ಕರ್ನಾಟಕ

karnataka

ETV Bharat / sports

₹10 ಕೋಟಿಗೆ ಸೇಲ್​​... ಮೂಲ ಬೆಲೆಗಿಂತಲೂ 10 ಪಟ್ಟು ಅಧಿಕ ಪಡೆದ ಕನ್ನಡಿಗ ಪ್ರಸಿಧ್​ ಕೃಷ್ಣ - ಪ್ರಸಿದ್ಧ್ ಕೃಷ್ಣ ರಾಜಸ್ಥಾನ

ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ವೇಗದ ಬೌಲರ್ ಕನ್ನಡಿಗ ಪ್ರಸಿದ್ಧ್ ಕೃಷ್ಣನಿಗೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಜಾಕ್​ಪಾಟ್​ ಹೊಡೆದಿದೆ.

Prasidh krishna sold to Rajasthan royals
Prasidh krishna sold to Rajasthan royals

By

Published : Feb 13, 2022, 5:09 AM IST

ಬೆಂಗಳೂರು:ಇಂಡಿಯನ್​ ಪ್ರೀಮಿಯರ್ ಲೀಗ್​ನ ಹರಾಜು ಪ್ರಕ್ರಿಯೆಯಲ್ಲಿ ಕೆಲ ಕನ್ನಡಿಗರಿಗೆ ಅದೃಷ್ಟ ಲಕ್ಷ್ಮೀ ಒಲಿದು ಬಂದಿದ್ದು, ಕೋಟಿ ಕೋಟಿ ಬೆಲೆಗೆ ಬಿಕರಿಯಾಗಿದ್ದಾರೆ. ಅದರಲ್ಲಿ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣನಿಗೆ ಬಂಪರ್ ಲಾಟರಿ ಹೊಡೆದಿದೆ.

ಕಳೆದ ಕೆಲ ದಿನಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಅತ್ಯದ್ಭುತ ಬೌಲಿಂಗ್​ ಪ್ರದರ್ಶನ ನೀಡುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ 10 ಕೋಟಿ ರೂ.ಗೆ ಸೇಲ್​ ಆಗಿದ್ದಾರೆ. ಕಳೆದ ವರ್ಷದ ಐಪಿಎಲ್​ ಆವೃತ್ತಿಯಲ್ಲಿ ಕೋಲ್ಕತ್ತಾ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದ ಕೃಷ್ಣನಿಗೆ ರಿಟೈನ್ ಮಾಡಿಕೊಳ್ಳುವ ಬದಲು ಹರಾಜಿಗೋಸ್ಕರ ಬಿಡುಗಡೆ ಮಾಡಿತ್ತು. 1 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ಈ ಪ್ಲೇಯರ್​ ದಾಖಲೆಯ 10 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್​​​ ಸೇರಿಕೊಂಡಿದ್ದಾರೆ.

ಉತ್ತಮ ಫಾರ್ಮ್​ನಲ್ಲಿರುವ ಈ ಪ್ಲೇಯರ್​ಗೆ ಖರೀದಿ ಮಾಡಲು ರಾಜಸ್ಥಾನ ರಾಯಲ್ಸ್​ ಹಾಗೂ ಲಖನೌ ತಂಡದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಯದಾಗಿ ಈ ಯಂಗ್​ ಪ್ಲೇಯರ್​ಗೆ ಖರೀದಿ ಮಾಡುವಲ್ಲಿ ಹೊಸ ಫ್ರಾಂಚೈಸಿ ಯಶಸ್ವಿಯಾಗಿದೆ.

ಇದನ್ನೂ ಓದಿರಿ:ಐಪಿಎಲ್ ಹರಾಜು: ಸ್ಫೋಟಕ ಬ್ಯಾಟರ್​ ಡುಪ್ಲೆಸಿ ಸೇರಿ RCB ಸೇರಿದ ಹೊಸ ಪ್ಲೇಯರ್ಸ್ ಇವರು!

26 ವರ್ಷದ ಪ್ರಸಿದ್ಧ್ ಕೃಷ್ಣ ಈ ಹಿಂದೆ ಆರ್​ಸಿಬಿ ತಂಡದ ನೆಟ್​ ಬೌಲರ್​ ಆಗಿದ್ದರು. ಆದರೆ, 2018ರಲ್ಲಿ ಗಾಯದಿಂದಾಗಿ ಕೋಲ್ಕತ್ತಾ ತಂಡದಿಂದ ಕಮಲೇಶ್ ನಾಗರಕೋಟಿ ಹೊರಬೀಳುತ್ತಿದ್ದಂತೆ ಪ್ರಸಿದ್ಧ್ ಕೃಷ್ಣ ಕೆಕೆಆರ್​ ಸೇರಿಕೊಂಡಿದ್ದರು.

ಇಲ್ಲಿಯವರೆಗೆ ಕೆಕೆಆರ್​ ಪರ 34 ಪಂದ್ಯಗಳನ್ನಾಡಿರುವ ಈ ಪ್ಲೇಯರ್​ 12 ವಿಕೆಟ್​ ಪಡೆದುಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲೇ 10 ವಿಕೆಟ್​ ಕಬಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್​ಗೂ 7.75 ಕೋಟಿ ರೂ. ನೀಡಿ ಆರ್​ಆರ್ ಖರೀದಿ ಮಾಡಿದೆ.

ABOUT THE AUTHOR

...view details