ಮುಂಬೈ(ಮಹಾರಾಷ್ಟ್ರ): ಬ್ರಬೋರ್ನ್ ಕ್ರೀಡಾಂಗಣದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಟಾಸ್ ಗೆದ್ದ ಚೆನ್ನೈ ತಂಡ ಬೌಲಿಂಗ್ ಆಯ್ದುಕೊಂಡಿದೆ. ನಾಲ್ಕು ಬಾರಿ ಕಪ್ ಗೆದ್ದಿದ್ದ ಸೂಪರ್ ಕಿಂಗ್ಸ್ ಈ ಬಾರಿ ಮಂಕಾಗಿದೆ. ಜಡೇಜ ನಾಯಕತ್ವದ ಚೆನ್ನೈ ಎರಡು ಪಂದ್ಯಗಳಲ್ಲಿ ಸೋತಿದೆ. ಮಯಾಂಕ್ ಮುಂದಾಳತ್ವದ ಪಂಜಾಬ್ ಕಿಂಗ್ಸ್ ಒಂದು ಗೆಲುವು ಒಂದು ಸೋಲು ಅನುಭವಿಸಿದೆ. ಎರಡೂ ತಂಡಗಳು ಈ ಪಂದ್ಯದಲ್ಲಿ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದಿವೆ.
ಚೆನ್ನೈ ಸೂಪರ್ ಕಿಂಗ್ ತಂಡ ಒಂದು ಬದಲಾವಣೆ ಮಾಡಿದ್ದು, ತುಷಾರ್ ಬದಲಾಗಿ ಕ್ರಿಸ್ ಜೋರ್ಡಾನ್ ಆಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ನಲ್ಲಿ ಹರ್ಪ್ರೀತ್ ಬ್ರಾರ್ ಜಾಗಕ್ಕೆ ವೈಭವ್ ಅರೋರಾ ಮತ್ತು ರಾಜ್ ಬಾವಾ ಜಾಗಕ್ಕೆ ಜಿತೇಶ್ ಶರ್ಮಾರನ್ನು ಆಡಿಸುವ ಮೂಲಕ ಎರಡು ಬದಲಾವಣೆ ಮಾಡಿಕೊಂಡಿದೆ. ಹಳೇ ಚೆನ್ನೈ ತಂಡದ ಸಾಂಗಿಕ ಹೋರಾಟ ಗೆಲುವಿಗೆ ಅಗತ್ಯವಿದ್ದು, ಗಾಯಕ್ವಾಡ್, ರಾಬಿನ್ ಉತ್ತಪ್ಪ, ಅಂಬಟಿ ರಾಯಿಡು ಮೇಲೆ ಒತ್ತಡ ಹೆಚ್ಚಾಗಿದೆ. ಮೊದಲ ಪಂದ್ಯದಂತೆ ಧೋನಿ ಮತ್ತೆ ಘರ್ಜಿಸುವ ನಿರೀಕ್ಷೆಯೂ ಇದೆ.