ದುಬೈ: ಭಾನುವಾರ ಸಂಜೆ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್(CSK) 9ನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿತು. ಸಿಎಸ್‌ಕೆ ಕ್ವಾಲಿಫೈಯರ್ ಪಂದ್ಯ ಗೆಲ್ಲುತ್ತಿದ್ದಂತೆ ಇತ್ತ ಸ್ಟೇಡಿಯಂನಲ್ಲೊಂದು ಭಾವನಾತ್ಮಕ ಸನ್ನಿವೇಶವೂ ನಡೆಯಿತು.
M.S.Dhoni: ರೋಮಾಂಚಕ ಬ್ಯಾಟಿಂಗ್ ಬಳಿಕ ಪುಟ್ಟ ಅಭಿಮಾನಿಗೆ ಬಾಲ್ ಗಿಫ್ಟ್ ಮಾಡಿದ ಧೋನಿ - ದುಬೈನಲ್ಲಿ ಐಪಿಎಲ್
ಡೆಲ್ಲಿ ವಿರುದ್ಧದ ಪಂದ್ಯದುದ್ದಕ್ಕೂ ಬೆಂಬಲ ನೀಡಿದ ಪುಟ್ಟ ಅಭಿಮಾನಿಯೊಬ್ಬರಿಗೆ ಎಂ.ಎಸ್.ಧೋನಿ ತಾವು ಸಹಿ ಮಾಡಿದ ಚೆಂಡನ್ನು ಉಡುಗೊರೆಯಾಗಿ ಕೊಟ್ಟರು.
ಆರು ಎಸೆತಗಳಲ್ಲಿ 18 ರನ್ ಸಿಡಿಸಿದ ಧೋನಿ ಪಂದ್ಯದ ಬಳಿಕ ಪಂದ್ಯದುದ್ದಕ್ಕೂ ಬೆಂಬಲ ನೀಡಿದ ಪುಟ್ಟ ಅಭಿಮಾನಿಯೊಬ್ಬರನ್ನು ಮರೆಯಲಿಲ್ಲ. ಪಂದ್ಯ ಮುಗಿದ ಬಳಿಕ ಅವರು ಬಾಲಕಿಗೆ ಸಹಿ ಮಾಡಿದ ಚೆಂಡನ್ನು ಗಿಫ್ಟ್ ಮಾಡಿದರು. ಈ ಸನ್ನಿವೇಶ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿ ನೇರಪ್ರಸಾರವಾಯಿತು.
ಈ ಬಾಲಕಿ ಸಿಎಸ್‌ಕೆ ಜಯಭೇರಿ ಬಾರಿಸುತ್ತಿದ್ದಂತೆ ಖುಷಿಯಿಂದ ನಲಿದಾಡಿ ಆನಂದಭಾಷ್ಟ ಸುರಿಸುತ್ತಿದ್ದಳು. ಇದನ್ನು ಧೋನಿ ಗಮನಿಸಿದ್ದಾರೆ. ಹೀಗಾಗಿ ತಾನು ಸಹಿ ಮಾಡಿದ ಚೆಂಡನ್ನು ಧೋನಿ ಬಾಲಕಿ ಬಳಿ ಎಸೆದಿದ್ದಾರೆ. ಆದ್ರೆ ಈ ಚೆಂಡು ಬಾಲಕಿಯ ಬಳಿಯಿದ್ದ ಸಹೋದರನ ಕೈ ಸೇರಿದೆ. ಈ ಇಬ್ಬರೂ ಧೋನಿಯ ಅಪ್ಪಟ ಅಭಿಮಾನಿಗಳು. ಈ ವೇಳೆ ಧೋನಿ ಸಹಿ ಮಾಡಿದ ಚೆಂಡಿಗಾಗಿ ಇಬ್ಬರ ಮಧ್ಯೆ ಸಣ್ಣ ಗಲಾಟೆ ನಡೆಯಿತು. ಇದನ್ನು ಗಮನಿಸಿದ ಕ್ರಿಕೆಟ್ ಕಾಮೆಂಟೇಟರ್ಸ್ ಕೂಡಾ ಅಣ್ಣ ತಂಗಿಯ ಮುಗ್ಧ ಮುನಿಸು ನೋಡಿ ಮುಸಿ ನಕ್ಕರು.