ಹೈದರಾಬಾದ್:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅನೇಕ ಪಂದ್ಯಗಳಲ್ಲಿ ಮಹತ್ವದ ಪ್ರದರ್ಶನ ನೀಡಿ, ಫಿನಿಶರ್ ಪಾತ್ರ ನಿರ್ವಹಿಸುತ್ತಿರುವ ದಿನೇಶ್ ಕಾರ್ತಿಕ್ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಇದರ ಮಧ್ಯೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಅವರನ್ನ ಆಯ್ಕೆ ಮಾಡಬೇಕೆಂಬ ತೀವ್ರ ಬಯಕೆ ಸಹ ವ್ಯಕ್ತವಾಗ್ತಿದೆ. ಈ ವಿಚಾರವಾಗಿ ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಮಾತನಾಡಿದ್ದಾರೆ.
![in article image in article image](https://etvbharatimages.akamaized.net/etvbharat/prod-images/768-512-13926677-883-13926677-1639662660622_1205newsroom_1652354988_503.jpg)
ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸಂದರ್ಭದಲ್ಲಿ ನಾನು-ಕಾರ್ತಿಕ್ ಒಟ್ಟಿಗೆ ಕಾಮೆಂಟರಿ ಮಾಡಿದ್ದೆವು. ಅದಕ್ಕೂ ಮುಂಚಿತವಾಗಿ ಕ್ವಾರಂಟೈನ್ನಲ್ಲಿದ್ದಾಗ ಸಾಕಷ್ಟು ಸಮಯ ಒಟ್ಟಿಗೆ ಕಳೆದಿದ್ದೇವೆ. ಆ ಸಂದರ್ಭದಲ್ಲೂ 2021ರ ಟಿ20 ವಿಶ್ವಕಪ್ಗೆ ಆಯ್ಕೆಯಾಗುವ ಬಗ್ಗೆ ನನ್ನ ಜೊತೆ ದಿನೇಶ್ ಮಾತನಾಡಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದೀಗ ಐಪಿಎಲ್ನಲ್ಲಿ ಅತ್ಯುತ್ತಮವಾದ ಪ್ರದರ್ಶನ ನೀಡುತ್ತಿರುವ ಅವರು, ಮುಂಬರುವ ಟಿ20 ವಿಶ್ವಕಪ್ಗೆ ಬ್ಯಾಟಿಂಗ್ ಪ್ರದರ್ಶನದ ಆಧಾರದ ಮೇಲೆ ಆಯ್ಕೆಯಾಗಬೇಕು ಎಂದಿದ್ದಾರೆ.