ಹೈದರಾಬಾದ್ (ತೆಲಂಗಾಣ): ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ಗೆ ನಿನ್ನೆಯ ಸನ್ ರೈಸರ್ಸ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಹೈದರಾಬಾದ್ನಲ್ಲಿ ಸನ್ ರೈಸರ್ಸ್ ವಿರುದ್ಧ 7 ರನ್ನಿಂದ ಜಯ ಸಾಧಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ನಲ್ಲಿ ಎರಡನೇ ಗೆಲುವನ್ನು ಕಂಡಿದೆ.
ಡೆಲ್ಲಿ ನಿನ್ನೆ ನಡೆಸಿದ ಕರಾರುವಕ್ಕು ಬೌಲಿಂಗ್ನಿಂದ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಲಟ್ಸ್ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿತ್ತು. ಹೈದರಾಬಾದ್ನ ಬೌಲರ್ಗಳು ಡೆಲ್ಲಿಯನ್ನು ಕಾಡಿದ್ದರು. ಆದರೆ ಅಕ್ಷರ್ ಪಟೇಲ್ ಮತ್ತು ಮನೀಷ್ ಪಾಂಡೆ ತಂಡಕ್ಕೆ ಕೊಂಚ ರನ್ ಸೇರಿಸಿ ಆಸರೆಯಾದರು. ಪೃಥ್ವಿ ಶಾ ಅವರನ್ನು ಬಿಟ್ಟು ಆರಂಭಿಕರಾಗಿ ಸಾಲ್ಟನ್ನು ಕಣಕ್ಕಿಳಿಸಲಾಗಿತ್ತು. ಆದರೆ ಸಾಲ್ಟ್ ಶೂನ್ಯಕ್ಕೆ ಔಟ್ ಆಗಿ ಮತ್ತೆ ವಾರ್ನರ್ ಏಕಾಂಗಿಯಾದರು.
ವಾರ್ನರ್ಗೆ ವಿಚೆಲ್ ಮಾರ್ಷ ಸಾಥ್ ನೀಡಿದರೂ ಸಹ, ಇಬ್ಬರಿಂದ ದೊಡ್ಡ ಜೊತೆಯಾಟ ಬರಲಿಲ್ಲ. ಇಬ್ಬರ ವಿಕೆಟ್ ಪತನದ ನಂತರ ಮನೀಷ್ ಪಾಂಡೆ ಮತ್ತು ಅಕ್ಷರ್ ಪಟೇಲ್ ಜೊತೆಯಾಟ ಮಾಡಿ ತಂಡ ನೂರು ರನ್ ಒಳಗೆ ಆಲ್ಔಟ್ ಆಗುವುದನ್ನು ತಪ್ಪಿಸಿದರು. ಕೊನೆಯಲ್ಲಿ ಇವರಿಬ್ಬರ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 144 ರನ್ ಗಳಿಸಿತು. ಆದರೆ 9 ವಿಕೆಟ್ನ್ನು ಕಳೆದುಕೊಂಡಿತು.
145 ರನ್ನ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ಗೆ ಡೆಲ್ಲಿ ಬೌಲರ್ಗಳು ಕಾಡಿದರು. ಒಂದೆಡೆ ವಿಕೆಟ್ ಬೀಳುತ್ತಾ ಬಂದರೆ ಮಾಯಂಕ್ ಅಗರ್ವಾಲ್ ಗೆಲುವಿನ ರನ್ ಗಳಿಸಲು ಪ್ರಯತ್ನಿಸಿದರು. ಕೊನೆಯಲ್ಲಿ ಕ್ಲಾಸೆನ್ಸ್ ಮತ್ತು ವಾಷಿಂಗ್ಟನ್ ಸುಂದರ್ ಪ್ರಯತ್ನಿಸಿದರೂ ಸನ್ ರೈಸರ್ಸ್ಗೆ ಗೆಲುವು ಸಾಧ್ಯವಾಗಲಿಲ್ಲ. ನಿಗದಿತ ಓವರ್ ಅಂತ್ಯಕ್ಕೆ ಹೈದರಾಬಾದ್ ತಂಡ 6 ವಿಕೆಟ್ ನಷ್ಟಕ್ಕೆ 137 ರನ್ ಮಾತ್ರ ಗಳಿಸಿತ್ತು. 144 ರನ್ನ ಗುರಿಯನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಬೌಲಿಂಗ್ ತಡವಾಗಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ಗೆ ದಂಡ ವಿಧಿಸಲಾಗಿದೆ. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿದೆ. ಹೀಗಾಗಿ ವಾರ್ನರ್ಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಕ್ಷಿಪ್ತ ಸ್ಕೋರ್: ಡೆಲ್ಲಿ ಕ್ಯಾಪಿಟಲ್ಸ್ (ಮನೀಷ್ ಪಾಂಡೆ 34, ಅಕ್ಷರ್ ಪಟೇಲ್ 34, ಮಿಚಲ್ ಮಾರ್ಷ್ 25 ವಾಷಿಂಗ್ಟನ್ ಸುಂದರ್ 3/28) 144/9, ಸನ್ ರೈಸರ್ಸ್ ಹೈದರಾಬಾದ್ (ಮಾಯಾಂಕ್ ಅಗರ್ವಾಲ್ 49, ಕ್ಲಾಸೆನ್ 31, ಅಕ್ಷರ್ ಪಟೇಲ್ 2/21) 137/6
ಇದನ್ನೂ ಓದಿ:ಟೆಸ್ಟ್ ಚಾಂಪಿಯನ್ ಶಿಪ್ಗೆ ಸ್ಟಾರ್ ಬೌಲರ್ ಜಸ್ಪ್ರೀತ್ ಬೂಮ್ರಾಗಿಲ್ಲ ಸ್ಥಾನ