ಕ್ರಿಕೆಟಿಗ ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಯೂಟ್ಯೂಬರ್ ಮತ್ತು ನೃತ್ಯ ಸಂಯೋಜಕಿಯೂ ಆಗಿರುವ ಧನಶ್ರೀ ಆಗಾಗ ಹೊಸ ಪೋಸ್ಟ್ ಶೇರ್ ಮಾಡುತ್ತಿರುತ್ತಾರೆ. ಇನ್ಸ್ಟಾದಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಇವರು ನೃತ್ಯ ಮಾಡುವ ವಿಡಿಯೋದಿಂದ ಹಿಡಿದು, ಬಗೆ ಬಗೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಅದರಂತೆ ಪತಿ ಚಹಲ್ ಮತ್ತು ನಟ ಅಮೀರ್ ಖಾನ್ ಜೊತೆಗೆ ತೆಗೆದ ಫೋಟೋವನ್ನು ಧನಶ್ರೀ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಅಮೀರ್ ಖಾನ್ ಪ್ರಕಾಶಮಾನವಾದ ಕೆಂಪು ಬಣ್ಣದ ಸ್ಪೋರ್ಟ್ಸ್ ವೇರ್ನಲ್ಲಿ 'ಹಂಡ್ರೆಡ್ ಡಾಲರ್' ಸ್ಮೈಲ್ ನೀಡಿದ್ದಾರೆ. ಚಹಲ್ ಪ್ರಿಂಟೆಡ್ ಕಪ್ಪು ಶರ್ಟ್ ಮತ್ತು ಮ್ಯಾಚಿಂಗ್ ಪ್ಯಾಂಟ್ ಹಾಗೂ ಧನಶ್ರೀ ಬಿಳಿ ಟಾಪ್ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.
ಈ ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಸುರಿಮಳೆಗೈದಿದ್ದಾರೆ. ನೆಟ್ಟಿಗರೊಬ್ಬರು, 'ಇಂತಹ ಸುಂದರವಾದ ಫೋಟೋಗಾಗಿ ಧನ್ಯವಾದಗಳು' ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಲಾರ್ಡ್ ಚಹಲ್ ಅಮೀರ್ ಖಾನ್ ಜೊತೆ' ಎಂದು ಬರೆದಿದ್ದಾರೆ. ಇನ್ನೊಬ್ಬರು, 'ಮೂವರನ್ನು ಜೊತೆಯಾಗಿ ನೋಡಲು ಸಂತಸವಾಗುತ್ತಿದೆ' ಎಂದು ಹೇಳಿದ್ದಾರೆ. ಇನ್ನು ಕೆಲವರು ಕೆಂಪು ಹೃದಯ ಮತ್ತು ಬೆಂಕಿಯ ಎಮೋಜಿನೊಂದಿಗೆ ಪ್ರತಿಕ್ರಿಯೆ ವಿಭಾಗವನ್ನು ತುಂಬಿದ್ದಾರೆ. ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ 2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.