ಭಾರತದ ಮಿಲಿಯನ್ ಡಾಲರ್ ಕ್ರಿಕೆಟ್ ಲೀಗ್ ಎಂದೇ ಖ್ಯಾತವಾಗಿರುವ ಐಪಿಎಲ್ಗೆ ಈ ವರ್ಷ ಗಾಯದ ಬರೆ ಬಿದ್ದಿದೆ. ವಿಲಿಯನ್‌ಗಟ್ಟನೆ ಹಣ ಕೊಟ್ಟು ಖರೀದಿಸಿದ ಆಟಗಾರರೇ ತಂಡದಿಂದ ಹೊರಗುಳಿದಿರುವುದು ಪ್ರಾಂಚೈಸಿಗಳಿಗೂ ದೊಡ್ಡ ಹೊರೆಯೇ ಆಗಿದೆ. ಒಂದು ಡಜನ್‌ಗಿಂತಲೂ ಹೆಚ್ಚು ಆಟಗಾರರು ಗಾಯದ ಸಮಸ್ಯೆಯಿಂದ 2023ರ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ.
ಕೆಲವು ಆಟಗಾರರು ಪಂದ್ಯಾರಂಭಕ್ಕೂ ಮುನ್ನ ತಂಡದಿಂದ ಹೊರಗುಳಿದರೆ, ಕೇವಲ ಎಂಟು ಪಂದ್ಯಗಳ ನಡುವೆ ಇಬ್ಬರು ಗಾಯಕ್ಕೆ ತುತ್ತಾಗಿ ಸಂಪೂರ್ಣ ಆವೃತ್ತಿಯಿಂದಲೇ ಹೊರ ಹೋಗಿದ್ದಾರೆ. ಆರ್ಸಿಬಿಯ ಟೋಪ್ಲಿ ಗಾಯಗೊಂಡಿದ್ದು ಅವರ ಆರೋಗ್ಯ ಸ್ಥಿತಿಗತಿ ತಿಳಿದು ಬಂದಿಲ್ಲ. ಮೊದಲ ಪಂದ್ಯದಲ್ಲೇ ಬಿದ್ದು ಪೆಟ್ಟು ಮಾಡಿಕೊಂಡು ಸೀಸನ್ನಿಂದ ಹೊರಗುಳಿದಿದ್ದಾರೆ.
ಐಪಿಎಲ್‌ನಲ್ಲಿ ಆಡುವ ಆಟಗಾರರು ತಂಡದೊಂದಿಗೆ ವಿಮೆ ಮತ್ತು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರು ಗಾಯಗೊಂಡು ಪಂದ್ಯವನ್ನು ಆಡದಿದ್ದರೂ ಸಹ ಹಣ ಪಡೆಯುತ್ತಾರೆ. ಹೀಗಾಗಿ ತಂಡಕ್ಕೆ ನಷ್ಟವಾದರೂ ಆಟಗಾರರಿಗೆ ಆರ್ಥಿಕ ನಷ್ಟ ಇಲ್ಲ. ಈ ಬಾರಿಯ ಐಪಿಎಲ್‌ನಲ್ಲಿ 12 ಕ್ಕೂ ಹೆಚ್ಚು ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್‌ನ ಶಕೀಬ್-ಉಲ್-ಹಸನ್ ವೈಯಕ್ತಿಕ ಕಾರಣಗಳಿಂದ ತಮ್ಮ ಅಲಭ್ಯತೆ ವ್ಯಕ್ತಪಡಿಸಿದ್ದಾರೆ.
ಹೊರಗುಳಿದಿರುವ ಆಟಗಾರರ ಹೆಸರು ಗಾಯದಿಂದ ಹೊರಗುಳಿದಿರುವ ಆಟಗಾರರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ನಿಂದ ಇಬ್ಬರು ಹಾಗೂ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ತಲಾ ಒಬ್ಬರನ್ನು ಕಳೆದುಕೊಂಡಿದೆ. ಡೆಲ್ಲಿ ಮತ್ತು ಕೋಲ್ಕತ್ತಾ ಗಾಯದ ಸಮಸ್ಯೆಯಲ್ಲಿ ತಂಡದ ನಾಯಕರೇ ಹೊರಗುಳಿದಿದ್ದಾರೆ.
