ಹೈದರಾಬಾದ್: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ 38ನೇ ಪಂದ್ಯದಲ್ಲಿಂದು ಕೋಲ್ಕತ್ತಾ ನೈಟ್ ರೈಡರ್ಟ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಾದಾಟ ನಡೆಸಲಿವೆ. ಇಂದು ಸೂಪರ್ ಸಂಡೆಯಾಗಿದ್ದು, ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಸಿಎಸ್ಕೆ ಮತ್ತು ಕೆಕೆಆರ್ ತಂಡಗಳು ಎದುರಾಗಲಿವೆ.
ಈಗಾಗಲೇ ದ್ವಿತಿಯಾರ್ಧದಲ್ಲಿ ಉತ್ತಮ ಆರಂಭ ಪಡೆದಿರುವ ಎರಡೂ ತಂಡಗಳು ಆಡಿದ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿವೆ. ಚೆನ್ನೈ ತಂಡ ತನ್ನ ಜಯದ ಓಟ ಮುಂದುವರಿಸಿದ್ದರೆ, ಇತ್ತ ಕೊಲ್ಕತ್ತಾ ಕೂಡ ತನ್ನ ಬ್ಯಾಟಿಂಗ್ ಫಾರ್ಮ್ಗೆ ಮರಳಿದೆ.
ಚೆನ್ನೈ ಹಿಂದಿನ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸುಲಭ ಜಯ ದಾಖಲಿಸಿದ್ದರೆ. ಕೆಕೆಆರ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಸಿಎಸ್ಕೆ ಜಯಗಳಿಸಿದರೆ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯಲಿದೆ.
ಪ್ಲೇ ಆಫ್ ರೇಸ್ನಲ್ಲಿ ಕೋಲ್ಕತ್ತಾ ಸಹ ಇದ್ದು, ಈ ಪಂದ್ಯದಲ್ಲಿ ಜಯಗಳಿಸಿದರೆ ಮುಂದಿನ ಹಂತ ತಲುಪುವುದು ಇನ್ನಷ್ಟು ಸುಲಭವಾಗಲಿದೆ. ಕೆಕೆಆರ್ ತಂಡದ ಬ್ಯಾಟಿಂಗ್ ಬಲಾಬಲದಲ್ಲಿ ವೆಂಕಟೇಶ್ ಐಯ್ಯರ್, ರಾಹುಲ್ ತ್ರಿಪಾಠಿ ಲಯಕ್ಕೆ ಮರಳಿದ್ದು, ಹೊಸ ಭರವಸೆ ತಂದುಕೊಟ್ಟಿದೆ.
ಇನ್ನೊಂದೆಡೆ ಸಿಎಸ್ಕೆ ತಂಡದಲ್ಲಿ ರುತುರಾಜ್ ಗಾಯಕ್ವಾಡ್, ಬ್ರಾವೋ, ಡುಪ್ಲೆಸಿಸ್ ಸೇರಿ ಸಮತೋಲನ ಹೊಂದಿದ್ದು, ಧೋನಿ ಬಳಗ ಸಹ ಪಂದ್ಯ ಗೆಲ್ಲುವ ಉತ್ಸಾಹದಲ್ಲಿದೆ.