ಅಹಮದಾಬಾದ್: 2023 ರ ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ಗೆ ಸೋಲುಣಿಸಿದ ಚೆನ್ನೈ ಸೂಪರ್‌ಕಿಂಗ್ಸ್ (ಸಿಎಸ್‌ಕೆ) 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಮಿಳುನಾಡು ಸಿಎಂ ಸ್ಟಾಲಿನ್, ಗೂಗಲ್ ಸಿಇಒ ಸುಂದರ್ ಪಿಚೈ, ಬಾಲಿವುಡ್ ನಟ ರಣವೀರ್ ಸಿಂಗ್, ನಟಿ ತ್ರಿಶಾ, ವರಲಕ್ಷ್ಮಿ ಶರತ್‌ಕುಮಾರ್, ಕೀರ್ತಿ ಸುರೇಶ್, ನಟ ವಿಕ್ಕಿ ಕೌಶಲ್, ಅನಿರುದ್ಧ್ ರವಿಚಂದರ್ ಸೇರಿದಂತೆ ಹಲವಾರು ಚಿತ್ರರಂಗದ ತಾರೆಯರು ತಂಡದ ಗೆಲುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಸಿಎಸ್‌ಕೆ ಅನ್ನು GOAT (ಸಾರ್ವಕಾಲಿಕ ಶ್ರೇಷ್ಠ) ಎಂದು ಕರೆದಿದ್ದಾರೆ. ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.
ಐತಿಹಾಸಿಕ ಜಯ- ತಮಿಳುನಾಡು ಸಿಎಂ: "ಇದು ಅತ್ಯುತ್ತಮ ಕ್ರಿಕೆಟ್ ಪಂದ್ಯ. ಪ್ರತಿಕೂಲ ಪರಿಸ್ಥಿತಿಯಲ್ಲಿ ತನ್ನ ಗುರಿ ಬೆನ್ನಟ್ಟಿದ ಜಡೇಜಾ ಸಿಎಸ್‌ಕೆಗೆ ಐತಿಹಾಸಿಕ ಜಯವನ್ನು ಮುಡಿಗೇರಿಸಿದ್ದಾರೆ. ತಂಡಕ್ಕೆ ಅಭಿನಂದನೆಗಳು" ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
ಈ ವರ್ಷದ ಐಪಿಎಲ್‌ನಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ನೆಚ್ಚಿನ ತಂಡಗಳನ್ನು ಹುರಿದುಂಬಿಸಲು ದೇಶಾದ್ಯಂತದ ಕ್ರಿಕೆಟ್ ಸ್ಟೇಡಿಯಂಗಳಿಗೆ ಆಗಮಿಸಿದ್ದರು. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಧನುಷ್, ತ್ರಿಶಾ ಮತ್ತು ಶಿವಕಾರ್ತಿಕೇಯನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪಂದ್ಯವನ್ನು ವೀಕ್ಷಿಸಿದ್ದರು.
ರಣವೀರ್ ಸಿಂಗ್ ಅವರು ಸಿಎಸ್‌ಕೆ, ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ ಅವರನ್ನು ಹುರಿದುಂಬಿಸುವ ಸರಣಿ ಟ್ವೀಟ್‌ಗಳನ್ನು ಹಂಚಿಕೊಂಡಿದ್ದಾರೆ.
ಮೂಕವಿಸ್ಮಿತನಾಗಿದ್ದೇನೆ- ತ್ರಿಶಾ: ನಟಿ ತ್ರಿಶಾ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ "ಸಿಎಸ್‌ಕೆಗೆ ನಾನು ಮೂಕವಿಸ್ಮಿತನಾಗಿದ್ದೇನೆ. Yasssssss yaaaasssss yassssss!!!! (sic)" ಎಂದು ಬರೆದಿದ್ದಾರೆ. ಸಿಎಸ್‌ಕೆ ಗೆಲುವಿನ ನಂತರ ವರಲಕ್ಷ್ಮಿ ಶರತ್‌ಕುಮಾರ್, ಕೀರ್ತಿ ಸುರೇಶ್ ಮತ್ತು ಅನಿರುದ್ಧ ಭಾವಪರವಶರಾಗಿದ್ದಾರೆ.