ಕರ್ನಾಟಕ

karnataka

ETV Bharat / sports

ಯೂತ್ ಬಾಕ್ಸಿಂಗ್ ಚಾಂಪಿಯನ್​ಶಿಪ್​​ನಲ್ಲಿ ಫೈನಲ್​ ಪ್ರವೇಶಿಸಿದ 7 ಮಹಿಳಾ ಬಾಕ್ಸರ್ಸ್​: ಚಿನ್ನಕ್ಕಾಗಿ ನಾಳೆ ಪೈಪೋಟಿ - AIBA Youth boxing championship

8ನೇ ದಿನದ ಮೊದಲ ಬೌಟ್​ನಲ್ಲಿ 48 ಕೆಜಿ ವಿಭಾಗದಲ್ಲಿ ಗೀತಿಕಾ 5-0 ಅಂತರದಲ್ಲಿ ಇಟಲಿಯ ಎರಿಕಾ ಪ್ರಿಸ್ಕಿಯಾಂಡಾರೊ ವಿರುದ್ಧ ಜಯ ಸಾಧಿಸಿ ಫೈನಲ್ ಪ್ರವೇಶಿಸಿದರು, ಇವರು ಫೈನಲ್​ನಲ್ಲಿ ಪೋಲೆಂಡ್​ನ ನಟಿಲಿಯಾ ಡೊಮಿನಿಕಾ ವಿರುದ್ಧ ಸೆಣಸಾಡಲಿದ್ದಾರೆ.

ಯೂತ್ ಬಾಕ್ಸಿಂಗ್ ಚಾಂಪಿಯನ್​ಶಿಪ್​​​
ಯೂತ್ ಬಾಕ್ಸಿಂಗ್ ಚಾಂಪಿಯನ್​ಶಿಪ್​​​

By

Published : Apr 21, 2021, 4:36 PM IST

ನವದೆಹಲಿ: ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಲ್ಲಿ ಭಾರತೀಯ ಮಹಿಳಾ ಮತ್ತು ಪುರುಷ ಬಾಕ್ಸರ್​ಗಳು ತಮ್ಮ ಅದ್ಭುತ ಪ್ರದರ್ಶನ ಮುಂದುವರಿಸಿದ್ದು, 8ನೇ ದಿನ 8 ಮಂದಿ ಫೈನಲ್ ತಲುಪಿದ್ದಾರೆ.

ಪೋಲೆಂಡ್​ ಕೀಲ್ಸ್​ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತದ 7 ಮಹಿಳಾ ಬಾಕ್ಸರ್​ಗಳು ಫೈನಲ್​ ಪ್ರವೇಶಿಸಿದ್ದರೆ, ಪುರುಷರ ವಿಭಾಗದಿಂದ ಒಬ್ಬ ಬಾಕ್ಸರ್​ ಮಾತ್ರ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.

8ನೇ ದಿನದ ಮೊದಲ ಬೌಟ್​ನಲ್ಲಿ 48 ಕೆಜಿ ವಿಭಾಗದಲ್ಲಿ ಗೀತಿಕಾ 5-0 ಅಂತರದಲ್ಲಿ ಇಟಲಿಯ ಎರಿಕಾ ಪ್ರಿಸ್ಕಿಯಾಂಡಾರೊ ವಿರುದ್ಧ ಜಯ ಸಾಧಿಸಿ ಫೈನಲ್ ಪ್ರವೇಶಿಸಿದರು, ಇವರು ಫೈನಲ್​ನಲ್ಲಿ ಪೋಲೆಂಡ್​ನ ನಟಿಲಿಯಾ ಡೊಮಿನಿಕಾ ವಿರುದ್ಧ ಸೆಣಸಾಡಲಿದ್ದಾರೆ.

ಉಳಿದ ಪಂದ್ಯಗಳಲ್ಲಿ 2019ರ ಏಷ್ಯನ್ ಚಾಂಪಿಯನ್​ ಬಾಬಿರೋಜಿಸಾನ ಚಾನು 51 ಕೆಜಿ ವಿಭಾಗದಲ್ಲಿ ಇಟಲಿಯ ಎಲೆನ್ ಅಯರಿ ವಿರುದ್ಧ 5-0ಯಲ್ಲಿ ಗೆಲುವು ಸಾಧಿಸಿ ಅಂತಿಮ ಘಟಕ್ಕೆ ಪ್ರವೇಶಿಸಿದರು. ಫೈನಲ್​ನಲ್ಲಿ ರಷ್ಯಾದ ವೆಲೆರಿಯಾ ಲಿಂಕೋವಾ ವಿರುದ್ಧ ಗುರುವಾರ ಚಿನ್ನಕ್ಕಾಗಿ ಹೋರಾಟ ನಡೆಸಲಿದ್ದಾರೆ.

57 ಕೆಜಿ ವಿಭಾಗದಲ್ಲಿ ಪೂನಂ, 60 ಕೆಜಿ ವಿಭಾಗದಲ್ಲಿ ವಿಂಕಾ, 69 ಕೆಜಿ ವಿಭಾಗದಲ್ಲಿ ಅರುಂಧತಿ ಚೌದರಿ, 75 ಕೆಜಿ ವಿಭಾಗದಲ್ಲಿ ಸನಮಚಾ ಚಾನು, 81ಕೆಜಿ ವಿಭಾಗದಲ್ಲಿ ಆಲ್ಫಯಾ ಪಠಾಣ್​ ಫೈನಲ್​ ಪ್ರವೇಶಿಸಿದ್ದಾರೆ.

ಪುರುಷರ ವಿಭಾಗದಲ್ಲಿ 56 ಕೆಜಿ ವಿಭಾಗದ ಸಚಿನ್​ ಫೈನಲ್​ ತಲುಪುವಲ್ಲಿ ಯಶಸ್ವಿಯಾದರೆ, ಬಿಶ್ವಾಮಿತ್ರ ಚೊಂಗ್ಥೋಮ್ (49 ಕೆಜಿ), ಅಂಕಿತ್ ನರ್ವಾಲ್ (64 ಕೆಜಿ), ಮತ್ತು ವಿಶಾಲ್ ಗುಪ್ತಾ (91 ಕೆಜಿ) ತಮ್ಮ ಸೆಮಿಫೈನಲ್ ಪಂದ್ಯಗಳನ್ನು ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಇದನ್ನು ಓದಿ:ಐಪಿಎಲ್​ನಲ್ಲಿ ಈ ದಾಖಲೆ ಬರೆದ ಭಾರತದ ಮೊದಲ ಬಾಲರ್​ ಅಮಿತ್​ ಮಿಶ್ರಾ

ABOUT THE AUTHOR

...view details