ಕರ್ನಾಟಕ

karnataka

ETV Bharat / sports

ಟೆಸ್ಟ್‌ ಚಾಂಪಿಯನ್‌ಶಿಪ್‌, ಏಕದಿನ ವಿಶ್ವಕಪ್‌ನತ್ತ ಅಜಿಂಕ್ಯ ರಹಾನೆ ಚಿತ್ತ - TATA IPL

ಮುಂಬೈ ಇಂಡಿಯನ್ಸ್​ ವಿರುದ್ಧ 225.93 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿದ ಅಜಿಂಕ್ಯ ರಹಾನೆ, ಟೀಂ ಇಂಡಿಯಾ ಮಧ್ಯಮ ಕ್ರಮಾಂಕಕ್ಕೆ ಮರಳುವ ಸಾಧ್ಯತೆ ಕಂಡುಬರುತ್ತಿದೆ.

Ajinkya Rahane Plan to play in the WTC Final and one day World Cup
ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುತ್ತಾರೆ ಅಜಿಂಕ್ಯಾ ರೆಹಾನೆ?

By

Published : Apr 10, 2023, 5:35 PM IST

ಮುಂಬೈ: ಹತ್ತು ಪಂದ್ಯಗಳಲ್ಲಿ ಆಟಗಾರನೊಬ್ಬ ವೈಫಲ್ಯ ಅನುಭವಿಸಿ ಹನ್ನೊಂದನೇ ಪಂದ್ಯದಲ್ಲಿ ಮ್ಯಾಚ್​ ವಿನ್ನಿಂಗ್​ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೀತಾರೆ. ಹೌದು. ಇದು ಅಜಿಂಕ್ಯ ರಹಾನೆ ಸ್ಟೋರಿ. ಇದೀಗ ಈ ಆಟಗಾರನ ಮೇಲೆ ನಿರೀಕ್ಷೆ ಗರಿಗೆದರಿದೆ. ಕಳೆದ ಶನಿವಾರ ನಡೆದ ಮುಂಬೈ ಮತ್ತು ಚೆನ್ನೈ ನಡುವಿನ ಐಪಿಎಲ್‌ ಪಂದ್ಯದಲ್ಲಿ ರಹಾನೆ ರೋಮಾಂಚಕ ಪ್ರದರ್ಶನ ನೀಡಿದ್ದರು.

ಮುಂಬೈ ವಿರುದ್ಧ ರಹಾನೆ ಆಡಿದ ಇನ್ನಿಂಗ್ಸ್ ಅವರ ಐಪಿಎಲ್​ ವೃತ್ತಿಜೀವನದ ಅತ್ಯುತ್ತಮ ಪಂದ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಐಪಿಎಲ್‌ನಲ್ಲಿ 29ನೇ ಅರ್ಧಶತಕ ಪೂರೈಸಿದ ಇವರು ಇದೀಗ ಟೀಂ​ ಇಂಡಿಯಾದ ಕದ ತಟ್ಟುತ್ತಿದ್ದಾರೆ. ತಂಡವು ಮುಂದಿನ ದಿನಗಳಲ್ಲಿ ಮೂರು ಮಹತ್ವದ ಅಂತಾರಾಷ್ಟ್ರೀಯ ಕಪ್​ಗಳಿಗಾಗಿ ಸೆಣಸಾಡಲಿದೆ. ಆಟಗಾರರು ಗಾಯದ ಸಮಸ್ಯೆಯಿಂದ ಹೊರಗಿರುವುದು ರಹಾನೆಗೆ ಅವಕಾಶ ಸಿಗುವ ಸಾಧ್ಯತೆ ಮೂಡಿಸಿದೆ.

ಮುಂಬೈ ವಿರುದ್ಧ ಕಾನ್ವೆ ಶೂನ್ಯಕ್ಕೆ ಔಟಾದ ನಂತರ ಕ್ರೀಸಿಗೆ ಬಂದ ರಹಾನೆ ಆರಂಭಿಕ ಗಾಯಕ್ವಾಡ್​ ಜೊತೆ ಸೇರಿ 82 ರನ್​ಗಳ ಜೊತೆಯಾಟ ನೀಡಿದರು. 27 ಎಸೆತ​ ಎದುರಿಸಿ 7 ಬೌಂಡರಿ ಮತ್ತು 3 ಸಿಕ್ಸರ್‌​ನೆರವಿನಿಂದ 61 ರನ್​ ಚಚ್ಚಿದರು. ಕೇವಲ 19 ಎಸೆತಗಳಲ್ಲೇ ಅರ್ಧಶತಕ ದಾಖಲಿಸಿದ್ದರು.

