ಮುಂಬೈ:ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ನ 2ನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 188 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ಅನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ವಿಕೆಟ್ ಕಳೆದುಕೊಂಡು 18.4 ಓವರ್ಗಳಲ್ಲಿ ಗೆಲುವಿನ ಗುರಿ ಮುಟ್ಟಿತು.
ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್- ಪೃಥ್ವಿ ಶಾ 10ಕ್ಕೂ ಹೆಚ್ಚು ಸರಾಸರಿ ರನ್ ರೇಟ್ನಲ್ಲಿ ಮೊದಲ ವಿಕೆಟ್ಗೆ 138 ರನ್ ಪೇರಿಸಿದರು. ಅಮೋಘ 72 (38) ರನ್ ಚಚ್ಚಿದ ಪೃಥ್ವಿ ಶಾ, ಡ್ವೇನ್ ಬ್ರಾವೋ ಎಸೆತದಲ್ಲಿ ಮೊಯೀನ್ ಅಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 54 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್ ಮೂಲಕ 85 ರನ್ಗಳಿಸಿದ ಧವನ್, ಠಾಕೂರ್ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ನಾಯಕ ರಿಷಭ್ ಪಂತ್ 15 (12) ರನ್ ಪೇರಿಸಿ ತಂಡವನ್ನು ಗೆಲಿವಿನತ್ತ ಕೊಂಡೊಯ್ದರು. ವೇಗವಾಗಿ ಬ್ಯಾಟಿಂಗ್ ಬೀಸಿ ಉತ್ತಮವಾಗಿ ಲಯ ಕಂಡುಕೊಳ್ಳುತ್ತಿದ್ದ ಮಾರ್ಕಸ್ ಸ್ಟೋಯಿನಿಸ್ 14(9) ರನ್ಗಳಿಸಿ ಠಾಕೂರ್ಗೆ ವಿಕೆಟ್ ಒಪ್ಪಿಸಿದರು.