ಚೆನ್ನೈ(ತಮಿಳುನಾಡು):ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಅದರಲ್ಲೂ ಬೌಲರ್ಗಳ ಆಟದ ಬಗ್ಗೆ ಚಕಾರ ಎತ್ತಿದ್ದಾರೆ.
ಬೌಲರ್‌ಗಳು ನೋ ಬಾಲ್ ಮತ್ತು ಕಡಿಮೆ ವೈಡ್‌ಗಳನ್ನು ಎಸೆಯಬೇಕು ಎಂದು ಎಚ್ಚರಿಕೆ ನೀಡಿದ ಅವರು, ಇದು ಮುಂದುವರಿದರೆ ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ ಎಂದು ಹೇಳಿದ್ದಾರೆ. ತವರಿನಲ್ಲಿ ನಡೆದ ಪಂದ್ಯದಲ್ಲಿ 12 ರನ್‌ಗಳಿಂದ ಲಖನೌ ಸೂಪರ್ ಜೈಂಟ್ಸ್ ಅನ್ನು ಸೋಲಿಸಿತು. ಆದರೆ, ತಂಡ 3 ನೋ ಬಾಲ್‌ಗಳು ಮತ್ತು 13 ವೈಡ್‌ಗಳನ್ನು ಬೌಲ್ ಮಾಡಿರುವುದು ಧೋನಿ ಸಿಟ್ಟಿಗೆ ಕಾರಣವಾಗಿದೆ.
ಆಟ ಮುಗಿದ ಬಳಿಕ ಮಾತನಾಡಿದ ಸಿಎಸ್ಕೆ ತಂಡದ ನಾಯಕ, ನೋ ಬಾಲ್ ಮತ್ತು ಕಡಿಮೆ ವೈಡ್‌ಗಳನ್ನು ಬೌಲ್ ಮಾಡಿ, ಹೆಚ್ಚುವರಿ ಎಸೆತಗಳನ್ನು ಹಾಕುತ್ತಿದ್ದೇವೆ. ಅವುಗಳನ್ನು ಕಡಿತಗೊಳಿಸಬೇಕಾಗಿದೆ. ಇಲ್ಲದಿದ್ದರೆ ಆಟದ ಮೇಲೆ ಪರಿಣಾಮ ಬೀರಲಿದೆ. ಇದು ಮುಂದುವರಿಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಿಚ್ ಬಗ್ಗೆ ಅಚ್ಚರಿ:ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು 200 ಕ್ಕೂ ಅಧಿಕ ಮೊತ್ತ ಪೇರಿಸಿದೆವು. ಇದು ಪಿಚ್ ಬಗ್ಗೆ ನನ್ನಲ್ಲಿ ಅಚ್ಚರಿ ಉಂಟು ಮಾಡಿತು. "ಇದೊಂದು ಸೊಗಸಾದ ಆಟ, ಹೆಚ್ಚು ಸ್ಕೋರಿಂಗ್ ಆಟವಾಗಿತ್ತು. ನಾವೆಲ್ಲರೂ ವಿಕೆಟ್ ಹೇಗೆ ಪಡೆಯುವುದು ಎಂದು ಯೋಚಿಸುತ್ತಿದ್ದೆವು. ಈ ಬಗ್ಗೆ ನಮಗೆ ಅನುಮಾನವಿದ್ದವು. ಇದೊಂದು ಪರಿಪೂರ್ಣ ಪಂದ್ಯ ಎಂದು ನಾನು ಭಾವಿಸುತ್ತೇನೆ. 5- 6 ವರ್ಷಗಳ ಬಳಿಕ ಕ್ರೀಡಾಂಗಣ ಭರ್ತಿಯಾಗಿದೆ. ಇದು ಸಂತಸದ ವಿಚಾರ ಎಂದು ಹೇಳಿದರು.
ತವರಿನಲ್ಲಿ ಮುಂದೆ 6 ಪಂದ್ಯಗಳು ನಡೆಯಲಿದ್ದು, ಅಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ, ನಾವಿಲ್ಲಿ ಉತ್ತಮ ಸ್ಕೋರ್ ಮಾಡಬಹುದು. ಆದರೆ, ವೇಗಿಗಳ ವಿಭಾಗ ಸುಧಾರಣೆ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಬೌಲ್ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.