ನಾಳೆಯಿಂದ ಐಪಿಎಲ್-2021 ಕ್ರಿಕೆಟ್ ಟೂರ್ನಿಯ ಸಂಭ್ರಮ, ಸಡಗರ. ಟಿ-20 ಲೀಗ್‌ನ ನಾಲ್ಕನೇ ಅವತರಣಿಕೆಯ ಆರಂಭದ ಮೊದಲ ಕದನ ನಾಳೆ ಆರ್‌ಸಿಬಿ ಮತ್ತು ಬಲಾಢ್ಯ ಮುಂಬೈ ನಡುವೆ ನಡೆಯಲಿದೆ. ಈ ಸಂದರ್ಭದಲ್ಲಿ ಜಮೈಕಾ ದೇಶದ ವಿಶ್ವ ಪ್ರಸಿದ್ಧ ಮಿಂಚಿನ ವೇಗದ ಓಟಗಾರ, ಒಲಿಂಪಿಯನ್ ಚಾಂಪಿಯನ್ ಉಸೈನ್ ಬೋಲ್ಟ್ ಆರ್‌ಸಿಬಿ ಜರ್ಸಿ ತೊಟ್ಟು ಕೊಹ್ಲಿ, ಎಬಿಡಿ ಕಾಲೆಳೆದಿದ್ದಾರೆ.
'ಚಾಲೆಂಜರ್ಸ್, ನಿಮಗೆ ಗೊತ್ತಿರಲಿ, ಈವರೆಗೂ ನಾನೇ ಜಗತ್ತಿನ ಅತ್ಯಂತ ವೇಗದ ಬೆಕ್ಕು' ಎಂದಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕವೇ ಉತ್ತರಿಸಿದ ಕೊಹ್ಲಿ, 'ನೊ ಡೌಟ್ ಅದಕ್ಕಾಗಿ ನೀವೀಗ ನಮ್ಮ ತಂಡದಲ್ಲಿದ್ದೀರಿ' ಎಂದಿದ್ದಾರೆ.
ಇದರ ಜೊತೆ ಕ್ರಿಕೆಟ್‌ನಲ್ಲಿ ಮಿಸ್ಟರ್ 360 ಖ್ಯಾತಿಯ ಆರ್‌ಸಿಬಿಯ ಸ್ಫೋಟಕ ಬ್ಯಾಟ್ಸ್‌ಮನ್ ಎಬಿಡಿ ಕೂಡಾ ಪ್ರತಿಕ್ರಿಯಿಸಿದ್ದಾರೆ. ತಂಡಕ್ಕೆ ಒಂದುವೇಳೆ ಹೆಚ್ಚು ರನ್‌ಗಳು ಬೇಕಿದ್ದರೆ ಯಾರನ್ನು ಕರೆಯಬೇಕೆಂದು ನಮಗೆ ಗೊತ್ತಿದೆ ಎಂದು ತಮಾಷೆ ಮಾಡಿದ್ದಾರೆ.
ತಮ್ಮ ಶಾಲಾ ದಿನಗಳಲ್ಲಿ ಕ್ರಿಕೆಟ್ ನೆಚ್ಚಿಕೊಂಡಿದ್ದ ಬೋಲ್ಟ್, ಹಲವು ವರ್ಷಗಳಿಂದ ಕ್ರಿಕೆಟ್‌ನ ದೊಡ್ಡ ಅಭಿಮಾನಿಯೂ ಹೌದು.
ಆರ್‌ಸಿಬಿ ಈ ಸಲದ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. ನಾಳೆ ಚೆನ್ನೈನಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ವಿರಾಟ್ ಕೊಹ್ಲಿ ಬಳಗ ಎದುರಿಸುತ್ತಿದ್ದು, ಅಭಿಯಾನ ಆರಂಭಿಸಲಿದೆ.