ಕರ್ನಾಟಕ

karnataka

ETV Bharat / sports

IPL: 2ನೇ ದಿನ ಲಿವಿಂಗ್​ಸ್ಟೋನ್​ಗೆ ಜಾಕ್​ಪಾಟ್; 11.5 ಕೋಟಿ ರೂಗೆ ಖರೀದಿಸಿದ ಪಂಜಾಬ್​

1 ಕೋಟಿ ರೂ ಮೂಲಬೆಲೆ ಹೊಂದಿದ್ದ ಲಿವಿಂಗ್​ಸ್ಟೋನ್​ ಅವರನ್ನು ಕಿಂಗ್ಸ್​ 11.50 ಕೋಟಿ ರೂ ನೀಡಿ ಖರೀದಿಸಿತು. ಇಂಗ್ಲೆಂಡ್‌ ಆಟಗಾರ ಕಳೆದ ವರ್ಷ ಕೇವಲ 75 ಲಕ್ಷ ರೂ.ಗೆ ರಾಜಸ್ಥಾನ್​ ರಾಯಲ್ಸ್​ ಪರ ಆಡಿದ್ದರು. ಸಂಪೂರ್ಣ ಲೀಗ್​ಗೆ ಲಭ್ಯರಿರುವುದರಿಂದ ಅವರನ್ನು ಕೊಳ್ಳುವುದಕ್ಕೆ ಭರ್ಜರಿ ಪೈಪೋಟಿ ನಡೆಯಿತು.

IPL mega auction: Liam Livingstone sold to Punjab Kings for 11.50cr
ಲಿಯಾಮ್ ಲಿವಿಂಗ್​ಸ್ಟೋನ್​ ಪಂಜಾಬ್ ಕಿಂಗ್ಸ್

By

Published : Feb 13, 2022, 12:56 PM IST

Updated : Feb 13, 2022, 2:28 PM IST

ಬೆಂಗಳೂರು: ಇಂಗ್ಲೆಂಡ್​ ಆಲ್​ರೌಂಡರ್​ ಲಿಯಾಮ್ ಲಿವಿಂಗ್​ಸ್ಟೋನ್​ 2ನೇ ದಿನದ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್, ಗುಜರಾತ್ ಲಯನ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಭಾರಿ ಪೈಪೋಟಿ ನಡೆಸಿದವು. ಕೊನೆಗೆ ಪಂಜಾಬ್​ ಕಿಂಗ್ಸ್ ಸ್ಫೋಟಕ ಆಟಗಾರನನ್ನು​ ಖರೀದಿಸುವಲ್ಲಿ ಯಶಸ್ವಿಯಾಯಿತು.

1 ಕೋಟಿ ರೂ ಮೂಲಬೆಲೆ ಹೊಂದಿದ್ದ ಲಿವಿಂಗ್​ಸ್ಟೋನ್​ ಅವರನ್ನು ಕಿಂಗ್ಸ್​ 11.50 ಕೋಟಿ ರೂ ನೀಡಿ ಖರೀದಿಸಿತು. ಲಿವಿಂಗ್​ಸ್ಟೋನ್​ ಕಳೆದ ವರ್ಷ ಕೇವಲ 75 ಲಕ್ಷ ರೂ.ಗಳಿಗೆ ರಾಜಸ್ಥಾನ್​ ರಾಯಲ್ಸ್​ ಪರ ಆಡಿದ್ದರು. ಸಂಪೂರ್ಣ ಲೀಗ್​ಗೆ ಲಭ್ಯರಿರುವುದರಿಂದ ಅವರನ್ನು ಕೊಳ್ಳುವುದಕ್ಕೆ ಭರ್ಜರಿ ಪೈಪೋಟಿ ನಡೆಯಿತು.

ಲಿವಿಂಗ್​ಸ್ಟೋನ್​ 164 ಟಿ20 ಪಂದ್ಯಗಳನ್ನಾಡಿದ್ದು 2 ಶತಕ ಮತ್ತು 23 ಅರ್ಧಶತಕಗಳ ಸಹಿತ 4095 ರನ್​ ಮತ್ತು 67 ವಿಕೆಟ್ ಪಡೆದಿದ್ದಾರೆ. ​ ಪಂಜಾಬ್ ಫ್ರಾಂಚೈಸಿ​ ಕನ್ನಡಿಗ ಮಯಾಂಕ್ ಅಗರ್ವಾಲ್​ರನ್ನು 14 ಕೋಟಿ ರೂ ಮತ್ತು ಅರ್ಶ್​ದೀಪ್​ ಸಿಂಗ್​ರನ್ನು 4 ಕೋಟಿ ರೂಗಳಿಗೆ ರಿಟೈನ್ ಮಾಡಿಕೊಂಡಿದೆ.

ಪಂಜಾಬ್ ಕಿಂಗ್ಸ್​ ಖರೀದಿಸಿರುವ ಆಟಗಾರರ ಪಟ್ಟಿ:

  • ರಾಹುಲ್ ಚಹಾರ್ -ಭಾರತೀಯ ಬೌಲರ್- ₹5,25,00,000
  • ಪ್ರಭಾಸಿಮ್ರಾನ್ -ಸಿಂಗ್ ಭಾರತೀಯ ವಿಕೆಟ್ ಕೀಪರ್ -₹60,00,000
  • ಜಿತೇಶ್ ಶರ್ಮಾ- ಭಾರತೀಯ ವಿಕೆಟ್ ಕೀಪರ್- ₹20,00,000
  • ಶಾರುಖ್ ಖಾನ್ -ಭಾರತೀಯ ಆಲ್ ರೌಂಡರ್- ₹9,00,00,000
  • ಕಗಿಸೊ ರಬಾಡ- ವಿದೇಶಿ ಬೌಲರ್- ₹9,25,00,000
  • ಹರ್‌ಪ್ರೀತ್ ಬ್ರಾರ್- ಭಾರತೀಯ ಆಲ್‌ರೌಂಡರ್- ₹3,80,00,000
  • ಇಶಾನ್ ಪೊರೆಲ್- ಭಾರತೀಯ ಬೌಲರ್- ₹25,00,000
  • ಶಿಖರ್ ಧವನ್- ಭಾರತೀಯ ಬ್ಯಾಟ್ಸ್‌ಮನ್ -₹8,25,00,000
  • ಲಿಯಾಮ್ ಲಿವಿಂಗ್‌ಸ್ಟೋನ್- ವಿದೇಶಿ ಆಲ್ ರೌಂಡರ್- ₹11,50,00,000
  • ಜಾನಿ ಬೈರ್‌ಸ್ಟೋವ್- ವಿದೇಶಿ ವಿಕೆಟ್ ಕೀಪರ್- ₹6,75,00,000

ಇದನ್ನೂ ಓದಿ:

ಮೂಲ ಬೆಲೆಗಿಂತಲೂ 22 ಪಟ್ಟು ಅಧಿಕ ಮೊತ್ತಕ್ಕೆ ಬಿಕರಿಯಾದ ಅನ್​​ಕ್ಯಾಪ್ಡ್​​ ಶಾರುಖ್ ಖಾನ್​!

ಐಪಿಎಲ್ ಮೆಗಾ ಹರಾಜು: ಯಾವ ತಂಡಕ್ಕೆ ಯಾವ ಪ್ಲೇಯರ್​... ಇಲ್ಲಿದೆ ಸಂಪೂರ್ಣ ಲಿಸ್ಟ್​

Last Updated : Feb 13, 2022, 2:28 PM IST

ABOUT THE AUTHOR

...view details