ಕ್ರಿಕೆಟ್ ಹಲವು ವರ್ಷಗಳಿಂದ ಹಲವಾರು ಕುತೂಹಲಕಾರಿ ರೀತಿಯಲ್ಲಿ ಪ್ರೇಕ್ಷಕರನ್ನು ರಂಜಿಸಿದೆ. ಚುಟುಕು ಕ್ರಿಕೆಟ್ ಬಂದ ನಂತರವಂತೂ ಉತ್ಸಾಹದ ಮಟ್ಟ ಹೆಚ್ಚಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಪರಿಚಯದ ನಂತರ ಭಾರತದಲ್ಲಿ ಕ್ರಿಕೆಟ್ ಮತ್ತಷ್ಟು ಅಭಿನಮಾನಿಗಳನ್ನು ಹೆಚ್ಚಿಸಿಕೊಂಡಿತು. ವಿದೇಶಿ ಆಟಗಾರರು ಭಾರತೀಯ ಅಭಿಮಾನಿಗಳಿಗೆ ಹತ್ತಿರವಾದರು.
ಆಟಗಾರರ ಮೇಲಿನ ಕುತೂಹಲ ಮತ್ತು ಉತ್ಸಾಹ ಕೆಲವೊಮ್ಮೆ ತಪ್ಪುಗಳನ್ನೂ ಮಾಡಿಸುತ್ತದೆ. ಹೌದು. ಇತ್ತೀಚೆಗೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರಿಗೆ ಸೇರಿದ ಕೆಲವು ವಸ್ತುಗಳು ಮತ್ತು ಕ್ರಿಕೆಟ್‌ನಲ್ಲಿ ಬಳಸುವ ಉಪಕರಣಗಳು ಕಾಣೆಯಾಗಿದ್ದವು. ಮುಖ್ಯವಾಗಿ ಡೆಲ್ಲಿಯ ನಾಯಕ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಕೆಲವು ಬ್ಯಾಟ್‌ಗಳು ಮತ್ತು ಇತರ ಕ್ರಿಕೆಟ್ನ ವಸ್ತುಗಳನ್ನು ಕಳೆದುಕೊಂಡಿದ್ದರು.
ಕಳ್ಳತನದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಲಾಜಿಸ್ಟಿಕ್ಸ್ ಕಂಪನಿ ಬೆಂಗಳೂರಿನಲ್ಲಿ ದೂರು ನೀಡಿ ಪ್ರಕರಣವನ್ನು ಇತ್ಯರ್ಥಪಡಿಸಲು ಪೊಲೀಸರ ಸಹಾಯ ಕೋರಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಬ್ಯಾಟ್ ಮತ್ತು ಇತರೆ ಆಟದ ಸಾಮಗ್ರಿಗಳನ್ನು ಸಾಗಿಸಲು ಲಾಜಿಸ್ಟಿಕ್ಸ್ ಸಂಸ್ಥೆಯೊಂದರ ಸೇವೆ ಪಡೆಯಲಾಗಿತ್ತು. ಬೆಂಗಳೂರಿನಿಂದ ಸಾಗಿಸುವಾಗ ಸುಮಾರು 16 ಲಕ್ಷ ರೂ ಮೌಲ್ಯದ ಸರಕುಗಳು ಕಾಣೆಯಾಗಿದ್ದವು ಎಂದು ವರದಿಯಾಗಿತ್ತು.
ಇದನ್ನೂ ಓದಿ:Twitter blue tick: ಘಟಾನುಘಟಿ ಕ್ರಿಕೆಟಿಗರ ಟ್ವಿಟರ್ ಬ್ಲೂ ಟಿಕ್ ಮಾಯ!