ಕರ್ನಾಟಕ

karnataka

ETV Bharat / sports

ಪೇಸರ್​ಗೆ ಕ್ಲೀನ್​ ಬೋಲ್ಡ್! ರುತುರಾಜ್ ಗಾಯಕ್ವಾಡ್​​ ಕೈ ಹಿಡಿಯುವ ಮಹಿಳಾ ಕ್ರಿಕೆಟರ್​ ಯಾರು ಗೊತ್ತಾ? - ಸಿಎಸ್‌ಕೆ ಗೆಲುವಿನ ನಂತರ ರುತುರಾಜ್ ಗಾಯಕ್ವಾಡ್

ಮಹಾರಾಷ್ಟ್ರ ಕ್ರಿಕೆಟಿಗ, ಸಿಎಸ್​ಕೆ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಬದುಕಿನ ಎರಡನೇ ಇನ್ನಿಂಗ್ಸ್‌ ಆರಂಭಿಸುವ ಖುಷಿಯಲ್ಲಿದ್ದಾರೆ.

cricketer ruturaj gaikwad wedding date  women cricketer utkarsha pawar  utkarsha pawar news  ರುತುರಾಜ್​​ ಕೈ ಹಿಡಿಯಲಿರುವ ಆ ಮಹಿಳಾ ಕ್ರಿಕೆಟರ್​ ಫೇಸರ್​ಗೆ ಕ್ಲೀನ್​ ಬೋಲ್ಡ್ ಆದ ಗಾಯಕ್ವಾಡ್  ಸಿಎಸ್​ಕೆ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್  ಗಾಯಕ್ವಾಡ್ ದಾಂಪತ್ಯ ಜೀವನ  ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್  ಸ್ಟಾರ್ ಆಟಗಾರ ರುತುರಾಜ್ ಗಾಯಕ್ವಾಡ್  ಸಿಎಸ್‌ಕೆ ಗೆಲುವಿನ ನಂತರ ರುತುರಾಜ್ ಗಾಯಕ್ವಾಡ್  ನಾಯಕ ಧೋನಿ ಅವರೊಂದಿಗೆ ಫೋಟೋ
ಫೇಸರ್​ಗೆ ಕ್ಲೀನ್​ ಬೋಲ್ಡ್ ಆದ ಗಾಯಕ್ವಾಡ್

By

Published : Jun 1, 2023, 1:58 PM IST

ಹೈದರಾಬಾದ್​: ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಟಗಾರ ರುತುರಾಜ್ ಗಾಯಕ್ವಾಡ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ದೇಶಿ ಕ್ರಿಕೆಟ್​ನಲ್ಲಿ ಮೇಲೇರುತ್ತಿರುವ ಉತ್ಕರ್ಷ ಪವಾರ್ ಎಂಬವರು ಕ್ರಿಕೆಟಿಗನನ್ನು ವರಿಸಲಿದ್ದಾರೆ. ಇದೇ ತಿಂಗಳ 2 ಮತ್ತು 3ರಂದು ಇಬ್ಬರೂ ಮದುವೆಯಾಗಲಿದ್ದಾರೆ. ಪುಣೆಯ ಉತ್ಕರ್ಷ ಪವಾರ್, ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರದ ಆಲ್‌ರೌಂಡರ್ ಆಗಿ ಪ್ರದರ್ಶನ ನೀಡುತ್ತಿದ್ದಾರೆ.

ಉತ್ಕರ್ಷ ಪವಾರ್ ಅವರು 13 ಅಕ್ಟೋಬರ್ 1998 ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. 11 ನೇ ವಯಸ್ಸಿನಿಂದ ಕ್ರಿಕೆಟ್ ಆಡಲು ಆರಂಭಿಸಿದರು. ಪ್ರಸ್ತುತ ಪುಣೆಯ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮತ್ತು ಫಿಟ್‌ನೆಸ್ ಸೈನ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂತಿಮ ತಂಡದಲ್ಲಿ ರುತುರಾಜ್ ಗಾಯಕ್‌ವಾಡ್‌ಗೆ ಸ್ಟ್ಯಾಂಡ್‌ಬೈ ಆಟಗಾರನಾಗಿ ಕ್ರಿಕೆಟ್ ಸಮಿತಿ ಅವಕಾಶ ನೀಡಿದೆ. ಆದರೆ, ಮದುವೆಯ ಕಾರಣದಿಂದ ಈ ಮೆಗಾ ಫೈನಲ್‌ಗೆ ಆಯ್ಕೆಯಾಗಿರುವ ತಂಡದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದರು. ಗಾಯಕ್ವಾಡ್ ಅವರು ತಮ್ಮ ಮದುವೆಯಿಂದಾಗಿ WTC ಫೈನಲ್‌ಗೆ ಲಭ್ಯವಿಲ್ಲ ಎಂದು ಈಗಾಗಲೇ ಬಿಸಿಸಿಐಗೆ ತಿಳಿಸಿದೆ. ಇದರೊಂದಿಗೆ ಮಂಡಳಿ ಅವರ ಸ್ಥಾನಕ್ಕೆ ಮತ್ತೊಬ್ಬ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಿದೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆ ಲಂಡನ್​ಗೆ ತೆರಳಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ ಜೈಸ್ವಾಲ್​.

