ಬೆಂಗಳೂರು: ಜನರು ನನ್ನನ್ನು ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದಾಗ ನನಗೆ ಮುಜುಗರವಾಗುತ್ತದೆ. ಲೆಜೆಂಡರಿ ಕ್ರಿಕೆಟಿಗ ಅವರು ನನಗೆ ಸ್ಫೂರ್ತಿ ಎಂದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಸಚಿನ್ ಮತ್ತು ವಿವ್ ರಿಚರ್ಡ್ಸ್ ಅವರೊಂದಿಗೆ ಯಾರನ್ನೂ ಹೋಲಿಸಬಾರದು ಏಕೆಂದರೆ ಅವರು ತಮ್ಮ ಯುಗದಲ್ಲಿ ಕ್ರಿಕೆಟ್ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಕೊಹ್ಲಿ ಹೇಳಿದರು.
"ನಾನು ಪ್ರತಿ ಬಾರಿಯೂ ಅದನ್ನು ಕೇಳಿದಾಗ ನಗುತ್ತೇನೆ. ಈ ಜನರಿಗೆ ಆಟದ ಬಗ್ಗೆ ತಿಳಿದಿಲ್ಲ. ಆದರೆ ಅವರು ಅಂಕಿಅಂಶಗಳೊಂದಿಗೆ ಹೋಲಿಸುತ್ತಾರೆ. ಆದರೆ ನನ್ನನ್ನು ಸಚಿನ್‌ಗೆ ಹೋಲಿಸಿದಾಗ ನನಗೆ ಮುಜುಗರವಾಗುತ್ತದೆ. ಆದರೆ ಈ ಅಂಕಿ-ಅಂಶಗಳು ಅವರಿಗೆ ಹೋಲಿಕೆ ಆಗಬಹುದು. ಆದರೆ ನಾನು ಬೆಳೆಯುವಾಗ ಅವರನ್ನು ನೋಡಿಕೊಂಡು ಬೆಳೆದಿದ್ದೇನೆ. ಅವರು ನನ್ನ ಮೇಲೆ ಪರಿಣಾಮ ಬೀರಿದ್ದಾರೆ" ಎಂದು ಜಿಯೋ ಸಿನಿಮಾದಲ್ಲಿ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರಿಗೆ ನೀಡಿದ ಸಂದರ್ಶನದಲ್ಲಿ ಕೊಹ್ಲಿ ಹೇಳಿದ್ದಾರೆ.
"ಸಚಿನ್ ತೆಂಡೂಲ್ಕರ್ ಎಂಬುದು ನನಗೆ ಭಾವನಾತ್ಮಕತೆ, ಅವರು ಎಲ್ಲರನ್ನೂ ತಮ್ಮಂತೆ ನೋಡುತ್ತಾರೆ. ಸಚಿನ್ ಎಲ್ಲರೊಂದಿಗೂ ನಂಬಿಕೆಯಿಂದ ಇರುತ್ತಾರೆ, ಅವರು ಸ್ಫೂರ್ತಿ ಮತ್ತು ಸಾಂತ್ವನದ ಸೆಲೆಯಾಗಿದ್ದಾರೆ. ಅವರು ರನ್ ಗಳಿಸುವುದನ್ನು ನೋಡುವುದೇ ಒಂದು ಉತ್ತಮವಾದ ಕ್ಷಣವಾಗಿತ್ತು. ಸಚಿನ್ ಮತ್ತು ವಿವ್ ರಿಚರ್ಡ್ಸ್ ಅವರೊಂದಿಗೆ ಯಾರನ್ನೂ ಹೋಲಿಸಬಾರದು. ಏಕೆಂದರೆ, ಅವರು ತಮ್ಮ ಯುಗದಲ್ಲಿ ಕ್ರಿಕೆಟ್ನಲ್ಲಿ ಒಂದು ಬದಲಾವಣೆಯನ್ನು ಮಾಡಿದವರು. ಜನರು ಅವರಲ್ಲಿ ಇಟ್ಟಿರುವ ನಂಬಿಕೆ ಅಪರೂಪ, ಒಬ್ಬ ಆಟಗಾರನಲ್ಲಿ ಅಂತಹ ನಂಬಿಕೆ ಇರುವುದು ಅಪರೂಪ" ಎಂದು ಅವರು ಹೇಳಿದರು.