ನವದೆಹಲಿ: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಎದುರಿಸಲು ಎಬಿ ಡಿವಿಲಿಯರ್ಸ್ರಿಂದ ಮಾತ್ರ ಸಾಧ್ಯ ಎಂದು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ (ಆರ್ಸಿಬಿ) ತಂಡ ಹಲವಾರು ಉತ್ತಮ ಆಟಗಾರರನ್ನು ಹೊಂದಿದ್ದು, ಎದುರಾಳಿ ತಂಡವನ್ನು ಸಲೀಸಾಗಿ ಮಣಿಸಿ, ಪ್ರಾಬಲ್ಯ ಸಾಧಿಸಬಹುದು ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಹೇಳಿದ್ದಾರೆ.
2021 ರ ಐಪಿಎಲ್ ಮುಂದೂಡುವ ಮುನ್ನ ಆರ್ಸಿಬಿ ಆಡಿದ ಏಳು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಗೆದ್ದು, ಮೂರನೇ ಸ್ಥಾನದಲ್ಲಿದೆ. ಐಪಿಎಲ್ 2021 ರ ಎರಡನೇ ಹಂತದ ಪಂದ್ಯಕ್ಕೆ ಮೂರು ದಿನಗಳು ಬಾಕಿ ಇದ್ದು, ಆರ್ಸಿಬಿ ಮೊದಲ ಕಪ್ ಕೈ ವಶ ಮಾಡಿಸಿಕೊಳ್ಳಲು ಹವಣಿಸುತ್ತಿದೆ.