ಚೆನ್ನೈ: ಸುರೇಶ್ ರೈನಾರನ್ನು ನಾನು 2022ರ ಮೆಗಾ ಹರಾಜಿನಲ್ಲಿ ನಾವೂ ಸ್ವಾದೀನಪಡಿಸಿಕೊಳ್ಳುವುದಕ್ಕೆ ಬಯಸಲಿಲ್ಲ, ಏಕೆಂದರೆ ಪ್ರಸ್ತುತ ನಮ್ಮ ತಂಡದ ಸಂಯೋಜನೆಗೆ ಫಿಟ್ ಆಗುವುದಿಲ್ಲ ಎಂದು ಹೇಳಿದ್ದಾರೆ.
2 ಕೋಟಿ ರೂ ಮೂಲಬೆಲೆಯುಳ್ಳ ಸುರೇಶ್ ರೈನಾ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದರು. 12 ವರ್ಷ ಸಿಎಸ್ಕೆ ಫ್ರಾಂಚೈಸಿಗೆ ಆಗಿದ್ದರಿಂದ ಮೂಲ ಬೆಲೆಗಾದರೂ ಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ, ಅವರು ಬಿಡ್ ಕೂಡ ಮಾಡಲಿಲ್ಲ. ಸಿಎಸ್ಕೆಯ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗೆ ಬೇಸರ ವ್ಯಕ್ತಪಡಿಸಿದ್ದರು.
ಈ ಕುರಿತು ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್, ರೈನಾ ಕಳೆದ 12 ಆವೃತ್ತಿಗಳಲ್ಲಿ ತಂಡದ ಸ್ಥಿರ ಆಟಗಾರ. ಖಂಡಿತಾ, ರೈನಾ ಅವರನ್ನು ಕಳೆದುಕೊಂಡಿರುವುದು ಬಹಳಾ ಬೇಸರ ತಂದಿದೆ. ಆದರೆ, ತಂಡದ ಸಂಯೋಜನೆ ಫಾರ್ಮ್ ಆಧಾರವನ್ನು ಅವಲಂಬಿಸಿರುತ್ತದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಯಾವುದೇ ತಂಡವಾದರೂ ಕೂಡ ಇದೇ ಫಾರ್ಮುಲಾ ಅನುಸರಿಸುತ್ತವೆ. ಹಾಗಾಗಿ ತಂಡದ ಈಗಿನ ಸಂಯೋಜನೆಗೆ ರೈನಾಗೆ ಸೂಕ್ತ ಸ್ಥಾನ ಹೊಂದಿಕೆಯಾಗುವುದಿಲ್ಲ ಎಂದು ನಾವು ಭಾವಿಸಿದೆವು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕೆಲವರು 40 ವರ್ಷವಾದರೂ ಐಪಿಎಲ್ ಆಡಿದ್ದರು, 35 ವರ್ಷದ ರೈನಾಗೆ ಒಂದು ಅವಕಾಶ ನೀಡಬಹುದಿತ್ತು : ಪಠಾಣ್