾರೆ. 32 ವರ್ಷದ ಆಸ್ಟ್ರೇಲಿಯನ್ ಕ್ರಿಕೆಟರ್, ನಂತರ ಪಂದ್ಯಾವಳಿಯಲ್ಲಿ ಫ್ರಾಂಚೈಸಿಗೆ ಸೇರುವ ನಿರೀಕ್ಷೆಯಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಅವರ 'ಸಾರ್ವಕಾಲಿಕ ಶ್ರೇಷ್ಠ' ಕ್ರಿಕೆಟಿಗರು ಯಾರು ಗೊತ್ತೇ?
ಆರಂಭಿಕ ಪಂದ್ಯದಿಂದ ಹೊರಗುಳಿಯಲಿರುವ ಸ್ಫೋಟಕ ಬ್ಯಾಟ್ಸಮನ್ ಮ್ಯಾಕ್ಸ್ವೆಲ್:ಮತ್ತೊಂದು ಪ್ರಮುಖ ಹಿನ್ನಡೆ ಎಂದರೆ, ಗ್ಲೆನ್ ಮ್ಯಾಕ್ಸ್ವೆಲ್ ಈ ತಿಂಗಳ ಆರಂಭದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾದ ಕೊನೆಯ ಎರಡು ಓಡಿಐಗಳಿಂದ ಹೊರಗುಳಿದಿದ್ದರು. ಜೊತೆಗೆ ಆರ್ಸಿಬಿ ಐಪಿಎಲ್ನ ಆರಂಭಿಕ ಪಂದ್ಯದಿಂದ ಹೊರಗುಳಿವ ಸಾಧ್ಯತೆಯಿದೆ. ರಾಷ್ಟ್ರೀಯ ಆಯ್ಕೆಗಾರ ಜಾರ್ಜ್ ಬೈಲಿ ಪ್ರಕಾರ, ಮ್ಯಾಕ್ಸ್ವೆಲ್ ಅವರು ಐಪಿಎಲ್ ಕ್ರಿಕೆಟ್ಗೆ ನಿರೀಕ್ಷೆಯಂತೆ ವಾಪಸ್ ಆಗಲಿದ್ದಾರೆ. ಏಪ್ರಿಲ್ 2ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯಕ್ಕೆ ಫಿಟ್ ಆಗಲು ಆರ್ಸಿಬಿಯೊಂದಿಗೆ ಜಿಮ್ನಲ್ಲಿ ಬೆವರಿಳಿಸುತ್ತಿದ್ದಾರೆ.
ಇದನ್ನೂ ಓದಿ:IPL 2023: ನಾಳೆಯಿಂದ ಐಪಿಎಲ್ ಹಬ್ಬ; ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ, ತಮನ್ನಾ ನೃತ್ಯ ಝಲಕ್!