ಗಾಯಗೊಂಡ ಆಟಗಾರರಿವರು..:ಡೆಲ್ಲಿ ಕ್ಯಾಪಿಟಲ್ಸ್‌ನ ರಿಷಬ್ ಪಂತ್, ಮುಂಬೈ ಇಂಡಿಯನ್ಸ್ ಜಸ್ಪ್ರೀತ್ ಬುಮ್ರಾ ಮತ್ತು ರಿಚರ್ಡ್‌ಸನ್, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬಿಲ್ ಜಾಕ್ವೆಸ್ ಮತ್ತು ರಜತ್ ಪಾಟಿದಾರ್, ಚೆನ್ನೈ ಸೂಪರ್ ಕಿಂಗ್ಸ್ ಕೈಲ್ ಜೇಮ್ಸನ್ ಮತ್ತು ಮುಖೇಶ್ ಚೌಧರಿ, ರಾಜಸ್ಥಾನ್ ರಾಯಲ್ಸ್ ಪ್ರಸಿದ್ಧ ಕೃಷ್ಣ, ಪಂಜಾಬ್ ಕಿಂಗ್ಸ್‌ನ ಜಾನಿ ಬೈರ್‌ಸ್ಟೋವ್ ಮತ್ತು ರಾಜ್ ಅಂಗದ್ ಬಾಬಾ ಮತ್ತು ಕೋಲ್ಕತ್ತಾ ನೈಟ್ ರೈಡರ್‌ನ ಶ್ರೇಯಸ್ ಅಯ್ಯರ್ ಈ ಬಾರಿಯ ಐಪಿಎಲ್‌ನಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ.
ರಿಸೆ ಟೋಪ್ಲಿ, ಹ್ಯಾಜಲ್ ವುಡ್ ಆರೋಗ್ಯ ಹೇಗಿದೆ?:ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಥಮ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರಿಸೆ ಟೋಪ್ಲಿ ಬಲ ಭುಜದ ಗಾಯಕ್ಕೆ ತುತ್ತಾಗಿದ್ದರು. ಅವರ ಆರೋಗ್ಯದ ಬಗ್ಗೆ ಆರ್ಸಿಬಿ ಇನ್ನೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕೋಲ್ಕತ್ತಾ ವಿರುದ್ಧದ ಪಂದ್ಯಕ್ಕೆ ಟೋಪ್ಲಿ ಆಡುವುದು ಅನುಮಾನ. ಜೋಶ್ ಹ್ಯಾಜಲ್‌ವುಡ್ ಹಿಮ್ಮಡಿ ನೋವಿನ ಕಾರಣಕ್ಕೆ ತಂಡದಿಂದ ಹೊರಗುಳಿದಿದ್ದು, ಅವರು ಯಾವಾಗ ಫೀಲ್ಡಿಗೆ ಬರುತ್ತಾರೆ ಎಂಬುದನ್ನು ಫ್ರಾಂಚೈಸಿ ತಿಳಿಸಿಲ್ಲ. ಗಾಯದಿಂದ ಇವರಿಬ್ಬರೂ ಆರ್ಸಿಬಿಯಿಂದ ಹೊರಗುಳಿದರೆ ಬೆಂಗಳೂರು ನಾಲ್ವರನ್ನು ಕಳೆದುಕೊಳ್ಳಲಿದೆ.
ಇದನ್ನೂ ಓದಿ:ಭಾರತ ಕ್ರಿಕೆಟ್ ತಂಡದ ಮೂವರು ಸ್ಟಾರ್ ಆಟಗಾರರಿಗೆ ಗಾಯ: ಇವರ ಬದಲಿಗೆ ಯಾರು?