ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಸೀಸನ್ಗೆ ಮುಂಚಿತವೇ ನ್ಯೂಜಿಲೆಂಡ್ನ ಮಾಜಿ ವೇಗಿ ಶೇನ್ ಬಾಂಡ್ ಸಹಾಯಕ ಕೋಚ್ ಮತ್ತು ಬೌಲಿಂಗ್ ಕೋಚ್ ಆಗಿ ರಾಜಸ್ಥಾನ್ ರಾಯಲ್ಸ್ ತಂಡ ಸೇರಿದ್ದಾರೆ ಎಂದು ಫ್ರಾಂಚೈಸಿ ಸೋಮವಾರ ತಿಳಿಸಿದೆ. 48 ವರ್ಷದ ಶೆನ್ ಬಾಂಡ್ ಹಿಂದೆ 2012 ರಿಂದ 2015ರ ನಡುವೆ ನ್ಯೂಜಿಲೆಂಡ ತಂಡದಲ್ಲಿ ಬೌಲಿಂಗ್ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಕಿವಿಸ್ ಫೈನಲ್ ತಲುಪಲವಲ್ಲಿ ಬೌಲಿಂಗ್ ಕೋಚ್ ಬಾಂಡ್ ಪ್ರಮುಖ ಪಾತ್ರ ವಹಿಸಿದ್ದರು.
20215ರಲ್ಲಿ ಮುಂಬೈ ಇಂಡಿಯನ್ ತಂಡಕ್ಕೆ ನೇಮಕಗೋಮಡ ಅವರು ಒಂಬತ್ತು ಋತುಗಳಲ್ಲಿ ಮುಂಬೈ ತಂಡ ನಾಲ್ಕು ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಗಣನೀಯ ಕೊಡುಗೆ ನೀಡಿದರು. ಶೇನ್ ಬಾಂಡ್ ಗರಡಿಯಲ್ಲಿ ತರಬೇತಿ ಪಡೆದ ವೇಗಿ ಜಸ್ಪ್ರೀತ್ ಬುಮ್ರಾ, ಮಿಚೆಲ್ ಮೆಕ್ಲೆನಾಘನ್, ಟ್ರೆಂಟ್ ಬೌಲ್ಟ್ ಸೇರಿದಂತೆ ಹಲವಾರು ವೇಗಿಗಳು ಟಿ20 ಸ್ಪೆಷಲಿಸ್ಟ್‌ಗಳಾಗಿ ರೂಪಾಂತರಗೊಂಡರು.
ಇದೀಗ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವ ಅವರು ಟ್ರೆಂಟ್ ಬೌಲ್ಟ್ ಅವರೊಂದಿಗೆ ಮತ್ತೆ ಒಂದಾಗಲಿದ್ದಾರೆ. ಜೊತೆಗೆ ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ವೇಗಿಗಳಾದ ಪ್ರಸಿದ್ಧ್ ಕೃಷ್ಣ, ನವದೀಪ್ ಸೈನಿ, ಸಂದೀಪ್ ಶರ್ಮಾ, ಕುಲದೀಪ್ ಸೇನ್, ಓಬೇದ್ ಮೆಕಾಯ್, ಕೆಎಂ ಆಸಿಫ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ರಿಗೆ ಮತ್ತಷ್ಟು ಬಲ ಸಿಕ್ಕಂತಾಗಲಿದೆ.