ಮುಂಬೈ: ಗಾಯದ ಸಮಸ್ಯೆಯಿಂದಾಗಿ ಐಪಿಎಲ್ 2023 ರಿಂದ ಹೊರಗುಳಿದಿರುವ ಕೇನ್ ವಿಲಿಯಮ್ಸನ್ ಸ್ಥಾನವನ್ನು ಗುಜರಾತ್ ಟೈಟಾನ್ಸ್ ಪ್ರಕಟಿಸಿದೆ. ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಬಲಗಾಲಿಗೆ ಗಾಯ ಮಾಡಿಕೊಂಡ ಕೇನ್ ಬದಲಿಗೆ ಶ್ರೀಲಂಕಾದ ದಸುನ್ ಶನಕಾ ಅವರನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಸೇರಿಸಿಕೊಂಡಿದೆ. ಮಾರ್ಚ್ 31ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ವಿಲಿಯನ್ಸ್ ಗಾಯಕ್ಕೆ ತುತ್ತಾಗಿದ್ದರು.
ಶ್ರೀಲಂಕಾದ ವೈಟ್-ಬಾಲ್ ಕ್ರಿಕೆಟ್ ನಾಯಕ ಶನಕ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ಆಗಿದ್ದು, ಬಲಗೈ ಸೀಮ್ ಬೌಲಿಂಗ್ ಮಾಡಬಲ್ಲರು. ಭಾರತದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಶನಕ 62.00 ಸರಾಸರಿಯಲ್ಲಿ 187 ಸ್ಟ್ರೈಕ್ ರೇಟ್‌ನಲ್ಲಿ ಮೂರು ಇನ್ನಿಂಗ್ಸ್ ಮೂಲಕ 124 ರನ್ ಸಿಡಿಸಿದ್ದರು. ಮೂಲ ಬೆಲೆ 50 ಲಕ್ಷ ರೂಪಾಯಿಗೆ ಖರೀದಿಸಲಾಗಿತ್ತು. ಶನಕ ಅವರಿಗೆ ಇದು ಮೊದಲ ಐಪಿಎಲ್ ಆವೃತ್ತಿ. ಈ ವರ್ಷದ ಮಿನಿ ಹರಾಜಿನಲ್ಲಿ ಯಾವುದೇ ತಂಡ ಬಿಡ್ ಮಾಡಿರಲಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೇನ್ ವಿಲಿಯಮ್ಸನ್ ಗಾಯಗೊಂಡಿದ್ದರು. ಸಿಎಸ್‌ಕೆ ಇನ್ನಿಂಗ್ಸ್‌ನ 13 ನೇ ಓವರ್‌ನಲ್ಲಿ ವಿಲಿಯಮ್ಸನ್ ಬೌಂಡರಿ ಗೆರೆಯಲ್ಲಿ ಋತುರಾಜ್ ಗಾಯಕ್ವಾಡ್ ಹೊಡೆದ ಏರಿಯಲ್ ಶಾಟ್ ಅನ್ನು ಕ್ಯಾಚ್ ಆಗಿ ಪರಿವರ್ತಿಸಲು ಪ್ರಯತ್ನಿಸಿದ್ದರು.