ಮೆಲ್ಬೋರ್ನ್: ಭಾರತಕ್ಕಾಗಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್) ಸ್ಥಾಪಿಸಿದ ಕೋವಿಡ್ ಬಿಕ್ಕಟ್ಟಿನ ಮನವಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ 37 ಲಕ್ಷ ರೂ ದೇಣಿಗೆ ಪ್ರಕಟಿಸಿದೆ.
ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಯು ದೇಣಿಗೆ ನೀಡಿದ ಹಣ (ಅಂದಾಜು 37 ಲಕ್ಷ ರೂ.) ಗಂಭೀರವಾಗಿ ಅನಾರೋಗ್ಯ ಪೀಡಿತ ರೋಗಿಗಳಿಗೆ ಆಮ್ಲಜನಕವನ್ನು ಸಂಗ್ರಹಿಸಲು, ಕೊರೊನಾ ಪೀಡಿತ ಪ್ರದೇಶಗಳಲ್ಲಿ ಪರೀಕ್ಷಾ ಸಾಧನಗಳನ್ನು ಒದಗಿಸಲು ಮತ್ತು ಕೋವಿಡ್ ಲಸಿಕೆ ಖರೀದಿಗೆ ಸಹಾಯವಾಗಲಿದೆ.
ಆಸ್ಟ್ರೇಲಿಯನ್ನರು ಮತ್ತು ಭಾರತೀಯರು ವಿಶೇಷ ಬಂಧವನ್ನು ಹೊಂದಿದ್ದಾರೆ. ಕ್ರಿಕೆಟ್ ಪ್ರೀತಿ ಆ ಸ್ನೇಹಕ್ಕೆ ಕೇಂದ್ರವಾಗಿದೆ. ಕಳೆದ ವಾರದಲ್ಲಿ ಪ್ಯಾಟ್ ಕಮ್ಮಿನ್ಸ್ ಮತ್ತು ಬ್ರೆಟ್ ಲೀ ದೇಣಿಗೆಗಳಿಂದ ನಾವೆಲ್ಲರೂ ಪ್ರಭಾವಗೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇವೆ.