ದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯ 67ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮುಖಾಮುಖಿಯಾಗಿತ್ತಿವೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯವನ್ನು ಗೆದ್ದರೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲಿದೆ. ಈ ಮೂಲಕ ತವರು ಮೈದಾನದಲ್ಲಿ ನಡೆಯುವ ಕ್ವಾಲಿಫೈಯರ್ - 1 ನ್ನು ಆಡಲು ಎದುರು ನೋಡುತ್ತಿದೆ. ಲೀಗ್ನ ಕೊನೆಯ ಪಂದ್ಯವನ್ನು ಉಭಯ ತಂಡಗಳು ಆಡುತ್ತಿದ್ದು, ಇಂದು ಚೆನ್ನೈ ಗೆದ್ದಲ್ಲಿ ಪ್ಲೇ ಆಫ್ ಅಧಿಕೃತ ಪ್ರವೇಶ ಪಡೆಯಲಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ನ ವಿರುದ್ಧ ಚೆನ್ನೈ ಸೋಲನುಭವಿಸಿದ್ದು, ಪ್ಲೇ ಆಫ್ ಪ್ರವೇಶ ಕಾಯ್ದಿರಿಸಿತ್ತು. ಇಂದು ಚೆನ್ನೈ ಸೋತಲ್ಲಿ ಸಂಜೆ ನಡೆಯುವ ಪಂದ್ಯದಲ್ಲಿ ಲಕ್ನೋ ಗೆದ್ದರೆ ಎರಡನೇ ಸ್ಥಾನ ಪಡೆಯಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಈ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಈಗಾಗಲೇ ಲೀಗ್ನಿಂದ ಹೊರಬಿದ್ದಿದೆ. ಆದರೆ ಕಳೆದ ಪಂದ್ಯದಲ್ಲಿ ಡೇವಿಡ್ ವಾರ್ನರ್, ಫೃಥ್ವಿ ಶಾ ಮತ್ತು ಸಾಲ್ಟ್ ಉತ್ತಮ ಪ್ರದರ್ಶನ ನೀಡಿ ಪಂಜಾಬ್ ಕಿಂಗ್ಸ್ ಮಣಿಸಿತ್ತು. ಡೆಲ್ಲಿ ಲೀಗ್ನಿಂದ ಹೊರ ಬಿದ್ದರೂ ಔಪಚಾರಿಕ ಪಂದ್ಯದಲ್ಲಿ ತಮ್ಮ ಬೆಸ್ಟ್ ನೀಡಿತ್ತಿದ್ದು, ಎದುರಾಳಿಗೆ ಕಾಡುತ್ತಿದ್ದಾರೆ. ಇಂದರಿಂದ ಇಂದು ಚೆನ್ನೈ ತವರು ನೆಲದಲ್ಲಿ ಕಟ್ಟಿ ಹಾಕುವ ಚಿಂತನೆಯಲ್ಲಿದೆ ವಾರ್ನರ್ ಪಾಳಯ.
13 ಪಂದ್ಯವನ್ನು ಆಡಿರುವ ಚೆನ್ನೈ 7 ಪಂದ್ಯ ಗೆದ್ದು ಒಂದು ರದ್ದಾದ ಹಿನ್ನಲೆ ಒಟ್ಟು 15 ಅಂಕಗಳನ್ನು ಗಳಿಸಿದೆ. ಮೂರನೇ ಸ್ಥಾನದಲ್ಲಿ ಲಕ್ನೋ ಕೂಡಾ 15 ಅಂಕಗಳನ್ನು ಹೊಂದಿದ್ದು ರನ್ ರೇಟ್ ಮಾತ್ರ ಕಡಿಮೆ ಇದೆ. ಚೆನ್ನೈ ಈ ಪಂದ್ಯ ಸೋತಲ್ಲಿ ಎರಡನೇ ಸ್ಥಾನ ಕಳೆದು ಕೊಳ್ಳುವ ಸಾಧ್ಯತೆ ಇದೆ. ದ್ವಿತೀಯ ಸ್ಥಾನಕ್ಕಾಗಿ ಲಕ್ನೋ ಮತ್ತು ಆರ್ಸಿಬಿ ರೇಸ್ನಲ್ಲಿದೆ.