ಇದನ್ನೂ ಓದಿ:WTC Final 2023: ಭಾರತದ ಸ್ಪಿನ್ ಬೌಲರ್​ಗಳು ಓವೆಲ್​ ಪಿಚ್​ನಲ್ಲೂ ಕಾಡುವ ಭಯ ಇದೆ - ಸ್ಟೀವ್​ ಸ್ಮಿತ್​​

ಇತ್ತೀಚೆಗೆ, ಐಪಿಎಲ್ ಫೈನಲ್‌ನಲ್ಲಿ ಸಿಎಸ್‌ಕೆ ಗೆಲುವಿನ ನಂತರ ರುತುರಾಜ್ ಗಾಯಕ್ವಾಡ್ ಮತ್ತು ಉತ್ಕರ್ಷ ಪವಾರ್ ನಾಯಕ ಧೋನಿ ಅವರೊಂದಿಗೆ ಫೋಟೋ ತೆಗೆದುಕೊಂಡು ಸಂಭ್ರಮಿಸಿದರು. ಗಾಯಕ್ವಾಡ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇಬ್ಬರು ಐಪಿಎಲ್ ಟ್ರೋಫಿಯನ್ನು ಒಟ್ಟಿಗೆ ಹಿಡಿದಿರುವ ಫೋಟೋ ಸಹ ಹಂಚಿಕೊಂಡಿದ್ದಾರೆ. ಧೋನಿ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿರುವ ಅವರು 'ನನ್ನ ಜೀವನದಲ್ಲಿ ಇಬ್ಬರು ವಿವಿಐಪಿಗಳು' ಎಂಬ ಶೀರ್ಷಿಕೆ ಬರೆದಿದ್ದಾರೆ. ಇವರ ಫೋಟೋಗಳನ್ನು ನೋಡಿದ ಕೆಲ ನೆಟ್ಟಿಗರು ಮದುವೆ ಆಗಲಿರುವ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ರುತುರಾಜ್ ಐಪಿಎಲ್ ಅಂಕಿಅಂಶಗಳು: ರುತುರಾಜ್ 2021 ರ ಐಪಿಎಲ್ ಸೀಸನ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆದರು. ಐಪಿಎಲ್ 2021 ರಲ್ಲಿ ಆರೆಂಜ್ ಕ್ಯಾಪ್ ಗೆದ್ದ ಗಾಯಕ್ವಾಡ್, ಈ ವರ್ಷದ ಋತುವಿನಲ್ಲಿ 590 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗಾಯಕ್ವಾಡ್ ಮತ್ತು ಮತ್ತೋರ್ವ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಹಲವು ಪಂದ್ಯಗಳಲ್ಲಿ ಉತ್ತಮ ಜೊತೆಯಾಟ ನೀಡಿದ್ದಾರೆ. ಫೈನಲ್ ಪಂದ್ಯದಲ್ಲೂ ಇಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿ ತಮ್ಮ ಸಾಮರ್ಥ್ಯ ತೋರಿಸಿದ್ದು ಗಮನಾರ್ಹ.

ಇದನ್ನೂ ಓದಿ:ಜೂ.ಏಷ್ಯಾ ಕಪ್‌ ಹಾಕಿ​: ಕೊರಿಯಾ ಮಣಿಸಿ ಫೈನಲ್‌ಗೇರಿದ ಭಾರತ; ಇಂದು ಪಾಕ್ ಜೊತೆ ಕಾದಾಟ

ABOUT THE AUTHOR

...view details