ನವದೆಹಲಿ: ಒಲಿಂಪಿಕ್ಸ್ನಲ್ಲಿ 125 ವರ್ಷಗಳಿಂದ ಚಿನ್ನದ ಪದಕಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಭಾರತೀಯರ ಕನಸನ್ನು ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ ನೆರೆವೇರಿಸಿದ್ದಾರೆ. ಅವರ ಈ ಸಾಧನೆಗೆ ಮೆಚ್ಚಿ ಈಗಾಗಲೆ ಹಲವಾರು ರಾಜ್ಯ ಸರ್ಕಾರಗಳು, ಬಿಸಿಸಿಐ ನೀರಜ್ಗೆ ನಗದು ಬಹುಮಾನ ಘೋಷಣೆ ಮಾಡಿವೆ. ಇದೀಗ ಆ ಸಾಲಿಗೆ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಸೇರಿಕೊಂಡಿದೆ.
ನೀರಜ್ ಚಿನ್ನ ಗೆದ್ದ ನಂತರ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ ಸಿಎಸ್ಕೆ, " ಶತಮಾನದ ಎಸೆತದ ಮೂಲಕ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು. 87.58 ಮೀಟರ್ ಎಸೆದು ಚಿನ್ನ ಗೆದ್ದ ಸಾಧನೆಯನ್ನು ಗೌರವ ಸಲ್ಲಿಸುವುದಕ್ಕಾಗಿ ನೀರಜ್ ಚೋಪ್ರಾರಿಗೆ ಒಂದು ಕೋಟಿ ರೂಪಾಯಿಗಳನ್ನು ನೀಡುತ್ತಿದ್ದೇವೆ" ಎಂದು ಸಿಎಸ್ಕೆ ಟ್ವೀಟ್ ಮಾಡಿದೆ.