ಅಹಮದಾಬಾದ್ (ಗುಜರಾತ್): ಹವಾಮಾನ ಮುನ್ಸೂಚನೆಯಂತೆ ಇಂದು ಮಳೆಯಾಗುವ ಸಂಭವ ಇತ್ತು. ಆದರೆ, ವರುಣ ದೂರ ಸರಿದಿದ್ದು ಫೈನಲ್ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸಜ್ಜಾಗಿದೆ. ವೀಸಲು ದಿನದಲ್ಲಿ ಆಡಲಾಗುತ್ತಿರುವ ಐಪಿಎಲ್ ಫೈನಲ್ನಲ್ಲಿ ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಆಡಿದ ತಂಡವನ್ನೇ ಕಣಕ್ಕಿಳಿಸುತ್ತಿದೆ. ಗುಜರಾತ್ ಮುಂಬೈ ವಿರುದ್ಧ ಎರಡನೇ ಕ್ವಾಲಿಫೈಯರ್ನಲ್ಲಿ ಜಯಿಸಿದ ತಂಡದಲ್ಲೇ ಮುಂದುವರೆದಿದ್ದಾರೆ.
ನಿನ್ನೆ ಮಳೆಯಿಂದ ರದ್ದಾಗಿ ಇಂದು 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯ ನಡೆಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ಗೆ ಇದು 10ನೇ ಫೈನಲ್ ಪಂದ್ಯವಾದರೆ, ಕಳೆದ ವರ್ಷದಿಂದ ಪ್ರಾರಂಭವಾದ ಪ್ರಾಂಚೈಸಿ ಗುಜರಾತ್ ಟೈಟಾನ್ಸ್ಗೆ ಇದು ಎರಡನೇ ಫೈನಲ್ ಆಗಿದೆ.
ಮಳೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಧೋನಿ: ಟಾಸ್ ಗೆದ್ದ ಧೋನಿ ಮಳೆಯ ಮುನ್ಸೂಚನೆ ಇರುವ ಕಾರಣ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದರು. ಒಬ್ಬ ಕ್ರಿಕೆಟಿಗನಾಗಿ ನೀವು ಯಾವಾಗಲೂ ಆಡಲು ಬಯಸುತ್ತೇವೆ. ನಿನ್ನೆ ಬಂದಿದ್ದ ಅಭಿಮಾನಿಗಳಗೆ ತೊಂದರೆಯಾಯಿತು. ಕೊನೆಯವರೆಗೂ ಇದ್ದು, ಪಂದ್ಯ ಆರಂಭದ ಆಗುತ್ತದಾ ಎಂದು ಆಶಾದಾಯಕರಾಗಿದ್ದರು. ಆದರೆ, ಮಳೆ ಬಿಡದೇ ನಿರಾಸೆಯಾಯಿತು ಎಂದಿದ್ದಾರೆ.
ಹಾರ್ದಿಕ್ ಟಾಸ್ ನಂತರ ಮಾತನಾಡಿ, ನಾವು ಟಾಸ್ ಗೆದ್ದಿದ್ದರೆ ಮೊದಲು ಬೌಲಿಂಗ್ ಮಾಡುವ ಬಗ್ಗೆ ಚಿಂತಿಸಿದ್ದೆವು, ತೊಂದರೆ ಇಲ್ಲ ಉತ್ತಮ ಸ್ಕೋರ್ ಮಾಡುವ ಭರವಸೆ ಇದೆ. ಹವಾಮಾನ ನಮ್ಮ ಹಿಡಿತದಲ್ಲಿಲ್ಲ. ನಮ್ಮ ತಂಡ ಉತ್ತಮವಾಗಿದೆ ಚಾಂಪಿಯನ್ ಆಗುತ್ತೇವೆ ಎಂದಿದ್ದಾರೆ.
ಪಂದ್ಯಕ್ಕೂ ಮುನ್ನ ಮನರಂಜನಾ ಕಾರ್ಯಕ್ರಮ:ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾರ್ಚ್ 31 ರಂದು ತಮನ್ನಾ ಭಾಟಿಯ, ರಶ್ಮಿಕಾ ಮಂದಣ್ಣ ಅವರು ಭಾರತ ಚಿತ್ರರಂಗದ ಕೆಲ ಹಾಡುಗಳಿಗೆ ನೃತ್ಯ ಮಾಡಿದರೆ, ಅರಿಜಿತ್ ಸಿಂಗ್ ಹಿಟ್ ಹಾಡುಗಳನ್ನು ಹಾಡಿ ಮನರಂಜಿಸಿದ್ದರು. ಕೊನೆಯ ದಿನವಾದ ಇಂದು ಪಂದ್ಯಕ್ಕೂ ಮುನ್ನ ಖ್ಯಾತ ರ್‍ಯಾಪರ್ ಕಿಂಗ್ ಅವರಿಂದ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 1,32,000 ಜನ ಕುಳಿತುಕೊಳ್ಳಬಹುದಾದ ದೊಡ್ಡ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳನ್ನು ಮೈ ಬಳುಕಿಸುಂತೆ ಕಿಂಗ್ ಮಾಡಿದರು.
ತಂಡಗಳು ಇಂತಿದೆ: ಗುಜರಾತ್ ಟೈಟಾನ್ಸ್:ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಚೆನ್ನೈ ಸೂಪರ್ ಕಿಂಗ್ಸ್:ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷ್ಣ
ಇದನ್ನೂ ಓದಿ:ಗುಜರಾತ್ನಲ್ಲಿ ಇನ್ನೆರಡು ದಿನ ಮಳೆ ಸಂಭವ: ಐಪಿಎಲ್ ಫೈನಲ್ಗೆ ಬಿಡುವು ಕೊಡ್ತಾನಾ ವರುಣ..!