ಮುಂಬೈ:ಭಾರತ ತಂಡದ ಆಲ್ರೌಂಡರ್ ದೀಪಕ್ ಹೂಡ ಮೊದಲ ಬಾರಿಗೆ ತಮ್ಮ ಮತ್ತು ಕೃನಾಲ್ ಪಾಂಡ್ಯ ಜೊತೆಗಿನ ಸಂಬಂಧ ಹೇಗಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಕಳೆದ ವರ್ಷ ಬರೋಡ ತಂಡದ ಬಯೋಬಬಲ್ ವೇಳೆ ಈ ಇಬ್ಬರು ಆಟಗಾರರ ನಡುವೆ ವೈಮನಸ್ಸು ಏರ್ಪಟ್ಟಿತ್ತು.
ಸೈಯದ್ ಮುಸ್ತಾಕ್ ಅಲಿ ಟೂರ್ನಮೆಂಟ್ ವೇಳೆ ತಂಡ ಒಟ್ಟಾಗಿ ಸೇರಿದ್ದ ವೇಳೆ ಕೃನಾಲ್ ತಮ್ಮನ್ನು ಹೀಯಾಳಿಸಿದ್ದಾರೆ ಮತ್ತು ತಮ್ಮ ಜೊತೆಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ದೀಪಕ್ ದೂರು ನೀಡಿದ್ದರು. ನಂತರ ತಂಡವನ್ನು ತ್ಯಜಿಸಿ ರಾಜಸ್ಥಾನ್ ಡೊಮೆಸ್ಟಿಕ್ ತಂಡ ಸೇರಿದ್ದರು.
ಆದರೆ ಈ ಜೋಡಿ 2022ರ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದರು. ಆದರೆ ಇಬ್ಬರ ನಡುವೆ ವೈಮಸ್ಸು ಇರುವುದರಿಂದ ಹೇಗೆ ತಂಡದಲ್ಲಿ ಒಟ್ಟಿಗೆ ಆಡಲಿದ್ದಾರೆ, ಇಬ್ಬರ ನಡುವೆ ವಿಷಯಗಳು ಹೇಗೆ ಬದಲಾಗಬಹುದೇ ಎಂಬ ಊಹಾಪೋಹಗಳೆದ್ದಿದ್ದವು, ಆದರೆ ಈ ಜೋಡಿ ಕೊನೆಗೆ ಒಟ್ಟಾಗಿ ತಂಡಕ್ಕೋಸ್ಕರ ಆಡುವ ಮೂಲಕ ದ್ವೇಷವನ್ನು ಮರೆತಿದ್ದಾರೆ.