ರಾಷ್ಟ್ರೀಯ ತಂಡಕ್ಕೆ ರಹಾನೆ?:ಐಪಿಎಲ್ ಮುಗಿದ ನಂತರ ಭಾರತ ತಂಡ ಇಂಗ್ಲೆಂಡ್​ಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಸಲುವಾಗಿ ಪ್ರವಾಸ ಹೊರಡಲಿದೆ. ಜೂನ್​ 7ರಿಂದ ಆಸ್ಟ್ರೇಲಿಯಾ ವಿರುದ್ಧ ಫೈನಲ್​ ಪಂದ್ಯ ನಡೆಯಲಿದೆ. ಮಧ್ಯಮ ಕ್ರಮಾಂಕದ ಶ್ರೇಯಸ್​ ಅಯ್ಯರ್​ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು ಅವರ ಜಾಗಕ್ಕೆ ರಹಾನೆ ಕಮ್​​ಬ್ಯಾಕ್ ಮಾಡ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ. ಹೊಸ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವ ಬದಲು ಇಂಗ್ಲೆಂಡ್‌ನ ಪಿಚ್​ ಅನುಭವ ಹೊಂದಿರುವ ರಹಾನೆಗೆ ತಂಡ ಮಣೆ ಹಾಕಿದರೆ ಅಚ್ಚರಿ ಏನಿಲ್ಲ.

ಏಷ್ಯಾ ಕಪ್​, ವಿಶ್ವಕಪ್‌ನಲ್ಲೂ ಸ್ಥಾನ ನಿರೀಕ್ಷೆ:ತಂಡದ ಮಧ್ಯಮ ಕ್ರಮಾಂಕದಲ್ಲಿ ರಿಷಭ್​ ಪಂತ್​ ಮತ್ತು ಶ್ರೇಯಸ್​ ಅಯ್ಯರ್ ವಿಶ್ವಕಪ್​ ಹಾಗೂ ಏಷ್ಯಾ ಕಪ್​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಅನುಭವಿ ರಹಾನೆಗೆ ಆಯ್ಕೆ ಸಮಿತಿ ಅವಕಾಶ ಕೊಡುವ ಸಾಧ್ಯತೆ ಇದೆ. ರಹಾನೆ ಜನವರಿ 2022 ರಲ್ಲಿ ದ.ಆಫ್ರಿಕಾದಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ನಂತರ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು. ಬಿಸಿಸಿಐ ವಾರ್ಷಿಕ ಒಪ್ಪಂದಗಳ ಪಟ್ಟಿಯಿಂದಲೂ ಕೈಬಿಡಲಾಗಿದೆ. ಭಾರತಕ್ಕಾಗಿ 82 ಟೆಸ್ಟ್​ ಪಂದ್ಯದಲ್ಲಿ 140 ಇನ್ನಿಂಗ್ಸ್​ ಆಡಿರುವ ರಹಾನೆ 4931 ರನ್​ ಗಳಿಸಿದ್ದಾರೆ. 38.52ರ ಸರಾಸರಿಯಲ್ಲಿ ಬ್ಯಾಟ್​ ಬೀಸಿದ್ದು 12 ಶತಕ ಹಾಗೂ 25 ಅರ್ಧಶತಕ ದಾಖಲಿಸಿದ್ದಾರೆ.

ಇದನ್ನೂ ಓದಿ:RCB vs LSG: ಆರ್​ಸಿಬಿ ವಿರುದ್ಧ ಲಕ್ನೋ ಕಣಕ್ಕೆ, ತವರಲ್ಲಿ 2ನೇ ಜಯ ಕಾಣ್ತಾರಾ ಫಾಫ್​ ಹುಡುಗರು​

ABOUT THE AUTHOR

...view details