ಮುಂಬೈ :ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಗೆ ಜಾಕ್ಪಾಟ್ ಹೊಡೆದಿದೆ. 2022ಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ರಿಟೈನ್ ಆಟಗಾರನಾಗಿ ಜಡೇಜಾರನ್ನು ಆಯ್ಕೆ ಮಾಡಿದೆ. ಅವರು ಬರೋಬ್ಬರಿ 16 ಕೋಟಿ ರೂ. ಪಡೆದಿದ್ದಾರೆ.
ಸಿಎಸ್ಕೆಗೆ ಭವಿಷ್ಯದ ನಾಯಕ ಸ್ಥಾನದ ಪ್ರಬಲ ಸ್ಪರ್ಧಿಯಾಗಿರುವ ರವೀಂದ್ರ ಜಡೇಜಾ ಅವರಿಗೆ ಫ್ರಾಂಚೈಸಿ ಪ್ರಾಮುಖ್ಯತೆ ನೀಡಿದೆ. ಧೋನಿ ಅವರನ್ನು 2ನೇ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದ್ದು, ಅವರು 12 ಕೋಟಿ ರೂ. ಪಡೆದಿದ್ದಾರೆ. ಈ ಮೂಲಕ ಧೋನಿ ಐಪಿಎಲ್ನಲ್ಲಿ ಆಡುವುದು ಕೂಡ ಖಚಿತವಾಗಿದೆ.