ನವದೆಹಲಿ :15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಹೊಸದಾಗಿ ಎರಡು ಫ್ರಾಂಚೈಸಿಗಳು ಇದೀಗ ಐಪಿಎಲ್ನಲ್ಲಿ ಭಾಗಿಯಾಗಲಿವೆ. ಟೂರ್ನಿಯಲ್ಲಿ ಹೊಸದಾಗಿ ಪಾಲ್ಗೊಳ್ಳುವ ತಂಡಗಳ ಟೆಂಡರ್ ಸಂಬಂಧಿತ ದಾಖಲೆ ಖರೀದಿಗೆ ಬಿಸಿಸಿಐ ಅವಧಿ ವಿಸ್ತರಣೆ ಮಾಡಿದೆ.
ಭಾರತೀಯ ಕ್ರಿಕೆಟ್ ಮಂಡಳಿ ಟೆಂಡರ್ ದಾಖಲೆ ಖರೀದಿಗೆ ಈ ಹಿಂದೆ ಅಕ್ಟೋಬರ್ 10ರವರೆಗೆ ಕಾಲಾವಕಾಶ ನೀಡಿತ್ತು. ಆದರೆ, ಇದೀಗ ಅಕ್ಟೋಬರ್ 20ರವರೆಗೆ ಅವಕಾಶ ನೀಡಿ ಪ್ರಕಟಣೆ ಹೊರಡಿಸಿದೆ. ಐಪಿಎಲ್ ಆಡಳಿತ ಮಂಡಳಿ ಟೆಂಡರ್ಗೆ ಆಹ್ವಾನದ ದಾಖಲೆ ಈಗಾಗಲೇ ಬಿಡುಗಡೆ ಮಾಡಿದ್ದು, 10 ಲಕ್ಷ ರೂ. ಮೊತ್ತ ಪಾವತಿಸಬೇಕಾಗಿದೆ.
ಇದನ್ನೂ ಓದಿರಿ:ಲಾರ್ಡ್ ಶಾರ್ದೂಲ್ ಠಾಕೂರ್ಗೆ ಜಾಕ್ಪಾಟ್.. T20 ವಿಶ್ವಕಪ್ನಲ್ಲಿ ಈ ಪ್ಲೇಯರ್ ಸ್ಥಾನಕ್ಕೆ ಆಲ್ರೌಂಡರ್ಗೆ ಮಣೆ
ಹೊಸ ಫ್ರಾಂಚೈಸಿಗಳ ತಲಾ ವೆಚ್ಚ 3,500 ಕೋಟಿ ರೂ. ಆಗಿದೆ. ಅಸಕ್ತ ಫ್ರಾಂಚೈಸಿಗಳ ಮನವಿ ಮೇರೆಗೆ ಈ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಹೊಸದಾಗಿ ಐಪಿಎಲ್ ಸೇರಿಕೊಳ್ಳುವ ಎರಡು ತಂಡಗಳು ಅಹಮದಾಬಾದ್, ಲಖನೌ ಅಥವಾ ಪುಣೆ ಮಾಲೀಕತ್ವ ಹೊಂದಲಿವೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಕೊಟಕ್ ಗ್ರೂಪ್, ಅರಬಿಂದೂ ಫಾರ್ಮ, ಟೊರೆಂಟ್ ಫಾರ್ಮ, ಆರ್ಪಿ ಸಂಜೀವ್ ಗೋಯೆಂಕಾ ಗ್ರೂಪ್, ಬಿರ್ಲಾ ಗ್ರೂಪ್ ಹಾಗೂ ಅದಾನಿ ಗ್ರೂಪ್ಗಳು ತಂಡ ಖರೀದಿ ಮಾಡಲು ಆಸಕ್ತಿ ಹೊಂದಿವೆ. ಹೊಸದಾಗಿ ಎರಡು ತಂಡಗಳ ಸೇರ್ಪಡೆಯಿಂದ ಬಿಸಿಸಿಐ 7000 ಕೋಟಿ ರೂ. ಗಳಿಕೆ ಮಾಡುವ ಇರಾದೆ ಇಟ್ಟುಕೊಂಡಿದೆ.